ನವದೆಹಲಿ:ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಮಾಜಿ ಸಂಸದ, ರಾಷ್ಟ್ರೀಯ ಜನತಾದಳ (ಆರ್​ಜೆಡಿ) ನಾಯಕರೊಬ್ಬರು ಕೋವಿಡ್​ಗೆ ಬಲಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ತಿಹಾರ್​ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಮಾಜಿ ಸಂಸದ ಮೊಹಮ್ಮದ್​ ಶಹಾಬುದ್ದಿನ್​ ಅವರಿಗೆ ಇತ್ತೀಚಿಗೆ ಕರೊನಾ ಸೋಂಕು ತಗುಲಿತ್ತು. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಶುಕ್ರವಾರ ಸಂಜೆ ದೀನ್​ ದಯಾಳ್​ ಉಪಾಧ್ಯಾಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರು ಚಿಕಿತ್ಸೆ ಫಲಿಸದೆ ಶನಿವಾರ ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.
ಶಹಾಬುದ್ದಿನ್​ರ ಸಹೋದರರಿಬ್ಬರ ಮೇಲೆ ದುಷ್ಕರ್ಮಿಗಳ ತಂಡ ಆ್ಯಸಿಡ್​ ಸುರಿದು ಕೊಲೆ ಮಾಡಿದ್ದರು. 2004ರಲ್ಲಿ ನಡೆದ ಈ ಘಟನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಕೊಲೆಯನ್ನ ಮಾಜಿ ಸಂಸದ ಶಹಾಬುದ್ದಿನ್ ಮತತು ಇವರ ಸಹಚರರು ಮಾಡಿದ್ದರು ಎಂಬ ಗಂಬೀರ ಆರೋಪ ಕೇಳಿಬಂದಿತ್ತು. ತನಿಖೆ ನಂತರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜಿವಾವಧಿ ಶಿಕ್ಷಗೆ ಗುರಿಯಾಗಿದ್ದರು.
2016ರಲ್ಲಿ ಬಿಹಾರದ ಸಿವಾನ್ ಜಿಲ್ಲೆಯಲ್ಲಿ ಹಿಂದಿ ದಿನಪತ್ರಿಕೆಯ ಪತ್ರಕರ್ತ ರಾಜ್‌ದೇವ್ ರಂಜನ್ ಅವರನ್ನ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಹತ್ಯೆಯಲ್ಲಿ ಶಹಾಬುದ್ದೀನ್ ಪಾತ್ರವಿದೆ ಎಂದು ಮೃತರ ಪತ್ನಿ ಆರೋಪಿಸಿದ್ದರು.
ಸಿಟಿ ಸ್ಕ್ಯಾನ್​ಗೆ ದರ ನಿಗದಿ, ಹೆಚ್ಚುವರಿ ಹಣ ವಸೂಲಿಗೆ ಬ್ರೇಕ್​: ಸಚಿವ ಡಾ. ಸುಧಾಕರ್​ ಘೋಷಣೆ

ಬೆಳಗ್ಗೆ ಮಗ, ಸಂಜೆ ತಂದೆ, ಮರುದಿನ ಮಗಳು, ನಂತರ ಮತ್ತೊಬ್ಬ ಮಗಳ ಸಾವು… ಇನ್ನಿಬ್ಬರ ಸ್ಥಿತಿ ಚಿಂತಾಜನಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 5 =
Remember me
