ಮೀರತ್​:ಮಗನಿಗೆ ಮದುವೆ ಮಾಡಿ, ಮನೆ ತುಂಬಿಸಿಕೊಂಡಿದ್ದ ಸೊಸೆಯನ್ನು ಕೀಳಾಗಿ ಕಂಡ ಮಾವನೊಬ್ಬ ಹಾದಿಯ ಹೆಣವಾಗಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದೆ. ಮೃತನ ಮಗನೇ ಕೊಲೆ ಮಾಡಿರುವುದಾಗಿ ಪೊಲೀಸರ ಎದುರು ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ:ಎಟಿಎಂ ಕೀಪ್ಯಾಡ್​ ನೆಕ್ಕಿ ಅಶ್ಲೀಲ ಪದ ಪ್ರಯೋಗಿಸಿದ ಅಪರಿಚಿತ: ಬೆಚ್ಚಿಬಿದ್ದ ಮಹಿಳೆಯಿಂದ ದೂರು!ಮೀರತ್​ನ ಖಾಟಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಮೃತ ವ್ಯಕ್ತಿ ಕಲ್ಲು ಕೆತ್ತುವ ಕೆಲಸ ಮಾಡುತ್ತಿದ್ದನಂತೆ. ಆತ ಮಗನಿಗೆ ಮದುವೆಯಾದಾಗಿನಿಂದ ಎಲ್ಲ ತಪ್ಪಿಗೂ ಸೊಸೆಯನ್ನು ದೂರುತಿದ್ದನಂತೆ. ಸಾಲ ಮಾಡಿ ಮದುವೆ ಮಾಡಿದ್ದರಿಂದ, ನಿನ್ನಿಂದಲೇ ಸಾಲವಾಯಿತು ಎಂದು ಸೊಸೆಗೆ ಬೈಯುತ್ತಿದ್ದನಂತೆ. ಪ್ರೀತಿಯ ಹೆಂಡತಿಗೆ ಅಪ್ಪ ಬೈಯುವುದನ್ನು ಕಂಡು ಬೇಸತ್ತಿದ್ದ ಮಗ ಜನವರಿ 19ರಂದು ಆತನನ್ನು ಕೊಲೆ ಮಾಡಿದ್ದಾನೆ. ಮೊದಲು ಉಸಿರುಗಟ್ಟಿಸಿ ಸಾಯಿಸಿ ಆಮೇಲೆ ಆತನ ತಲೆ ಮೇಲೆ ಕಲ್ಲು ಎತ್ತಾಕಿ ಕೊಲೆ ಮಾಡಿದ್ದಾನೆ. ನಂತರ ಆತನ ದೇಹವನ್ನು ಊರಿನ ಹೊರಗೆ ಎಸೆದು ಬಂದಿದ್ದಾನೆ.
ಮೃತದೇಹ ಸಿಕ್ಕ ನಂತರ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಆಗ ಮಗ ತನಗೆ ಏನೂ ಗೊತ್ತಿಲ್ಲವೆಂದು ನಾಟಕವಾಡಿದ್ದಾನೆ. ಆತನ ಮೇಲೆ ಅನುಮಾನ ಬಂದಿದ್ದು, ಪೊಲೀಸ್​ ಠಾಣೆಗೆ ಎಳೆದುತಂದು ವಿಚಾರಣೆ ನಡೆಸಿದಾಗ ನಿಜ ಘಟನೆಯನ್ನು ಬಾಯಿ ಬಿಟ್ಟಿದ್ದಾನೆ. ಇದೀಗ ಆತನನ್ನು ಬಂಧಿಸಿ, ಪೊಲೀಸರ ವಶದಲ್ಲಿ ಇರಿಸಿಕೊಳ್ಳಲಾಗಿದೆ. (ಏಜೆನ್ಸೀಸ್​)
ಹೊಲಕ್ಕೆ ಹೋದ ಯುವತಿಯ ಮೇಲೆ ಗ್ಯಾಂಗ್​ ರೇಪ್​! ಗುಪ್ತಾಂಗಕ್ಕೆ ಬಾಟೆಲ್​ ತುಂಬಿದ ಪಾಪಿಗಳು!

ತಂದೆ ಪ್ರಾಂಶುಪಾಲ, ತಾಯಿ ಗಣಿತದಲ್ಲಿ ಗೋಲ್ಡ್​ ಮೆಡಲಿಸ್ಟ್: ಆದ್ರೂ ಹೆತ್ತಮಕ್ಕಳ ಬಲಿ ಹಿಂದಿರುವ 3ನೇ ವ್ಯಕ್ತಿ ಯಾರು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × one =
Remember me
