ಗೋವಾ:ಸಿನಿಮಾ ನಟ-ನಟಿಯರು ರಸ್ತೆ ಅಪಘಾತಕ್ಕೀಡಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಲೇ ಇದೆ. ಅಪಘಾತದಲ್ಲಿ ಸಂಚಾರಿ ವಿಜಯ್​ ದುರಂತ ಅಂತ್ಯ ಕಂಡ ಘಟನೆ ಇನ್ನೂ ಮಾಸಿಲ್ಲ. ಇತ್ತೀಚಿಗಷ್ಟೇ ತೆಲುಗು ನಟ ಸಾಯಿ ಧರ್ಮ ತೇಜಾ ರಸ್ತೆ ಅಪಘಾತಕ್ಕೀಡಾಗಿದ್ದರು. ನಟಿ ಯಶಿಕಾ ಆನಂದ್​ ಕಾರು, ನಟ ಜಗ್ಗೇಶ್​ ಅವರ ಪುತ್ರನ ಕಾರು ಕೂಡ ಅಪಘಾತಕ್ಕೀಡಾಗಿತ್ತು. ಇದೀಗ ಮತ್ತೊಂದು ದುರಂತ ಸಂಭವಿಸಿದ್ದು, ನಟಿ ಈಶ್ವರಿ ಮತ್ತು ಇವರ ಗೆಳೆಯ ಇಬ್ಬರೂ ಮೃತಪಟ್ಟಿದ್ದಾರೆ.
ಮರಾಠಿಯ ಯುವ ನಟಿ ಈಶ್ವರಿ ದೇಶಪಾಂಡೆ(25) ಮತ್ತು ಸ್ನೇಹಿತ ಶುಭಂ ದಡ್ಗೆ(28) ಮೃತರು. ಪರಸ್ಪರ ಪ್ರೀತಿಸುತ್ತಿದ್ದ ಇಬ್ಬರು ಮುಂದಿನ ತಿಂಗಳು ಮದುವೆ ನಿಶ್ಚಿತಾರ್ಥ ಮಾಡಿಕೊಳ್ಳಲು ಸಿದ್ಧತೆ ಮಾಡಿಕೊಂಡಿದ್ದರು. ರಜೆ ಹಿನ್ನೆಲೆ ಸೆಪ್ಟೆಂಬರ್​​ 15ರಂದು ಗೋವಾಕ್ಕೆ ಇಬ್ಬರೂ ಕಾರಿನಲ್ಲಿ ತೆರಳಿದ್ದರು.
ಗೋವಾದ ಅರ್ಪೋರಾ ಗ್ರಾಮದ ಬಳಿ ಬಾಗಾ-ಕ್ಯಾಲಂಗೂಟ್​ ಮಾರ್ಗದ ಸೇತುವೆ ಬಳಿ ಕಾರು ಕಂದಕಕ್ಕೆ ಸೋಮವಾರ ಬೆಳಗ್ಗೆ ಉರುಳಿಬಿದ್ದಿದ್ದು, ಸ್ಥಳದಲ್ಲೇ ನಟಿ ಈಶ್ವರಿ ಮತ್ತು ಸ್ನೇಹಿತ ಶುಭಂ ಇಬ್ಬರೂ ಮೃತಪಟ್ಟಿದ್ದಾರೆ.
ನನ್ನ ತಂದೆ​ಗೆ ಹಲವು ಕಾಲ್​ಗರ್ಲ್​​ ಜತೆ ಸಂಪರ್ಕ ಇತ್ತು, ಅವನೊಬ್ಬ ಕಾಮುಕ, ಮಹಿಳೆಯರನ್ನ ಟ್ರ್ಯಾಪ್​ ಮಾಡ್ತಿದ್ದ…

ಪತ್ನಿ ಕಣ್ಣೆದುರೇ ನವವಿವಾಹಿತ ದುರಂತ ಸಾವು! ಅಳಿಯನ ಪ್ರಾಣ ಉಳಿಸಲು ಹೋದ ಅತ್ತೆಯೂ ಬದುಕಲಿಲ್ಲ

ಪದೇಪದೆ ಸರ್ಪಗಳು ಬರುತ್ತಿವೆ… ಎಂದು ಮನೆಯಲ್ಲಿ ಬಾವಿ ತೋಡಿದ ದಂಪತಿ! ವಾರದ ಬಳಿಕ ಕಾದಿತ್ತು ಶಾಕ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 6 =
Remember me
