ಮುಜಾಫರ್​ ನಗರ:ಪದೇಪದೆ ಲೈಂಗಿಕ ಕ್ರಿಯೆ ನಡೆಸುವಂತೆ ಪತ್ನಿಯನ್ನ ಪೀಡಿಸುತ್ತಿದ್ದ ವಿಕೃತ ಕಾಮಿಯೊಬ್ಬ ಸೆಕ್ಸ್​ ವಿಚಾರಕ್ಕೆ ಅಸಮಾಧಾನಗೊಂಡು ಪತ್ನಿಗೆ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ. ಬಳಿಕ ಮೂವರು ಅಪ್ರಾಪ್ತ ಹೆಣ್ಣು ಮಕ್ಕಳನ್ನೂ ನಾಲೆಗೆ ಎಸೆದಿದ್ದಾನೆ.
ಇಂತಹ ಅಮಾನವೀಯ ಘಟನೆ ಉತ್ತರ ಪ್ರದೇಶದ ಮುಜಾಫರ್​ನಗರದ ಬೇಸಿಂಡಿ ಗ್ರಾಮದಲ್ಲಿ ಮಂಗಳವಾರ ಸಂಭವಿಸಿದೆ. ಪಪ್ಪು ಕುಮಾರ್(37) ಕೊಲೆ ಆರೋಪಿ. ಈತನ ಪತ್ನಿ ಡಾಲಿ (36) ಕೊಲೆಯಾದ ದುರ್ದೈವಿ. ಈ ದಂಪತಿಗೆ ಸೋನಿಯಾ (5), ವನ್ಯ (3) ಮತ್ತು 15 ತಿಂಗಳ ಹರ್ಷಿತಾ ಸೇರಿ ಮೂವರು ಪುಟ್ಟ ಹೆಣ್ಣುಮಕ್ಕಳಿದ್ದರು. ಕಳೆದ 15 ದಿನದಿಂದ ಸೆಕ್ಸ್​ ಮಾಡಲು ಪತ್ನಿ ನಿರಾಕರಿಸುತ್ತಿದ್ದಳಂತೆ. ಇದೇ ವಿಚಾರಕ್ಕೆ ಗಂಡ ಪಪ್ಪುಕುಮಾರ್​ ಕುಪಿತಗೊಂಡು ಡಾಲಿಯನ್ನು ಶೂಟ್​ ಮಾಡಿ ಕೊಂದಿದ್ದಾನೆ.
ಪತ್ನಿಯನ್ನ ಕೊಂದ ಬಳಿಕ ಮನೆಯಲ್ಲಿದ್ದ ಹಾಲುಗಲ್ಲದ ಮೂರು ಕಂದಮ್ಮಗಳನ್ನು ಜೀವಂತವಾಗಿಯೇ ನಾಲೆಗೆ ಎಸೆದು ಪರಾರಿಯಾಗಿದ್ದ. ಸ್ಥಳೀಯರ ಮಾಹಿತಿ ಮೇರೆಗೆ ಸ್ಥಳಕ್ಕೆ ಬಂದ ಪೊಲೀಸರು ಮೂರು ಮಕ್ಕಳಿಗಾಗು ಹುಡುಕಾಟ ನಡೆಸಿದರೂ ಮೃತದೇಹಗಳು ಪತ್ತೆಯಾಗಲಿಲ್ಲ. ಪತ್ನಿ ಶವವನ್ನ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಅಂತ್ಯಸಂಸ್ಕಾರ ಮಾಡಲಾಗಿದೆ. ಕಾಮಕ್ಕಾಗಿ ಪತ್ನಿ-ಮಕ್ಕಳನ್ನೇ ಕೊಂದು ತಲೆಮರೆಸಿಕೊಂಡಿದ್ದ ಆರೋಪಿಯನ್ನ ಬುಧವಾರ ಪುರ್ಕಾಜಿ ಠಾಣೆ ಪೊಲೀಸರು ಬಂಧಿಸಿದ್ದಾರೆ.
ವಿಚಾರಣೆ ವೇಳೆ ಆರೋಪಿ ಪಪ್ಪುಕುಮಾರ್​, ಪತ್ನಿಯನ್ನ ಕೊಂದು ನಾಲೆಗೆ ಮಕ್ಕಳನ್ನು ಎಸೆದಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪುರ್ಕಜಿ ಪೊಲೀಸ್ ಠಾಣೆ ಅಧಿಕಾರಿ ದೇಶರಾಜ್ ಸಿಂಗ್ ತಿಳಿಸಿದ್ದಾರೆ.
ಬೆತ್ತಲೆ ಸ್ಥಿತಿಯಲ್ಲೇ ಕಂಬದಲ್ಲಿ ನೇತಾಡುತ್ತಿದ್ದ ಮಹಿಳೆ! ಬೆಳ್ಳಂಬೆಳಗ್ಗೆ ನಡೆದ ಈ ಕೃತ್ಯ ಕೇಳಿದ್ರೆ ಬೆಚ್ಚಿಬೀಳ್ತೀರಿ

ಗರ್ಭಿಣಿ ಕಣ್ಣೀರಿಟ್ಟರೂ ಅಡ್ಮಿಟ್​ ಮಾಡಿಕೊಳ್ಳಲಿಲ್ಲ, ಆಸ್ಪತ್ರೆ ಬಾಗಿಲಲ್ಲಿ ನಿಂತಿರುವಾಗಲೇ ಹೆರಿಗೆ, ಕೆಳಗೆ ಬಿದ್ದು ಮಗು ಸಾವು!

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ನಾನಂತೂ ಓದಿಲ್ಲ, ನೀನಾದ್ರೂ ಓದು ಎಂದು ಪತ್ನಿಯನ್ನ ಕೆಎಎಸ್​ ಅಧಿಕಾರಿ ಮಾಡಿಸಿದ್ದವ ಕರೊನಾಗೆ ಬಲಿ!

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:nine + fifteen =
Remember me
