ಲಖನೌ:ತಂದೂರಿ ರೊಟ್ಟಿ ಯಾರಿಗೆ ತಾನೆ ಇಷ್ಟವಿಲ್ಲ ಹೇಳಿ. ಹೋಟೆಲ್​ನಲ್ಲಿ ಟೇಬಲ್​ ಮೇಲೆ ತಂದೂರಿ ರೊಟ್ಟಿ ಜತೆಗೆ ಯಾವುದಾದರೂ ಕರಿ ಬಂದಿತೆಂದರೆ ಬಾಯಿ ಚಪ್ಪರಿಸಿಕೊಂಡು ತಿಂದುಬಿಡುತ್ತೇವೆ. ಆದರೆ ಕೆಲವು ಪಾಪಿಗಳು ಅದೆಷ್ಟರ ಮಟ್ಟಿಗೆ ಹೊಲಸು ಬುದ್ಧಿ ಇಟ್ಟುಕೊಂಡಿರುತ್ತಾರೆಂದರೆ, ಜನರು ತಿನ್ನುವ ರೊಟ್ಟಿಯಲ್ಲಿ ತಮ್ಮ ಎಂಜಲೇ ಇರಲಿ ಎನ್ನುವಷ್ಟು ಕೀಳಾಗಿ ಯೋಚಿಸುತ್ತಾರೆ.
ಉತ್ತರ ಪ್ರದೇಶದ ಗಾಜಿಯಾಬಾದ್​ ಜಿಲ್ಲೆಯ ಮುರಾದ್​ನಗರದಲ್ಲಿ ಇಂತದ್ದೇ ಒಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬ ಬಿಸಿಲಲ್ಲಿ ನಿಂತು ತಂದೂರಿ ರೊಟ್ಟಿ ತಯಾರಿಸುತ್ತಿದ್ದಾನೆ. ಆದರೆ ರೊಟ್ಟಿಯನ್ನು ಮಾಡುವಾಗ ಸುಮ್ಮನಾಗದ ಆತ, ಅದನ್ನು ಬೇಯಿಸುವ ಮೊದಲು ತನ್ನ ಎಂಜಲನ್ನು ಅದಕ್ಕೆ ತುಪ್ಪಿ ನಂತರ ಬೇಯಿಸುತ್ತಿದ್ದಾನೆ. ಈ ದೃಶ್ಯವಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್​ ಆಗಿದೆ.
ಈ ವಿಡಿಯೋವನ್ನು ಗಾಜಿಯಾಬಾದ್​ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದು, ಆ ಕೃತ್ಯ ಮಾಡಿದವನಿಗಾಗಿ ಬಲೆ ಬೀಸಿದ್ದಾರೆ. ಆತನ ಹೆಸರು ಮೊಹ್ಸಿನ್​ ಎಂದು ತಿಳಿದುಬಂದಿದ್ದು, ಅವನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ತಂದೂರಿ ರೊಟ್ಟಿ ತಿನ್ನೋರು ಈ ವಿಡಿಯೋ ನೋಡಿ..ಈ ರೀತಿ ಎಂಜಲು ತುಪ್ಪಿ ರೊಟ್ಟಿ ಮಾಡುತ್ತಿರುವ ಭೂಪ ಎಲ್ಲಿನವನು, ಈಗ ಅವನ ಸ್ಥಿತಿ ಏನಾಗಿದೆ ಎಂದು ತಿಳಿಯಲುhttps://t.co/JCps2efeGVನೋಡಿ….#Ghaziabad#TandooriRotipic.twitter.com/feJsVuXwIJ
— Vijayavani (@VVani4U)March 14, 2021

ಕ್ಷಣಕ್ಷಣದ ಮಾಹಿತಿಗಾಗಿವಿಜಯವಾಣಿಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

ಖಾಸಗಿ ವಿಡಿಯೋವನ್ನು ಮಾಧ್ಯಮಗಳಿಗೆ ನೀಡುವ ಬೆದರಿಕೆ! ಯುವಕನನ್ನು ಕೂಡಿ ಹಾಕಿ ಹಲ್ಲೆ ನಡೆಸಿದ ರೌಡಿ ಗ್ಯಾಂಗ್!

ರಾಬರ್ಟ್​ ಪೈರಸಿ: ಸುದೀಪ್​-ದರ್ಶನ್​ ಫ್ಯಾನ್ಸ್​ ನಡುವೆ ಕಿಡಿ ಹೊತ್ತಿಸಿದ ಆರೋಪಿ ಹೇಳಿಕೆ..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 + thirteen =
Remember me
