ಮುಂಬೈ:ಏಳು ವರ್ಷಗಳ ಹಿಂದೆ ಪ್ರಿಯತಮೆಯನ್ನೇ ಕೊಂದು ಕೊಚ್ಚಿ ಕೊಚ್ಚಿ ಎಸೆದಿದ್ದ ವ್ಯಕ್ತಿಗೆ ಇದೀಗ ಜೀವಾವಧಿ ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಅಪರಾಧಿಯಿಂದ 1.1 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದ್ದು ಅದರಲ್ಲಿ ಒಂದು ಲಕ್ಷ ಹಣವನ್ನು ಸಂತ್ರಸ್ತೆಯ ಮಗನಿಗೆ ನೀಡುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ಬೆತ್ತಲೆಯಾಗಿ ಸನ್​ಬಾತ್​ ಮಾಡುತ್ತಿದ್ದ ಮಾಡೆಲ್​! ಹೆಲಿಕಾಫ್ಟರ್​ನಿಂದ ವಿಡಿಯೋ ಶೂಟ್​ ಮಾಡಿದ್ದ ಪೊಲೀಸರ ವಿರುದ್ಧ ದೂರು
ಮುಂಬೈನಲ್ಲಿ ವಾಸವಿದ್ದ ಕಾಂತಾ ಶೆಟ್ಟಿ ಮತ್ತು ಪ್ರಭಾಕರ್​ ಶೆಟ್ಟಿಗೆ ಅಕ್ರಮ ಸಂಬಂಧವಿತ್ತು. ಇದೀಗ ಕಾಂತಾ ಶೆಟ್ಟಿಯ ಮಗ 16 ವರ್ಷದವನಾಗಿದ್ದಾನೆ. ಆತ 9 ವರ್ಷದನವಾಗಿದ್ದಾಗ ಅಂದರೆ 2013ರ ಅಕ್ಟೋಬರ್​ 20ರಂದು ಕಾಂತಾ ಶೆಟ್ಟಿ, ಪ್ರಭಾಕರನ ಮನೆಗೆ ಹೋಗುವುದಾಗಿ ಮಗನಿಗೆ ತಿಳಿಸಿ ಹೊರಟಿದ್ದಾಳೆ. ಆಕೆ ಸಾಕಿ ನಾಕಾದಲ್ಲಿರುವ ತನ್ನ ನಿವಾಸದಿಂದ ಹೊರಟು ಚೆಂಬೂರಿನಲ್ಲಿದ್ದ ಪ್ರಭಾಕರನ ಸ್ಟಾಫ್ ಕ್ವಾರ್ಟರ್ಸ್​ಗೆ ಪ್ರಯಾಣ ಬೆಳೆಸಿದ್ದಾಳೆ. ಅದಾದ ನಂತರ ಆಕೆ ಮನೆಗೆ ಬಂದಿಲ್ಲ. ಅನುಮಾನ ಬಂದ ಕಾಂತಾಳ ಸಹೋದರಿ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ಇದನ್ನೂ ಓದಿ:ಸಾರ್ವಜನಿಕವಾಗಿ ಸಿಗಲಿದೆ ವೈಫೈ! 1 ಕೋಟಿ ಪಿಡಿಒ ನಿರ್ಮಾಣಕ್ಕೆ ಕೇಂದ್ರ ಸಚಿವ ಸಂಪುಟ ಒಪ್ಪಿಗೆ
ಕಾಂತಾ, ಪ್ರಭಾಕರನ ಮನೆಗೆ ಬಂದಿದ್ದಾಗ ಅವರಿಬ್ಬರ ನಡುವೆ ಯಾವುದೋ ಕಾರಣಕ್ಕೆ ಜಗಳವಾಗಿದೆ. ಪ್ರಭಾಕರ್​ ಸಿಟ್ಟಿನಿಂದ ಕಾಂತಾಳ ಗಂಟಲು ಒತ್ತಿ ಸಾಯಿಸಿದ್ದಾನೆ. ನಂತರ ಆಕೆಯನ್ನು ಬಾತ್​ರೂಂಗೆ ಎಳೆದೊಯ್ದು ಅಲ್ಲಿ ಶವವನ್ನು ತುಂಡು ತುಂಡಾಗಿ ಕತ್ತರಿಸಿದ್ದಾನೆ. ರುಂದ ಮತ್ತು ಕೈ-ಕಾಲು, ಮುಂಡವನ್ನು ಮೂರು ಪ್ರತ್ಯೇಕ ಚೀಲಗಳಲ್ಲಿ ತುಂಬಿ ಮೂರು ಸ್ಥಳದಲ್ಲಿ ಒಗೆದಿದ್ದಾನೆ. ಪ್ರಭಾಕರ್​ ಚೀಲ ಒಗೆಯುವಾಗ ನೋಡಿದ್ದ ಸ್ಥಳೀಯರು ಆತನ ವಿರುದ್ಧ ಸಾಕ್ಷಿ ಹೇಳಿದ್ದಾರೆ. ಕಾಂತಾಳ ಮಗನೂ ಪ್ರಮುಖ ಸಾಕ್ಷಿದಾರನಾಗಿದ್ದು ಇದೀಗ ಆರೋಪಿಗೆ ಶಿಕ್ಷೆ ವಿಧಿಸಲಾಗಿದೆ. (ಏಜೆನ್ಸೀಸ್​)
ನಟಿ ದಿವ್ಯಾ ಸಾವಿಗೂ ಮುನ್ನ ಬರೆದಿಟ್ಟಿದ್ದ ಪತ್ರದಿಂದ ಬಯಲಾಯ್ತು ಪತಿಯ ನಿಜ ಬಣ್ಣ! ಅಪ್ತ ಸ್ನೇಹಿತೆ ಬಿಚ್ಚಿಟ್ಟ ರಹಸ್ಯ

ಮದುವೆಗೆ ಮೂರು ದಿನವಿದ್ದಾಗ ಮರ್ಮಾಂಗವೇ ಕಟ್! 1 ಲಕ್ಷಕ್ಕಾಗಿ ಜೀವನವನ್ನೇ ಹಾಳು ಮಾಡಿಕೊಂಡ ಯುವಕ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:six − three =
Remember me
