ನವದೆಹಲಿ:ಪ್ರತಿದಿನ ಒಂದಿಲ್ಲೊಂದು ವಿಷಯಕ್ಕೆ ಪತ್ನಿ ಜಗಳ ತೆಗೆಯುತ್ತಿದ್ದರಿಂದ ಬೇಸತ್ತ 32 ವರ್ಷದ ಆತ ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದೆ. ಲಾಕ್​ಡೌನ್​ನಿಂದಾಗಿ ನಿರ್ಜನವಾಗಿರುವ ಫ್ಲೈಒವರ್​ ಮೇಲೆ ಹೋಗಿ ರಾತ್ರಿ 9 ಗಂಟೆಯಲ್ಲಿ ಸೇತುವೆಯ ತಡೆಗೋಡೆಯ ರೇಲಿಂಗ್​ ಹಿಡಿದು ಜೋತುಬಿದ್ದ…. ಮುಂದೇನಾಯಿತು?
ಸರಿಯಾಗಿ ಅದೇ ಸಮಯಕ್ಕೆ ಬೈಕ್​ ಪೆಟ್ರೋಲಿಂಗ್​ ಮೇಲೆ ಬಂದ ಇಬ್ಬರು ಪೊಲೀಸರು ಫ್ಲೈಓವರ್​ ತಡೆಗೋಡೆಯಿಂದ ಜೋತು ಬಿದ್ದಿದ್ದ ಈತನನ್ನು ಗಮನಿಸಿದರು. ತಕ್ಷಣವೇ ಹತ್ತಿರದಲ್ಲೇ ನಾಕಾಬಂದಿ ಕಾರ್ಯದಲ್ಲಿ ನಿರತರಾಗಿದ್ದ ತಮ್ಮ ಮೂವರು ಸಹೋದ್ಯೋಗಿಗಳನ್ನು ಫ್ಲೈಓವರ್​ನ ಕೆಳಭಾಗಕ್ಕೆ ಕರೆಯಿಸಿಕೊಂಡರು.
ಹಾಗೆ ಬಂದ ಮೂವರು ಸಿಬ್ಬಂದಿ, ಅದೇ ಮಾರ್ಗದಲ್ಲಿ ಕಸ ತುಂಬಿಕೊಂಡು ಬಂದ ದೆಹಲಿ ಮುನ್ಸಿಪಲ್​ ಟ್ರಕ್​ ಅನ್ನು ವ್ಯಕ್ತಿ ಜೋತು ಬಿದ್ದಿದ್ದ ಸ್ಥಳದ ಕೆಳಗೆ ನಿಲ್ಲಿಸಿ, ಬಿದ್ದರೂ ಆತನ ಪ್ರಾಣಕ್ಕೆ ಅಪಾಯವಾಗದಂತೆ ಮುನ್ನೆಚ್ಚರಿಕೆ ಕೈಗೊಂಡರು.
ಬಳಿಕ ಫ್ಲೈಓವರ್​ ಮೇಲಿದ್ದ ಇಬ್ಬರು ಪೊಲೀಸರು, ಜೋತು ಬಿದ್ದಿದ್ದ ವ್ಯಕ್ತಿಯ ಕೈಗಳನ್ನು ಹಿಡಿದು ಮೇಲೆತ್ತಿ ಆತನ ಪ್ರಾಣ ಕಾಪಾಡಿದರು. ನಂತರ ವಿಚಾರಿಸಿದಾಗ, ಜಗಳಗಂಟಿ ಪತ್ನಿಯ ವೃತ್ತಾಂತ ವಿವರಿಸಿದನಂತೆ.
ಇದಾಗಿದ್ದು ದೆಹಲಿಯಲ್ಲಿ. ಆದರೆ ಯಾವ ಫ್ಲೈಓವರ್​ ಮೇಲೆ ಎಂಬ ಮಾಹಿತಿಯನ್ನು ದೆಹಲಿ ಪೊಲೀಸರು ಬಹಿರಂಗಪಡಿಸಿಲ್ಲ.
ಟೀಮ್​ ಇಂಡಿಯಾದ ಮಾಜಿ ನಾಯಕ ಧೋನಿ ಮೈದಾನದಲ್ಲಿ ಸಿಟ್ಟಾಗಿದ್ದರಂತೆ, ಅದೂ 20 ವರ್ಷಗಳ ಬಳಿಕ; ಏಕೆ ಗೊತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + two =
Remember me
