ಕೊಚ್ಚಿ:ಶಾಲಾ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ಆರೋಪ ಹೊತ್ತಿದ್ದ ವ್ಯಕ್ತಿಗೆ ನ್ಯಾಯಾಲಯವು ಜಾಮೀನು ನೀಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.
ಆರೋಪಿ ಸಫಾರ್​ ಶಾಗೆ ಕೇರಳ ಹೈಕೋರ್ಟ್​ ಬೇಲ್​ ನೀಡಿದೆ. ಈ ಪ್ರಕರಣದಲ್ಲಿ ಚಾರ್ಜ್​ಶೀಟ್​ ದಾಖಲಾಗಿಲ್ಲ ಎಂಬ ಆರೋಪಿ ಪರ ವಕೀಲನ ಮಾತಿಗೆ ಒಪ್ಪಿಗೆ ಸೂಚಿಸಿ ಕೋರ್ಟ್​ ಜಾಮೀನು ನೀಡಿದೆ. ಅಲ್ಲದೆ, ಪ್ರಕರಣದ ತನಿಖಾಧಿಕಾರಿಗಳನ್ನು ಚಾರ್ಜ್​ಶೀಟ್​ ದಾಖಲಿಸಲು ವಿಳಂಬ ಮಾಡಿದ್ದಾರೆಂದು ಟೀಕಿಸಿ, ಇದೊಂದು ಗಂಭೀರವಾದ ಅಪರಾಧ ಎಂದು ಕಿಡಿಕಾರಿದೆ. ವಿಪರ್ಯಾಸವೆಂದರೆ ತನಿಖಾಧಿಕಾರಿಗಳು ಪ್ರಕರಣ ನಡೆದ 90 ದಿನದ ಒಳಗಡೆಯೇ ಚಾರ್ಜ್​ಶೀಟ್​ ಅನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಇದನ್ನೂ ಓದಿ:ಬಿಎಸ್​ವೈಗೆ ಡಿಕೆಶಿ ಸವಾಲು.. ಅದೂ 24 ಗಂಟೆ ಗಡುವು ವಿಧಿಸಿ!
ಆರೋಪಿ ಸಫಾರ್​ ಶಾನನ್ನು ಶಾಲಾ ಬಾಲಕಿಯನ್ನು ಅಪಹರಣ ಮಾಡಿ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದಲ್ಲಿ ಜನವರಿ 8ರಂದು ಬಂಧಿಸಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಅಧಿಕಾರಿಗಳು ಏಪ್ರಿಲ್​ 8ಕ್ಕೂ ಮುಂಚೆಯೇ ಚಾರ್ಜ್​ಶೀಟ್​ ಅನ್ನು ದಾಖಲಿಸಿದ್ದರು.
ಆದಾಗ್ಯೂ, ಚಾರ್ಜ್​ಶೀಟ್​ ದಾಖಲಾಗಿದೆ ಎಂಬುದನ್ನು ತಿರಸ್ಕರಿಸಿದ ನ್ಯಾಯಾಲಯ ಆರೋಪಿ ಪರ ವಕೀಲನ ವಾದವನ್ನು ಎತ್ತಿಹಿಡಿದು ಜಾಮೀನು ನೀಡಿದೆ. ಇನ್ನೊಂದೆಡೆ ಪೊಲೀಸರು ಸಹ ಜಾಮೀನು ರದ್ದು ಕೋರಿ ಮತ್ತೊಂದು ಅರ್ಜಿಯನ್ನು ಸಲ್ಲಿಸಿದ್ದು, ಅದಕ್ಕೆ ಬೇಕಾದ ಪ್ರಕ್ರಿಯೆಗಳನ್ನು ಆರಂಭಿಸಿದ್ದಾರೆ.
ಇದನ್ನೂ ಓದಿ:ಪಾಕ್​ ಬೇಹುಗಾರಿಕೆ ಜಾಲ ಭೇದಿಸಿದ ಮಿಲಿಟರಿ ಇಂಟೆಲಿಜೆನ್ಸ್​
ಎರ್ನಾಕುಲಂ ಮೂಲದ ಶಾಲಾ ಬಾಲಕಿಯನ್ನು ಅಪಹರಿಸಿದ್ದ ಸಫಾರ್​ ಶಾ ಅತ್ಯಾಚಾರಗೈದು ಕೊಲೆ ಮಾಡಿದ್ದ. ಬಳಿಕ ಆಕೆಯ ಮೃತದೇಹವನ್ನು ತಮಿಳುನಾಡು ಗಡಿ ವಾಲ್ಪರೈನಲ್ಲಿ ಬಿಟ್ಟು ಪರಾರಿಯಾಗಿದ್ದ. ಇದೇ ವರ್ಷ ಜನವರಿ 7ರಂದು ಘಟನೆ ನಡೆದಿತ್ತು. ಜನವರಿ 8ರಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದರು.(ಏಜೆನ್ಸೀಸ್​)
ಇಂಗ್ಲೆಂಡ್ ಪ್ರಧಾನಿಯೇ ಕ್ವಾರಂಟೈನ್ ಆಗಿದ್ರು, ಇನ್ನು ಈ ಕಾರ್ಪೊರೇಟರ್ ಯಾವ ಲೆಕ್ಕ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 − 3 =
Remember me
