ರಾಯ್ಪುರ:ಕರೊನಾ ಸೋಂಕಿನ ಕಾರಣ ಆತನನ್ನು ಆಸ್ಪತ್ರೆಯ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿತ್ತು. ಆದರೆರೆ ತನ್ನ ಪತ್ನಿಯ ಶೀಲ ಶಂಕಿಸಿದ ಆತ ಆಕೆಯ ಕೈಯನ್ನೇ ಕತ್ತರಿಸಿದ! ಅದು ಹೇಗೆ…?
ಛತ್ತೀಸ್​ಗಢದ ಜಾಸ್​ಪುರ ಜಿಲ್ಲೆಯ ನಿವಾಸಿ ಲಲಿತ್​ ಕೋರ್ವಾ (25) ಎಂಬಾತನಿಗೆ ಕರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಹತ್ತಿರದ ಆಸ್ಪತ್ರೆಯ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿತ್ತು.
ಇದನ್ನೂ ಓದಿ:ಭಾರಿ ಹಿಮಪಾತಕ್ಕೆ ಇಬ್ಬರು ಭಾರತೀಯ ಯೋಧರು ಹುತಾತ್ಮ
ಈತ ತನ್ನ ಪತ್ನಿ ಪಿಯಾರ್​ ಬಾಯ್​ ಮೊಬೈಲ್​ಫೋನ್​ಗೆ ಬುಧವಾರ ಕರೆ ಮಾಡಿದ್ದ. ಆದರೆ ಆಕೆಯ ಫೋನ್​ ಎಂಗೇಜ್​ ಆಗಿತ್ತು. ಇದರಿಂದ ಆತನಲ್ಲಿ ಅನುಮಾನ ಮತ್ತಷ್ಟು ಹೆಚ್ಚಾಗಿತ್ತು. ಹಾಗಾಗಿ ಕೋಪಗೊಂಡಿದ್ದ ಆತ ಆಕೆಗೆ ಪಾಠ ಕಲಿಸಬೇಕು ಎಂದು ನಿಶ್ಚಿಯಿಸಿದ್ದ.ಅದರಂತೆ ಆತ ಗುರುವಾರ ಉಪಾಯವಾಗಿ ಕ್ವಾರಂಟೈನ್​ ಸೌಲಭ್ಯದಿಂದ ಹೊರಬಂದು ಕಾಂಪೌಂಡ್​ ಗೋಡೆ ಹಾರಿ ಮನೆಗೆ ತೆರಳಿದ್ದ. ಆಗಲೂ ಆತನ ಪತ್ನಿ ಈತ ಬಂದಿದ್ದನ್ನು ಗಮನಿಸದೆ ಮೊಬೈಲ್​ಫೋನ್​ನಲ್ಲಿ ಮಾತನಾಡುತ್ತಿದ್ದಳು.
ಇದರಿಂದ ಮತ್ತಷ್ಟು ಸಿಟ್ಟಿಗೆದ್ದ ಆತ ಕೈಗೆ ಸಿಕ್ಕ ಕೊಡಲಿಯಿಂದ ಆಕೆ ಫೋನ್​ ಹಿಡಿದುಕೊಂಡಿದ್ದ ಕೈಯನ್ನು ಕತ್ತರಿಸಿದ. ಆಕೆ ಕಿರುಚಿಕೊಂಡಾಗ ತಕ್ಷಣವೇ ಆತ ಅಲ್ಲಿಂದ ಪರಾರಿಯಾಗಿದ್ದ.
ಇದನ್ನೂ ಓದಿ:22 ಬಂಡುಕೋರರನ್ನು ಭಾರತಕ್ಕೆ ಹಸ್ತಾಂತರಿಸಿದ ಮ್ಯಾನ್ಮಾರ್​
ಪಿಯಾರ್​ ಬಾಯಿ ಅವರ ಕಿರುಚಾಟ ಕೇಳಿಸಿಕೊಂಡ ನೆರೆಹೊರೆಯವರು ಆಕೆಯ ನೆರವಿಗೆ ಧಾವಿಸಿ, ಕಡಿದು ಹೋಗಿದ್ದ ಕೈಯೊಂದಿಗೆ ಆಸ್ಪತ್ರೆಗೆ ಕರೆದೊಯ್ದರು. ಆದರೂ, ಆಕೆಯ ಕೈಯನ್ನು ಮರುಜೋಡಿಸಲು ವೈದ್ಯರಿಗೆ ಸಾಧ್ಯವಾಗಲಿಲ್ಲ ಎನ್ನಲಾಗಿದೆ.
ದೂರು ದಾಖಲಿಸಿಕೊಂಡ ಭಗಿಚಾ ಪೊಲೀಸ್​ ಠಾಣೆಯ ಪೊಲೀಸರು ಲಲಿತ್​ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಆತನನ್ನು ಮತ್ತೆ ಕ್ವಾರಂಟೈನ್​ ಸೌಲಭ್ಯದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾತಾಡುವುದರಿಂದಲೂ ಹರಡುತ್ತಂತೆ ಕರೊನಾ: ಮುಚ್ಚಿದ ಪೆಟ್ಟಿಗೆಯಲ್ಲಿ ನಡೆಯಿತು ಸಂಶೋಧನೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
