ಭೋಪಾಲ್​:ಮಕ್ಕಳೆಂದರೆ ತಾಯಂದಿರಿಗೆ ಅದೆಷ್ಟು ಪ್ರೀತಿ ಇರುತ್ತದೆಯಲ್ಲವೇ? ಆದರೆ ಇಲ್ಲೊಬ್ಬ ತಾಯಿ ಮಾತ್ರ ತೀರಾ ವಿಚಿತ್ರ. ತಾನೇ ಹೆತ್ತಿದ್ದ ಮಗುವಿಗೆ, ನೀನು ಮಗುವಲ್ಲ ಕುರಿ ಎಂದು ಬೈಯುತ್ತಾ, ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ.
ಇದನ್ನೂ ಓದಿ:ಕರೊನಾ ಲಸಿಕೆ ತಗೊಂಡ್ರೆ ಸಲಿಂಗ ಕಾಮಿಗಳಾಗ್ತೀರ ಎಂದ ಧಾರ್ಮಿಕ ಗುರು!
ಹೌದು! ಇಂತದ್ದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದ ಭೋಪಾಲ್​ ಜಿಲ್ಲೆಯ ಅಶೋಕ್​ ನಗರದಲ್ಲಿ ವರದಿಯಾಗಿದೆ. ರಶ್ಮಿ ಲೋಧಿ ಹೆಸರಿನ ಮಹಿಳೆ 8 ತಿಂಗಳ ಹಿಂದೆ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಇಷ್ಟು ದಿನ ಮಗುವನ್ನು ಚೆನ್ನಾಗಿಯೇ ನೋಡಿಕೊಂಡ ಆಕೆ ಶನಿವಾರ ಸಂಜೆ ಮಗುವನ್ನು ಮನೆಯಿಂದ ಹೊರಗೆ ಕರೆದೊಯ್ದಿದ್ದಾಳೆ. ಮನೆ ಹತ್ತಿರವಿದ್ದ ಹೆದ್ದಾರಿಯೊಂದರ ಮೇಲೆ ಮಗುವನ್ನು ಮಲಗಿಸಿ, ಕೊಡಲಿಯಿಂದ ಕೊಚ್ಚಿ ಕೊಂದಿದ್ದಾಳೆ. ನಂತರ ಮಗುವಿಗನ ಮೃತ ದೇಹವನ್ನು ಎತ್ತಿಕೊಂಡು ಮನೆಗೆ ಬಂದಿದ್ದಾಳೆ. ಅದು ಮಗುವಲ್ಲ, ಕುರಿ. ಅದಕ್ಕಾಗೇ ನಾನು ಅದು ಇರಬೇಕಾದ ಜಾಗಕ್ಕೆ ಕಳುಹಿಸಿಕೊಟ್ಟೆ ಎಂದು ಹೇಳಿದ್ದಾಳೆ.
ಇದನ್ನೂ ಓದಿ:PHOTO GALLERY| ರಮೇಶ್ ಪುತ್ರಿಯ ಆರತಕ್ಷತೆ ಕಾರ್ಯಕ್ರಮದಲ್ಲಿ ಸ್ಯಾಂಡಲ್​ವುಡ್ ಸಮಾಗಮ..
ಹೆಂಡತಿಯ ವಿಚಿತ್ರ ವರ್ತನೆ ನೋಡಿ ಬೆಚ್ಚಿದ ಗಂಡ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಆಕೆ ಮೃತ ಮಗುವನ್ನು ಕರೆದುಕೊಂಡು ಆಸ್ಪತ್ರೆಗೂ ಹೋಗಿದ್ದಳು. ಅಲ್ಲಿ ಮಗು ಮೆಟ್ಟಿಲಿಂದ ಬಿದ್ದು ಗಾಯ ಮಾಡಿಕೊಂಡಿದೆ ಎಂದು ಹೇಳಿದ್ದಳು ಎನ್ನಲಾಗಿದೆ. ಮಹಿಳೆ ಮಾಡಿದ ಕೃತ್ಯವನ್ನು ಆಕೆಯ ಪೋಷಕರು ಮುಚ್ಚಿಡಲು ಬಯಸಿದ್ದಾಗಿಯೂ ತಿಳಿಸಲಾಗಿದೆ. ಆಕೆ ಮಾನಸಿಕ ಅಸ್ವಸ್ಥಳಾಗಿದ್ದು, ಅದೇ ಕಾರಣದಿಂದಾಗಿ ಈ ಕೃತ್ಯ ಮಾಡಿದ್ದಾಳೆ ಎನ್ನುವ ಆರೋಪವಿದ್ದು, ಸದ್ಯ ಮಹಿಳೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. (ಏಜೆನ್ಸೀಸ್​)
ಕರೊನಾ ಲಸಿಕೆ ಪಡೆದ ವಾರ್ಡ್ ಬಾಯ್​ ಸಾವು! ಕುಟುಂಬ, ಆರೋಗ್ಯ ಇಲಾಖೆ ಹೇಳಿದ್ದೇನು?
ಗರ್ಭಿಣಿಯಾದಾಗ ಎಲ್ಲವೂ ಸರಿಯಾಗುತ್ತದೆ- ಗಾತ್ರದ ಬಗ್ಗೆ ಮುಜುಗರ ಬೇಡ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − one =
Remember me
