ಗುವಾಹಟಿ:ವ್ಯಕ್ತಿಯೊಬ್ಬ ತನ್ನ ಹೆಂಡತಿ ಮತ್ತು ಅತ್ತೆಯನ್ನು ಮಕ್ಕಳೆದುರೇ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ತ್ರಿಪುರದ ಧಲಾಯಿ ಜಿಲ್ಲೆಯಲ್ಲಿ ನಡೆದಿದೆ. ಕೊಲೆ ಮಾಡಿದ ಸ್ವಲ್ಪ ಹೊತ್ತಲ್ಲೇ ಆತನೂ ಅಸ್ವಸ್ಥನಾಗಿ ಬಿದ್ದಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ:‘ಒಂದು ಕ್ರಿಕೆಟ್ ತಂಡಕ್ಕಾಗುವಷ್ಟು ಮಕ್ಕಳನ್ನು ಹೆರುವ ಆಸೆ ಇದೆ’; ಪ್ರಿಯಾಂಕಾ ಚೋಪ್ರಾ ಬಯಕೆ ಇದು!
ಧಲಾಯಿ ಜಿಲ್ಲೆಯ ಹಪಾನಿಯಾ ಗ್ರಾಮದಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಸೋಮವಾರ ಮನೆಗೆ ಬಂದ ವ್ಯಕ್ತಿ ಹೆಂಡತಿ ಮತ್ತು ಅತ್ತೆಗೆ ಚಾಕು ಚುಚ್ಚಿ ಕೊಲೆ ಮಾಡಿದ್ದಾನೆ. ನಂತರ ರೂಮಿನೊಳಗೆ ಹೋದ ಆತ ಅಸ್ವಸ್ಥನಾಗಿ ಬಿದ್ದಿದ್ದಾನೆ. ಇದನ್ನೆಲ್ಲ ನೋಡುತ್ತಿದ್ದ ಮಕ್ಕಳು ಜೋರಾಗಿ ಚೀರಿಕೊಂಡಿದ್ದಾರೆ. ಮಕ್ಕಳ ಚೀರಾಟ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಅಮ್ಮ ಮಗಳು ರಕ್ತದ ಮಡುವಿನಲ್ಲಿ ಬಿದ್ದಿರುವುದು ಕಂಡುಬಂದಿದೆ. ಹಾಗೆಯೇ ರೂಮಿನೊಳಗೆ ಅಸ್ವಸ್ಥನಾಗಿ ಬಿದ್ದಿದ್ದ ಆರೋಪಿ ಸಿಕ್ಕಿದ್ದು, ಆತನನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಯ ದೇಹದಲ್ಲಿ ವಿಷದ ಅಂಶ ಸೇರಿದ್ದಾಗಿ ತಿಳಿಸಲಾಗಿದೆ. ಸದ್ಯ ಆತ ಚೇತರಿಕೆಯ ಹಂತದಲ್ಲಿದ್ದು, ಪೂರ್ಣವಾಗಿ ಚೇತರಿಸಿಕೊಂಡ ನಂತರ ವಿಚಾರಣೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಕಕ್ಷೆ ಬಿಟ್ಟು ಹೊರನಡೆಯುತ್ತಿದೆ ಮಂಗಳ ಗ್ರಹ! ಭೂಮಿಯಲ್ಲೂ ಕಂಡುಬಂದ ವಿಚಿತ್ರ ಬೆಳವಣಿಗೆ!
ಕಳೆದ ಕೆಲ ತಿಂಗಳಿನಿಂದ ಮೃತ ಮಹಿಳೆ ಆಕೆಯ ಮಕ್ಕಳೊಂದಿಗೆ ತನ್ನ ತವರು ಮನೆಯಲ್ಲೇ ಜೀವನ ನಡೆಸುತ್ತಿದ್ದಳು. ಗಂಡ ಹೆಂಡತಿಯ ಮಧ್ಯೆ ಕೌಂಟುಬಿಕ ಕಲಹವಿದ್ದು, ವಿಚ್ಛೇದನ ಪ್ರಕ್ರಿಯೆಯೂ ನಡೆಯುತ್ತಿತ್ತು ಎನ್ನಲಾಗಿದೆ. ಅದೇ ಕಾರಣದಿಂದಾಗಿ ಕೊಲೆ ನಡೆದಿರುವ ಶಂಕೆ ಇದ್ದು, ತನಿಖೆಯ ನಂತರ ನಿಜಾಂಶ ಹೊರಬರಬೇಕಿದೆ. (ಏಜೆನ್ಸೀಸ್​)
ಮದ್ವೆಯಾಗಿ ಏಳೇ ತಿಂಗಳಲ್ಲಿ ಹೆಣವಾದಳು! 19 ವರ್ಷಕ್ಕೆ ದುರಂತ ಅಂತ್ಯ ಕಂಡ ಮಹಿಳೆ

ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four × one =
Remember me
