ಮೀರತ್​:ಮದುವೆಯಾದ ಮೇಲೆ ನನ್ನ ಪತ್ನಿ ಜೀನ್ಸ್​ ತೊಡಬಾರದು, ಎಲ್ಲರೆದುರು ಕುಣಿಯಬಾರದು ಎಂದು ಏನೇನೋ ಹುಚ್ಚು ಬಯಕೆಗಳನ್ನು ಇಟ್ಟುಕೊಂಡಿರುವ ಪುರುಷರ ಬಗ್ಗೆ ನೀವು ಕೇಳಿರುತ್ತೀರ. ಆದರೆ ಇಲ್ಲೊಬ್ಬ ವ್ಯಕ್ತಿ ಮಾತ್ರ ತನ್ನ ಪತ್ನಿ ಜೀನ್ಸ್​ ತೊಡುವುದಿಲ್ಲ, ಡ್ಯಾನ್ಸ್​ ಮಾಡುವುದಿಲ್ಲ ಎನ್ನುವ ಕಾರಣಕ್ಕೇ ಆಕೆಗೆ ತಲಾಖ್​ ನೀಡಿದ್ದಾನೆ. ಹೆಂತಿಗೆ ತಲಾಖ್​ ನೀಡಿದ ಪತಿರಾಯ, ಮಾವನ ಮನೆಗೆ ಬಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಪ್ರಯತ್ನ ಮಾಡಿದ್ದಾನೆ.
ಇದನ್ನೂ ಓದಿ:ಕ್ಯಾನ್ಸರ್​ ರೋಗಿಗೆ ಅದ್ಧೂರಿ ಮದುವೆ! ಮದುವೆಯಾದ ಕೆಲವೇ ದಿನಗಳಲ್ಲಿ ಬಯಲಾಯಿತು ರೋಗಿಯ ನಿಜ ಬಣ್ಣ
ಇಂತದ್ದೊಂದು ಘಟನೆ ಉತ್ತರ ಪ್ರದೇಶದ ಮೀರತ್​ ಜಿಲ್ಲೆಯಲ್ಲಿ ವರದಿಯಾಗಿದೆ. ನಗರದ ಲಿಸಾರಿ ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನ್ಯೂ ಇಸ್ಮಾಯಿಲ್​ನಗರದ ನಿವಾಸಿ ಅಮಿರುದ್ದೀನ್ ತನ್ನ ಮಗಳನ್ನು ಹಾಪುರದ ಪಿಲ್ಖುವಾ ನಿವಾಸಿ ಅನಸ್​ಗೆ ಎಂಟು ವರ್ಷಗಳ ಹಿಂದೆಯೇ ಮದುವೆ ಮಾಡಿ ಕೊಟ್ಟಿದ್ದರು. ಅನಸ್​ ದೆಹಲಿಯಲ್ಲಿ ಕೆಲಸದ ಮಾಡುತ್ತಿದ್ದ. ಈತ ಯಾವಾಗಲೂ ಪತ್ನಿಗೆ ಜೀನ್ಸ್​ ತೊಡಲು ಒತ್ತಾಯಿಸುತ್ತಿದ್ದನಂತೆ. ಡ್ಯಾನ್ಸ್​ ಮಾಡು, ಹಾಡು ಹೇಳು ಎಂದು ಪೀಡಿಸುತ್ತಿದ್ದನಂತೆ. ಆದರೆ ಅದಕ್ಕೆಲ್ಲ ಪತ್ನಿ ಒಪ್ಪತ್ತಿರಲಿಲ್ಲ. ಅದರಿಂದಾಗಿ ಸಿಟ್ಟಿಗೆದ್ದ ಅನಸ್​, ಡಿಸೆಂಬರ್​ 22ರಂದು ಪತ್ನಿಗೆ ತ್ರಿವಳಿ ತಲಾಖ್ ನೀಡಿದ್ದಾನೆ. ನಂತರ ಅಲ್ಲಿಂದ ಸೀದಾ ಅಮಿರುದ್ದೀನ್ ಮನೆಗೆ ಬಂದಿದ್ದಾನೆ.
ಇದನ್ನೂ ಓದಿ:6 ದಿನದ ಹಿಂದೆ ನಾಪತ್ತೆಯಾಗಿದ್ದ ತಾಯಿ-ಮಕ್ಕಳು ಊರ ಕೆರೆಯಲ್ಲಿ ಶವವಾಗಿ ಪತ್ತೆ!
ಅಮಿರುದ್ದೀನ್​ ಮನೆಗೆ 22ರ ರಾತ್ರಿ ಬಂದ ಅನಸ್​, ದೇಹದ ಮೇಲೆ ಯಾವುದೋ ದ್ರವ್ಯವನ್ನು ಸುರಿದುಕೊಂಡು, ಬೆಂಕಿ ಹಚ್ಚಿಕೊಂಡಿದ್ದಾನೆ. ಕೂಡಲೇ ಕುಟುಂಬಸ್ಥರು ಬೆಂಕಿ ನಂದಿಸಿದ್ದಾರೆ. ಈ ವಿಚಾರವಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಹೆಚ್ಚಿನ ತನಿಖೆ ನಡೆಸುತ್ತಿರುವುದಾಗಿ ತಿಳಿಸಿದ್ದಾರೆ. (ಏಜೆನ್ಸೀಸ್​)
ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six + fourteen =
Remember me
