ವಿಕಾರಾಬಾದ್​:ತನ್ನ ಮನೆಗೆ ಹೋಗಲು ಬಸ್ಸಿಲ್ಲವೆಂಬ ಕಾರಣಕ್ಕೆ ಕಳ್ಳನೊಬ್ಬ ಸರ್ಕಾರಿ ಬಸ್ಸನ್ನೇ ಕದ್ದಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ.
ಭಾನುವಾರ ರಾತ್ರಿ 9 ಗಂಟೆಗೆ ತಾಂಡೂರು ಡಿಪೋದಿಂದ ಓಗಿಪುರಕ್ಕೆ ಟಿಎಸ್​ಆರ್​ಟಿಸಿ ಬಸ್​ ಹೊರಟಿತ್ತು. ಆ ಊರಿಗೆ ಕೊನೆಯ ಬಸ್​ ಆಗಿದ್ದ ಅದರಲ್ಲಿ 15 ಜನ ಪ್ರಯಾಣಿಕರು ಕುಳಿತಿದ್ದರು. ಬಸ್ಸಿನ ಡ್ರೈವರ್​ ಮತ್ತು ಕಂಡಕ್ಟರ್​ ಊಟ ಮಾಡುವುದಕ್ಕೆಂದು ಹೋಟೆಲ್​ನಲ್ಲಿ ಕುಳಿತಿದ್ದರು. ಈ ಸಮಯಕ್ಕೆ ಬಸ್ಸಿನ ಡ್ರೈವರ್​ ಸೀಟನ್ನು ಹತ್ತಿದ ಕಳ್ಳ ಬಸ್ಸನ್ನು ಸ್ಟಾರ್ಟ್​ ಮಾಡಿ ಓಡಿಸಲಾರಂಭಿಸಿದ್ದಾನೆ. ಮೊದಲಿಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಆತ ಬಸ್ಸಿನ ಡ್ರೈವರ್​ ಅಲ್ಲ ಎನ್ನುವುದು ತಿಳಿದರಲಿಲ್ಲವಂತೆ. ಕಂಠ ಪೂರ್ತಿ ಕುಡಿದಿದ್ದ ಕಳ್ಳ ಬಸ್ಸನ್ನು ಹೇಗೆಂದರೇಗೆ ಓಡಿಸಲಾರಂಭಿಸಿದಾಗ ಪ್ರಯಾಣಿಕರು ಆತನನ್ನು ಕಂಡಕ್ಟರ್​ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಕಂಡಕ್ಟರ್​ಗೆ ಹುಷಾರಿಲ್ಲ. ನೀವು ನನಗೇ ಹಣ ನೀಡಿ ಎಂದು ಹೇಳಿದ್ದಾನೆ. ಅನುಮಾನ ಬಂದ ಪ್ರಯಾಣಿಕರು ಡಿಪೋ ಮ್ಯಾನೇಜರ್​ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ.
ಇತ್ತ ಊಟ ಮುಗಿಸಿ ಬಂದ ಡ್ರೈವರ್​ ಮತ್ತು ಕಂಡಕ್ಟರ್​ ತಮ್ಮ ಬಸ್​ ಎಲ್ಲಿ ಎಂದು ಹುಡುಕಿದ್ದಾರೆ.
ತನ್ನ ಊರಿಗೆ ಬಸ್ಸನ್ನು ತೆಗೆದುಕೊಂಡು ಹೋದ ಕಳ್ಳ ಬಸ್ಸಿಂದಿಳಿದು ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪ್ರಕಣವನ್ನು ದಾಖಲಿಸಿಕೊಂಡಿದ್ದು ಕಳ್ಳನನ್ನು ಗುರುತಿಸಿ ಹುಡುಕಾಟ ನಡೆಸುತ್ತಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − eight =
Remember me
