ವಾಷಿಂಗ್ಟನ್​:ಕರೊನಾ ಸೋಂಕು ಉಂಟು ಮಾಡುವ ಸಾರ್ಸ್​ ಕೋವಿಡ್​ 2 ಎಂಬ ವೈರಾಣುವಿನಲ್ಲಿರುವ ಹಾಗೂ ಅದರ ಬೆಳವಣಿಗೆಗೆ ಸಹಕರಿಸುವ ಪ್ರಮುಖವಾದ ಪ್ರೋಟೀನ್​ ಅನ್ನು ತಡೆಗಟ್ಟುವ ಸಣ್ಣ ಕಣವೊಂದನ್ನು ಪತ್ತೆ ಮಾಡಿರುವುದಾಗಿ ಸಂಶೋಧಕರು ಹೇಳಿದ್ದಾರೆ. ತನ್ಮೂಲಕ, ಕರೊನಾ ಸೋಂಕಿನ ಚಿಕಿತ್ಸೆಗೆ ಪರಿಣಾಮಕಾರಿ ಔಷಧ ಕಂಡುಹಿಡಿಯಲು ತುಂಬಾ ಅನುಕೂಲವಾಗಲಿದೆ ಎಂದು ಅವರು ಹೇಳಿಕೊಂಡಿದ್ದಾರೆ.
ಅಮೆರಿಕದ ಜಾರ್ಜಿಯಾ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಈ ಕಣವನ್ನು ಪತ್ತೆ ಮಾಡಿದೆ. ಸಾರ್ಸ್​ ಕೋವಿಡ್​ 2ನಲ್ಲಿರುವ ಪ್ರೋಟೀನ್​ PLpro ಅದಕ್ಕೆ ವೃದ್ಧಿಸುವ ಹಾಗೂ ಸೋಂಕಿತರ ದೇಹದಲ್ಲಿರುವ ರೋಗನಿರೋಧಕಶಕ್ತಿಯನ್ನು ಕುಂಠಿತಗೊಳಿಸಲು ಬಲವನ್ನು ಒದಗಿಸುತ್ತದೆ. ನ್ಯಾಪ್ತಲೀನ್​ ಆಧಾರಿತವಾದ PLpro ಇನ್​ಹಿಬಿಟರ್​ಗಳು ಸಾರ್ಸ್​ ಕೋವಿಡ್​ 2 PLpro ಪ್ರೋಟೀನ್​ನಲ್ಲಿರುವ ವೈರಾಣುವಿನ ವೃದ್ಧಿ ಮತ್ತು ಸೋಂಕಿತರ ದೇಹದಲ್ಲಿರುವ ರೋಗನಿರೋಧಕ ಶಕ್ತಿಯನ್ನು ಹತ್ತಿಕ್ಕುವ ಬಲವನ್ನೇ ಉಡುಗಿಸುತ್ತವೆ ಎಂಬುದು ಸಂಶೋಧನೆಗಳಿಂದ ದೃಢಪಟ್ಟಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಇದನ್ನೂ ಓದಿ:ದೆಹಲಿಯಲ್ಲಿ ಲಾಕ್​ಡೌನ್​ ವಿಸ್ತರಣೆ ಇಲ್ಲ, ಮಹಾರಾಷ್ಟ್ರದಲ್ಲಿ ಮರುಜಾರಿಯಾಗಲ್ಲ
ಅಂದಾಜು 12 ವರ್ಷಗಳ ಹಿಂದೆ ಸಾರ್ಸ್​ ವೈರಾಣುವಿನಿಂದ ಆಗುವ ಸೋಂಕನ್ನು ಸಮರ್ಥವಾಗಿ ತಡೆಗಟ್ಟಬಲ್ಲ ಕಾಂಪೌಂಡ್​ಗಳನ್ನು ಪತ್ತೆ ಮಾಡಲಾಗಿತ್ತು. ಆದರೆ ಸಾರ್ಸ್​ನ ಹರಡುವಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಈ ಬಗೆಗಿನ ಹೆಚ್ಚಿನ ಸಂಶೋಧನೆಯನ್ನು ನಿಲ್ಲಿಸಲಾಗಿತ್ತು. ಇದೀಗ ಹಬ್ಬಿರುವ ಕರೊನಾ ವೈರಾಣು ಇನ್ನಷ್ಟು ಕಾಲ ಇರುವುದು ಖಚಿತಪಟ್ಟಿದೆ. ಈಗ ಪತ್ತೆಯಾಗಿರುವ ಕರೊನಾ ವೈರಾಣು ಅಲ್ಲದಿದ್ದರೂ ಬೇರೊಂದು ಪ್ರಬೇಧದ ಕರೊನಾ ವೈರಾಣು ನಮ್ಮನ್ನು ಬಾಧಿಸುವುದು ನಿಶ್ಚಿತವಾಗಿದೆ. ಆದ್ದರಿಂದ, ಆ ಸಂಶೋಧನೆಯನ್ನು ಮುಂದುವರಿಸಿ, ಇದೀಗ ಕರೊನಾ ವೈರಾಣುವಿಗೆ ವೃದ್ಧಿಸುವ ಶಕ್ತಿಯನ್ನೇ ಬಲಹೀನಗೊಳಿಸುವ ಕಾಂಪೌಂಡ್​ ಅನ್ನು ಪತ್ತೆ ಮಾಡಿರುವುದಾಗಿ ಸಂಶೋಧಕರು ಹೇಳಿದ್ದಾರೆ.
ಇದೀಗ ಪತ್ತೆ ಮಾಡಲಾಗಿರುವ ಕಾಂಪೌಂಡ್​ಗಳು ಔಷಧವಾಗಿ ಬಳಸಲು ಸಮರ್ಥವಾಗಿವೆ. ಅದರಲ್ಲೂ ವಿಶೇಷವಾಗಿ ಒಂದು ಔಷಧದಲ್ಲಿ ಏನೆಲ್ಲ ಅಂಶಗಳಿರಬೇಕು ಎಂದು ಬಯಸುತ್ತೇವೋ ಆ ಎಲ್ಲ ಗುಣಗಳು ಇದರಲ್ಲಿ ಇದೆ ಎಂದು ತಿಳಿಸಿದ್ದಾರೆ.
ಶೂನ್ಯ ತೆರಿಗೆಯ ಜಿಎಸ್​ಟಿ ವಿವರ ತಡವಾಗಿ ಸಲ್ಲಿಸಿದರೆ ಜುಲ್ಮಾನೆ ಇಲ್ಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × one =
Remember me
