ರಾಯ್ಪುರ/ನವದೆಹಲಿ:ಕೋವಿಡ್​ ಲಾಕ್​ಡೌನ್​ ಹಿನ್ನೆಲೆಯಲ್ಲಿ ದುಡಿಮೆಯೂ ಇಲ್ಲದೆ, ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದೆ ನಮ್ಮೂರು ತಲುಪಿದರೆ ಸಾಕು ಎಂದು ವಲಸೆ ಕಾರ್ಮಿಕರು ತಮ್ಮ ತಮ್ಮ ಊರುಗಳಿಗೆ ಮರಳುತ್ತಿದ್ದಾರೆ. ಬಸ್​, ರೈಲು ಸೌಲಭ್ಯ ಇಲ್ಲದ ಕಾರಣ ತಮ್ಮ ಊರಿಗೆ ಹೋಗಲು ಸರಕು ಸಾಗಣೆ ಟ್ರಕ್​ಗಳನ್ನು ಆಶ್ರಯಿಸುತ್ತಿದ್ದಾರೆ.
ದಾರಿಯಲ್ಲಿ ಬರುವ ಟ್ರಕ್​ಗಳ ಚಾಲಕರನ್ನು ಕಾಡಿಬೇಡಿ, ಅವರು ಕೇಳಿದಷ್ಟು ಹಣಕೊಟ್ಟು, ಕೂರಲು ಇರುವ ಸ್ವಲ್ಪ ಸ್ಥಳದಲ್ಲೇ ಕುಳಿತು ತಮ್ಮ ಊರಿಗೆ ಹೋಗುತ್ತಿದ್ದಾರೆ. ಹೀಗೆ ಒಂದು ಕುಟುಂಬ ಟ್ರಕ್​ ಏರುವ ಮುನ್ನ ಲಾರಿಯ ಕ್ಲೀನರ್​ ಕೈಗೆ ಕೊಡುವ ಎಳೆ ಮಕ್ಕಳನ್ನು, ಮೂಟೆಗಳ ರೀತಿಯಲ್ಲಿ ಲಾರಿಯ ಮೇಲೆ ಎಸೆಯುತ್ತಿರುವ ದೃಶ್ಯ ಎಂಥ ಕಲ್ಲೆದೆಯ ಮನುಷ್ಯನನ್ನೂ ಕರಗಿಸುತ್ತದೆ.
ಛತ್ತೀಸ್​ಗಢದಲ್ಲಿ ಕಂಡುಬಂದ ಈ ದೃಶ್ಯ, ತಮ್ಮ ಊರಿಗೆ ಮರಳಬೇಕೆಂದು ಪಣ ತೊಟ್ಟಿರುವ ವಲಸೆ ಕಾರ್ಮಿಕರ ದುಃಸ್ಥಿತಿ ಎಂಥದ್ದು ಎಂಬುದನ್ನು ತೋರಿಸಿಕೊಡುತ್ತದೆ. ಒಂದು ಕೈಯಲ್ಲಿ ಹಗ್ಗವನ್ನು ಹಿಡಿದಿರುವ ವ್ಯಕ್ತಿ ಇನ್ನೊಂದು ಕೈಯಲ್ಲಿ ಎಳೆ ಮಗುವನ್ನು ಪಡೆದುಕೊಂಡು, ಅದನ್ನು ಮೂಟೆಯಂತೆ ಟ್ರಕ್​ನ ಮೇಲಕ್ಕೆ ಎಸೆಯುವ ವಿಡಿಯೋ ತುಣಕನ್ನು ವ್ಯಕ್ತಿಯೊಬ್ಬರು ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣ ಟ್ವಿಟರ್​ನಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಮನೆ ಬಾಗಿಲಿಗೇ ಸರಬರಾಜಾಗಲಿದೆ ಮದ್ಯ
ಇದೇ ದೃಶ್ಯದ ಮತ್ತೊಂದು ಭಾಗದಲ್ಲಿ ಸೀರೆಯುಟ್ಟಿರುವಾಕೆ ಹಗ್ಗ ಹಿಡಿದು ಟ್ರಕ್​ ಮೇಲೇರಲು ಪಡಿಪಾಟಲು ಪಡುತ್ತಾಳೆ.
ತಾವೆಲ್ಲರೂ ತೆಲಂಗಾಣದಲ್ಲಿ ದಿನಗೂಲಿ ಕೆಲಸ ಮಾಡಿಕೊಂಡಿದ್ದವರು. ಲಾಕ್​ಡೌನ್​ ಹಿನ್ನೆಲೆಯಲ್ಲಿ ಜಾರ್ಖಂಡ್​ನಲ್ಲಿರುವ ಮನೆಗೆ ಮರಳಲು ಯತ್ನಿಸುತ್ತಿದ್ದೇವೆ. ಅಲ್ಲಿಗೆ ತೆರಳಲು ಬಸ್​, ರೈಲು ಸೌಕರ್ಯ ಇಲ್ಲದ ಕಾರಣ ಛತ್ತೀಸಗಢದಲ್ಲಿ ಸಿಕ್ಕ ಟ್ರಕ್​ ಅನ್ನು ಹತ್ತುತ್ತಿರುವುದಾಗಿ ಕಾರ್ಮಿಕರು ಅಲವತ್ತುಕೊಂಡಿದ್ದಾರೆ.
ವಲಸೆ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಶ್ರಮಿಕ್​ ಸ್ಪೆಶಲ್​ ರೈಲುಗಳ ಸಂಚಾರ ಏರ್ಪಡಿಸಿರುವ ಬಗ್ಗೆ ಗಮನಸೆಳೆದಾಗ, ತಮಗೆ ಆ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ. ಹಾಗಾಗಿ, ಸಿಕ್ಕ ಟ್ರಕ್​ಗಳನ್ನು ಹತ್ತಿಕೊಂಡು ಊರಿಗೆ ಹೋಗುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
heart-breaking picture showing a man holding an infant in one hand as he clings on to a rope hanging on the vehicle with another in raipur@ndtvindia@ndtv#NursesDay#LockdownEnd#COVID19pic.twitter.com/F4YhUWLyA0— Anurag Dwary (@Anurag_Dwary)May 12, 2020
heart-breaking picture showing a man holding an infant in one hand as he clings on to a rope hanging on the vehicle with another in raipur@ndtvindia@ndtv#NursesDay#LockdownEnd#COVID19pic.twitter.com/F4YhUWLyA0
ಲಾಕ್​ಡೌನ್​ನಲ್ಲೇ ಸೂಪರ್​ಸ್ಟಾರ್​ ರಜನಿಕಾಂತ್​ ಕಡೆಯಿಂದ ಬಂತು ಸಿಹಿಸುದ್ದಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three + 16 =
Remember me
