ಭೋಪಾಲ್​:ಪ್ರೀತಿಯಲ್ಲಿರುವ ಯುವಕನಿಗೆ ಬೇರೆ ಯುವತಿಯೊಂದಿಗೆ ಮದುವೆ ಮಾಡಿ, ಮದುವೆಗೆ ಮೂರು ವರ್ಷವಾದ ನಂತರ ಆತನ ಪತ್ನಿಯೇ ಅವನನ್ನು ಪ್ರಿಯತಮೆಯೊಂದಿಗೆ ಮದುವೆ ಮಾಡಿಸುವುದೆಲ್ಲ ಸಿನಿಮಾ ಕಥೆಗಳಲ್ಲಿ ಮಾತ್ರ ಸಾಧ್ಯ ಎಂದು ಕೊಂಡಿದ್ದರೆ ಅದು ನಿಮ್ಮ ಭ್ರಮೆ. ಅಕ್ಷರಶಃ ಇದೇ ರೀತಿಯ ಸಿನಿಮಾ ಕಥೆಯೊಂದು ಮಧ್ಯಪ್ರದೇಶದ ದಂಪತಿಯ ಮಧ್ಯೆ ನಡೆದಿದೆ.
ಇದನ್ನೂ ಓದಿ:‘ಈ ದೀಪಾವಳಿಗೆ…’ ಪ್ರಧಾನಿ ನರೇಂದ್ರ ಮೋದಿಯವರಿಂದ ಒಂದು ವಿಶೇಷ ಮನವಿ
ಭೋಪಾಲ್​ನಲ್ಲಿ ವಾಸವಿರುವ ದಂಪತಿಗೆ ಮದುವೆಯಾಗಿ 3 ವರ್ಷ ಕಳೆದಿದೆ. ಆದರೆ ಆ ಮನೆಯ ಯಜಮಾನ ಮದುವೆಗೂ ಮೊದಲೇ ಬೇರೊಬ್ಬ ಯುವತಿಯನ್ನು ಪ್ರೀತಿಸಿದ್ದನಂತೆ. ಮದುವೆಯಾದ ಮೇಲೆ ಆ ಯುವತಿಯೊಂದಿಗೆ ಪತ್ನಿಯನ್ನೂ ಪ್ರೀತಿಸಲು ಆರಂಭಿಸಿದನಂತೆ. ತನ್ನ ಪ್ರೀತಿಯ ವಿಚಾರವನ್ನು ಹೆಂಡತಿಗೆ ಹೇಳಿ, ಇಬ್ಬರನ್ನೂ ಪತ್ನಿಯರನ್ನಾಗಿ ಮಾಡಿಕೊಳ್ಳಬೇಕೆಂಬ ಆಸೆ ವ್ಯಕ್ತಪಡಿಸಿದನಂತೆ. ಆದರೆ ಒಂದೇ ಸಮಯದಲ್ಲಿ ಇಬ್ಬರು ಹೆಂಡತಿಯರನ್ನು ಹೊಂದಲು ಕಾನೂನಿನಲ್ಲಿ ಅವಕಾಶವಿಲ್ಲ. ಹಾಗಾಗಿ ಗಂಡನಿಗೆ ನಿರಾಶೆ ಮಾಡದ ಪತ್ನಿ ವಿಚ್ಛೇದನ ನೀಡಿದ್ದಾಳೆ. ನಿಮ್ಮ ಪ್ರೇಯಸಿಯೊಂದಿಗೆ ಮದುವೆಯಾಗಿ ಚೆನ್ನಾಗಿರಿ ಎಂದು ಹರಸಿದ್ದಾಳೆ.
ಇದನ್ನೂ ಓದಿ:ದಕ್ಷಿಣ ಕಾಶಿ ಶಿವಗಂಗೆಗೆ ಕಾಯಕಲ್ಪ, ಸ್ಟೀಲ್‌ರೇಲಿಂಗ್, ಮೆಟ್ಟಿಲು ಜೋಡಣೆ, 1 ಕೋಟಿ ರೂ.ವೆಚ್ಚ, ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಅನುಮೋದನೆ
ಇಂತದ್ದೊಂದು ಪ್ರಕರಣವನ್ನು ನಡೆಸಿಕೊಟ್ಟಿರುವುದಾಗಿ ವಕೀಲೆಯೊಬ್ಬರು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ. ಆ ವಿಡಿಯೋ ಇದೀಗ ಸಕತ್​ ವೈರಲ್​ ಆಗಿದೆ. ಎಲ್ಲರಿಗೂ ಇಂತಹ ಹೆಂಡತಿ ಸಿಗುವುದಿಲ್ಲ ಎಂದು ಅನೇಕರು ಹೇಳಿದರೆ, ಧರ್ಮೊಪತ್ನಿಗೆ ಮೋಸ ಮಾಡಿದ್ದಾಗಿ ಅನೇಕರು ಆರೋಪಿಸಿದ್ದಾರೆ. (ಏಜೆನ್ಸೀಸ್​)
Bhopal: After 3 years of marriage, wife helps husband get married to his girlfriend.
"He wanted to be in marital relationship with both which isn't legally possible. But the wife is very mature, she divorced him & helped him marry his girlfriend," says lawyer.#MadhyaPradeshpic.twitter.com/hT5SKouMip
— ANI (@ANI)November 7, 2020

‘ಓದದೆ ನಾ ಬದುಕಲಾರೆ’ ಕರುಣಾಜನಕವಾಗಿದೆ ಐಎಎಸ್​ ಕನಸ ಕಂಡ ವಿದ್ಯಾರ್ಥಿನಿ ಆತ್ಮಹತ್ಯೆ ಕಥೆ

21 ವರ್ಷ ಮೇಲ್ಪಟ್ಟಿದ್ದರೆ ಮಾತ್ರ ಮದ್ಯಪಾನಕ್ಕೆ ಅವಕಾಶ! ಹೆಣ್ಣನ್ನು ಅಗೌರವಿಸಿದರೆ ಸಿಗುತ್ತೆ ಸರಿಯಾದ ಶಿಕ್ಷೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − four =
Remember me
