ಲಖನೌ:ಊಟದ ಜತೆಗೆ ಸಲಾಡ್​ ಕೊಡಲಿಲ್ಲ ಎನ್ನುವ ಕಾರಣಕ್ಕೆ ಪತಿ, ಪತ್ನಿಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದ ಗೋಗ್ವಾನ್ ಜಲಾಲ್‌ಪುರ ಗ್ರಾಮದಲ್ಲಿ ನಡೆದಿದೆ. ಘಟನೆಯಲ್ಲಿ ದಂಪತಿಯ ಮಗನಿಗೂ ಗಂಭೀರ ಗಾಯವಾಗಿರುವುದಾಗಿ ಹೇಳಲಾಗಿದೆ.
ಮಂಗಳವಾರ ರಾತ್ರಿ ಮುರುಳಿ ಕುಮಾರ್​ ಹೆಸರಿನ ವ್ಯಕ್ತಿ ಕಂಠ ಪೂರ್ತಿ ಕುಡಿದು ಮನೆಗೆ ಬಂದಿದ್ದಾನೆ. ಊಟ ಕೊಡಲು ಮುಂದಾದ ಹೆಂಡತಿ ಸುದೇಶ ದೇವಿ ಬಳಿ ನನಗೆ ಸಲಾಡ್​ ಕೊಡು ಎಂದು ಕೇಳಿದ್ದಾನೆ. ಆದರೆ ಸಲಾಡ್​ ಮಾಡಿಲ್ಲ ಎಂದು ಹೆಂಡತಿ ಹೇಳಿದ ಕಾರಣಕ್ಕೆ ದಂಪತಿ ನಡುವೆ ಜಗಳ ಆರಂಭವಾಗಿದೆ. ಜಗಳ ಹೆಚ್ಚಾದ ನಂತರ ಮುರುಳಿ ಮನೆಯಿಂದ ಹೊರ ನಡೆದಿದ್ದಾನೆ.
ಅದಾದ ಸ್ವಲ್ಪ ಸಮಯದಲ್ಲಿ ಹೆಂಡತಿ ಮಲಗಿದ್ದ ವೇಳೆ ಮುರುಳಿ ವಾಪಾಸು ಮನೆಗೆ ಬಂದಿದ್ದಾನೆ. ಮಲಗಿದ್ದ ಹೆಂಡತಿಗೆ ಮನಸೋಇಚ್ಛೆ ಹೊಡೆಯಲಾರಂಭಿಸಿದ್ದಾನೆ. ಹೆಂಡತಿ ಸಾಯುವ ಮಟ್ಟಕ್ಕೆ ಆಕೆಗೆ ಹೊಡೆದಿದ್ದಾನೆ. ಈ ವೇಳೆ ಅಡ್ಡಬಂದ 22 ವರ್ಷದ ಮಗ ಅಜಯ್​ ಮೇಲೂ ಹಲ್ಲೆ ಮಾಡಿದ್ದಾನೆ. ತಕ್ಷಣ ಹೆಂಡತಿ ಮತ್ತು ಮಗನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಆಕೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸದ್ಯ ಅಜಯ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಆರೋಪಿ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್)
ಶಿಲ್ಪಾನಾಗ್​ ರಾಜೀನಾಮೆಗೆ ಅಸಲಿ ಕಾರಣವೇನು? ರಾಜೀನಾಮೆಗೆ ಒಂದು ದಿನ ಮೊದಲೇ ಬಂದಿತ್ತು ನೋಟಿಸ್​!

ಮದುವೆಯಾಗಿ ಒಂದೂವರೆ ತಿಂಗಳಲ್ಲಿ ಯೂಟ್ಯೂಬರ್​ ಪತ್ನಿ ಆತ್ಮಹತ್ಯೆ! ಹಿಂಸೆ ಕೊಟ್ಟ ಗಂಡ ಪೊಲೀಸರ ಅತಿಥಿಯಾದ

17 ವರ್ಷದ ವಿದ್ಯಾರ್ಥಿಯೊಂದಿಗೆ ಓಡಿಹೋದ ಶಿಕ್ಷಕಿ! ದಿನಕ್ಕೆ ನಾಲ್ಕು ತಾಸು ಒಟ್ಟಿಗೇ ಕುಳಿತಿರುತ್ತಿದ್ದರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 2 =
Remember me
