ತೆಲಂಗಾಣ:ಎಲ್ಲವೂ ಚೆನ್ನಾಗಿದ್ದರೆ ಆ ಮನೆಯಲ್ಲಿ ಮದುವೆ ಸಂಭ್ರಮ ಹಿಮ್ಮಡಿಗೊಳ್ಳುತ್ತಿತ್ತು. ತಾಯಿಯ ಆಶೀರ್ವಾದದೊಂದಿಗೆ ದಾಪಂತ್ಯ ಜೀವನಕ್ಕೆ ಕಾಲಿಡುವ ಮಹದಾಸೆಯಲ್ಲಿ ಅಮೆರಿಕಾದಿಂದ ಮಗ ಸ್ವಗ್ರಾಮಕ್ಕೆ ಬಂದಿದ್ದ. ಅಷ್ಟರಲ್ಲಿ ವಿಧಿಯಾಟವೇ ಬೇರೆಯಾಗಿತ್ತು.
ಖುಷಿ ಖುಷಿಯಾಗಿ ಮದುವೆ ಆಗಬೇಕಿದ್ದ ಮಗ ತಾಯಿಯ ಶವದ ಮುಂದೆಯೇ ಸಪ್ತಪದಿ ತುಳಿದಿದ್ದಾನೆ. ಸತ್ತು ಮಲಗಿದ್ದ ಅಮ್ಮನ ಪಾದ ಮುಟ್ಟಿ ಕಣ್ಣೀರಿಡುತ್ತಲೇ ಆಶೀರ್ವಾದ ಪಡೆದಿದ್ದಾನೆ.ಇಂತಹ ಮನಕಲಕುವ ದೃಶ್ಯ ತೆಲಂಗಾಣದ ಸಂಗರೆಡ್ಡಿ ಜಿಲ್ಲೆಯ ಇಸ್ಮಾಯಿಲ್ ಖಾನ್‌ಪೇಟ್‌ನಲ್ಲಿ ಸಂಭವಿಸಿದೆ. ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದ ರಾಕೇಶ್ ಎಂಬಾನಿಗೆ ಮೇ 21ರಂದು ಮದುವೆ ನಿಶ್ಚಯವಾಗಿತ್ತು. ಮದುವೆಗೆಂದು ಅಮೆರಿಕಾದಿಂದ ತನ್ನೂರಿಗೆ ಮರಳಿದ್ದ. ಈ ನಡುವೆ ರಾಕೇಶ್​ನ ತಾಯಿ ​ಪಾಲ್ಪಾನೂರಿ ರೇಣುಕಾಗೆ ಕರೊನಾ ಸೋಂಕು ತಗುಲಿತ್ತು. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ ರೇಣುಕಾ(49) ಬದುಕಲಿಲ್ಲ.
ಆಂಬುಲೆನ್ಸ್​ನಲ್ಲಿ ಗ್ರಾಮಕ್ಕೆ ಮೃತದೇಹ ತರಲಾಯಿತು. ಕಣ್ಣೀರಿಡುತ್ತಲೇ ರಾಕೇಶ್​​ ಅಮ್ಮನ ಶವದ ಮುಂದೆಯೇ ಮದುವೆ ನಿಶ್ಚಯವಾಗಿದ್ದ ಯುವತಿ ಜತೆ ಹಾರ ಬದಲಾಯಿಸಿಕೊಂಡು ಮದುವೆಯಾದ. ಇಂತಕ ಮನಕಲಕುವ ದೃಶ್ಯ ಕಂಡ ಜನರೂ ಭಾವುಕರಾದರು.
ಲೈಂಗಿಕ ಕ್ರಿಯೆಗೆ ಸಹಕರಿಸದ ಪತ್ನಿಯ ಹತ್ಯೆ! ‘ಕಾಮ’ದಾಹ ತೀರದ ಸಿಟ್ಟಿಗೆ ಮೂರು ಮಕ್ಕಳನ್ನ ನಾಲೆಗೆ ಎಸೆದ

ಗಂಡನ ಮೊಬೈಲ್​ ಚೆಕ್​ ಮಾಡಿ ಪ್ರೈವಸಿಗೆ ಧಕ್ಕೆ ತಂದ ಪತ್ನಿಗೆ 1 ಲಕ್ಷ ರೂಪಾಯಿ ದಂಡ!

ಗರ್ಭಿಣಿ ಕಣ್ಣೀರಿಟ್ಟರೂ ಅಡ್ಮಿಟ್​ ಮಾಡಿಕೊಳ್ಳಲಿಲ್ಲ, ಆಸ್ಪತ್ರೆ ಬಾಗಿಲಲ್ಲಿ ನಿಂತಿರುವಾಗಲೇ ಹೆರಿಗೆ, ಕೆಳಗೆ ಬಿದ್ದು ಮಗು ಸಾವು!

ಗಂಡನ ಅಂತ್ಯಸಂಸ್ಕಾರ ನೆರವೇರುತ್ತಿದ್ದಂತೆ ಸಾವಿನ ಮನೆಯ ಕದ ತಟ್ಟಿದ ಪತ್ನಿ! ಇವರ ಸ್ಟೋರಿ ಕೇಳಿದ್ರೆ ಕಣ್ಣೀರು ಬರುತ್ತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
