ಪುಣೆ:ಚಿಕ್ಕ ವಯಸ್ಸಿನ ಸೆಳೆತ ಎಂದೆಂದಿಗೂ ಮಾಸುವುದಲ್ಲ ಅನ್ನುತ್ತಾರೆ. ಅದೇ ರೀತಿ ಪುಣೆಯ ಯುವಕನೊಬ್ಬನಿಗೆ ಚಿಕ್ಕ ವಯಸ್ಸಿದ್ದಾಗಲೇ ನೆರೆ ಮನೆಯ ಮಗಳ ಮೇಲೆ ಕ್ರಷ್​ ಆಗಿತ್ತು. ತನ್ನ ಪ್ರೀತಿ ಹೇಳಿಕೊಳ್ಳುವ ಮೊದಲೇ ಮದುವೆಯಾದ ಕ್ರಷ್​ ಮೇಲೆ ಸಿಟ್ಟಿಗೆದ್ದ ಯುವಕ ಮಾಡಿದ್ದು ಮಾತ್ರ ಅತ್ಯಂತ ಹೀನಾಯ ಕೆಲಸ.
ಇದನ್ನೂ ಓದಿ:ಮನೆಯವರನ್ನು ಕೊಲೆ ಮಾಡುವುದಾಗಿ ಹೆದರಿಸಿ ಅಪ್ರಾಪ್ತೆಯ ಮೇಲೆ ನಿರಂತರ ಅತ್ಯಾಚಾರವೆಸಗಿದ ಯುವಕ
ಆರೋಪಿ ಮತ್ತು ಸಂತ್ರಸ್ತೆ ಇಬ್ಬರೂ ಚಿಕ್ಕ ವಯಸ್ಸಿನಿಂದ ಒಟ್ಟಿಗೆ ಆಟವಾಡಿಕೊಂಡು ಬೆಳೆದಿದ್ದರು. ಒಟ್ಟಿಗೆ ಓದುತ್ತಿದ್ದ ಅವರಲ್ಲಿ ಸ್ನೇಹ ಬಿಟ್ಟು ಬೇರೇನೂ ಇರಲಿಲ್ಲ. ಆದರೆ ಆರೋಪಿಗೆ ಬರುಬರುತ್ತಾ ಆಕೆಯ ಮೇಲೆ ಪ್ರೀತಿ ಹುಟ್ಟಿದೆ. ಆಕೆಯ ಮೇಲೆ ಕ್ರಷ್​ ಬೆಳೆಸಿಕೊಂಡಿದ್ದಾನೆ.
ಸಂತ್ರಸ್ತೆಗೆ ಮದುವೆ ವಯಸ್ಸು ಬಂದಿದ್ದ ಹಿನ್ನೆಲೆಯಲ್ಲಿ ಕಳೆದ ಜೂನ್​ ತಿಂಗಳಲ್ಲಿ ಆಕೆಗೆ ಮದುವೆ ಮಾಡಲಾಗಿದೆ. ಇದರಿಂದಾಗಿ ಆರೋಪಿ ಸಾಕಷ್ಟು ಬೇಸರಗೊಂಡಿದ್ದಾನೆ. ಪ್ರೀತಿ ಹೇಳಿಕೊಳ್ಳುವ ಮೊದಲೇ ಆಕೆ ಬೇರೊಬ್ಬನಿಗೆ ಮದುವೆಯಾದಳಲ್ಲ ಎಂದು ಬೇಸರವಾಗಿದ್ದಾನೆ. ಮದುವೆ ಮಾಡಿಕೊಂಡು ಗಂಡನ ಮನೆ ಸೇರಿದ ಮಹಿಳೆ ನವೆಂಬರ್​ನಲ್ಲಿ ತವರು ಮನೆಗೆ ಬಂದಿದ್ದಾಳೆ. ಆ ಸಮಯದಲ್ಲಿ ಆಕೆಗೆ ತನ್ನನ್ನು ಭೇಟಿ ಮಾಡುವಂತೆ ಆರೋಪಿ ಕೇಳಿದ್ದಾನೆ. ಅದರಂತೆ ನವೆಂಬರ್​ 21ರಂದು ಆಕೆ ಆರೋಪಿಯನ್ನು ಭೇಟಿ ಮಾಡಿದ್ದಾಳೆ.
ಇದನ್ನೂ ಓದಿ:ಧೈರ್ಯವಿದ್ದರೆ ನನ್ನನ್ನು ಬಂಧಿಸಿ, ಜೈಲಿನಲ್ಲಿದ್ದೇ ಗೆದ್ದು ತೋರಿಸುತ್ತೇನೆ; ಬಿಜೆಪಿಗೆ ಮಮತಾ ಸವಾಲ್​
ಬಾಲ್ಯದ ಸ್ನೇಹಿತನನ್ನು ಭೇಟಿ ಮಾಡಿದ ಮಹಿಳೆ ಸ್ನೇಹದಿಂದಲೇ ಮಾತು ಆರಂಭಿಸಿದ್ದಾಳೆ. ಆದರೆ ಆರೋಪಿ ಸ್ನೇಹದ ಹೊರೆತಾಗಿ ಬೇರೆ ವಿಚಾರ ತೆಗೆದಿದ್ದಾನೆ. ನೀನು ನನ್ನ ಜತೆ ಸಂಬಂಧ ಬೆಳೆಸಿಕೋ. ಮುಂದೆ ನಾವು ಮದುವೆಯಾಗೋಣ ಎಂದು ಕೇಳಿದ್ದಾನೆ. ಇದರಿಂದಾಗಿ ಸಿಟ್ಟಿಗೆದ್ದ ಮಹಿಳೆ, ಇನ್ನು ಮುಂದೆ ನನ್ನೊಂದಿಗೆ ಮಾತನಾಡಬೇಡ ಎಂದು ಬೈದು ಹೊರಡಲು ಸಿದ್ಧಳಾಗಿದ್ದಾಳೆ. ಆಗ ಆರೋಪಿ, ಆಕೆಯ ಮುಖದ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದಾನೆ.
ಆ್ಯಸಿಡ್​ ಅಷ್ಟೊಂದು ಪರಿಣಾಮಕಾರಿಯಾಗಿಲ್ಲದ ಕಾರಣ ಮಹಿಳೆಗೆ ಹೆಚ್ಚಿನ ಸಮಸ್ಯೆಯಾಗಿಲ್ಲ. ಮುಖದ ಶೇ. 7 ಭಾಗ ಸುಟ್ಟಿರುವುದಾಗಿ ವೈದ್ಯರ ತಿಳಿಸಿದ್ದಾರೆ. ಸದ್ಯ ಮಹಿಳೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. (ಏಜೆನ್ಸೀಸ್​)
VIDEO| ರಸ್ತೆ ಮೇಲೆ ರಾಜಾರೋಷವಾಗಿ ಓಡಾಡಿದ ಚಿರತೆ; ಸಿಸಿಟಿವಿಯಲ್ಲಿ ಸೆರೆಯಾಯ್ತು ಚಿರತೆಯ ಓಡಾಟ

ಟ್ರೋಫಿ ಮೇಲೆ ಮೂತ್ರ ಮಾಡಿ ಅವಮಾನಿಸಿದ್ದ ವ್ಯಕ್ತಿಗೇ ಸಿಕ್ಕಿತು ಗ್ರ್ಯಾಮಿ ಅವಾರ್ಡ್ಸ್​​ಗೆ ನಾಮಿನೇಶನ್​ ಭಾಗ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − thirteen =
Remember me
