ಮುಂಬೈ:ವ್ಯಕ್ತಿಯೊಬ್ಬ ಮಹಾರಾಷ್ಟ್ರದ ನವಿ ಮುಂಬೈ ಹೊಟೇಲ್​​​ನಲ್ಲಿ ಸುಮಾರು 8 ತಿಂಗಳುಗಳ ಕಾಲ ತಂಗಿದ್ದು, 25 ಲಕ್ಷ ರೂ. ಬಿಲ್ ಪಾವತಿ ಮಾಡದೆ ಪರಾರಿಯಾಗಿರುವ ಘಟನೆ ನಡೆದಿದೆ.
ಎಸ್ಕೇಪ್ ಆದವನು ಅಂಧೇರಿ ನಿವಾಸಿ ಮುರಳಿ ಕಾಮತ್ ಎಂದು ತಿಳಿದು ಬಂದಿದೆ. ಹೊಟೇಲ್​​ನವರು ಈತನ ವಿರುದ್ದ ದೂರು ನೀಡಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಪ್ರಕರಣದ ಹಿನ್ನೆಲೆ:
ಕಾಮತ್ ತಾನು ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಖಾರ್ಘರ್ ಪ್ರದೇಶದ ‘ಹೊಟೇಲ್ ತ್ರೀ-ಸ್ಟಾರ್’ ಸಿಬ್ಬಂದಿಗೆ ಹೇಳುವ ಮೂಲಕ ಎರಡು ಕೊಠಡಿಗಳನ್ನು ಬುಕ್ ಮಾಡಿದ್ದಾನೆ. ಅಲ್ಲದೇ ತನ್ನ 12 ವರ್ಷದ ಮಗನೊಂದಿಗೆ ನವೆಂಬರ್ 23 ರಿಂದ ಹೊಟೇಲ್​​ನಲ್ಲಿ ಉಳಿದುಕೊಂಡಿದ್ದಾನೆ.
ಕಳೆದ 8 ತಿಂಗಳ 25 ಲಕ್ಷ ರೂ. ಬಿಲ್ ನೀಡದೆ ತನ್ನ ಕೊಠಡಿ ಬಾತ್​​ರೂಂ ಕಿಟಕಿ ಹಾರಿ ಎಸ್ಕೇಪ್ ಆಗಿದ್ದಾನೆ. ಆತನ ಲ್ಯಾಪ್​​ಟಾಪ್ ಮತ್ತು ಮೊಬೈಲ್ ಫೋನ್ ಅನ್ನು ಕೋಣೆಯಲ್ಲಿ ಬಿಟ್ಟಿದ್ದು, ಈ ಸಂಬಂಧ ದೂರು ದಾಖಲಾಗಿದೆ.
ಎರಡು ಬಾರಿ ಲಸಿಕೆ ಪಡೆದರೂ ಬಾಲಿವುಡ್​​ ಖ್ಯಾತ ನಿರ್ಮಾಪಕಿಗೆ ಕರೊನಾ…

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:20 − eleven =
Remember me
