ಮಹಾರಾಷ್ಟ್ರ:ತನ್ನ ನಾಲ್ಕು ತಿಂಗಳ ಮಗುವನ್ನು ಪ್ರಾಣಾಪಾಯದಿಂದ ಪಾರು ಮಾಡಲು ತಾಯಿ ತನ್ನ ಜೀವವನ್ನೇ ಪಣಕ್ಕಿಟ್ಟ ಘಟನೆ ಜಲಗಾಂವ್‌ನ ಮಹಿಂದಲೆ ಗ್ರಾಮದಲ್ಲಿ ನಡೆದಿದೆ. ಇಡೀ ಕುಟುಂಬ ಮುಂಜಾನೆಯ ಗಾಢ ನಿದ್ರೆಯಲ್ಲಿತ್ತು. ಜ್ಯೋತಿ ಹಾಗೂ ಆಕೆಯ 4 ತಿಂಗಳ ಮಗು ಒಂದೇ ಹಾಸಿಗೆಯಲ್ಲಿ ಮಲಗಿದ್ದರು. ಬೆಳಗ್ಗೆ ಅಂದಾಜು ಐದು ಗಂಟೆಯ ಸುಮಾರಿಗೆ ಮಗುವಿನ ಕೂಗು ಕೇಳಿದ ಜ್ಯೋತಿಗೆ ಎಚ್ಚರವಾಗಿದ್ದು, ಕಣ್ಣು ಬಿಟ್ಟು ದೃಷ್ಟಿ ಹಾಯಿಸುತ್ತಿದ್ದಂತೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾಳೆ.
ಇದನ್ನೂ ಓದಿ:VIDEO | ಒಡಿಶಾ ರೈಲು ಅಪಘಾತ; ದುರಂತದಲ್ಲಿ ಮಡಿದವರ ಮೋಕ್ಷ ಪ್ರಾಪ್ತಿಗೆ ಸಾಮೂಹಿಕ ಕೇಶ ಮುಂಡನ!
ಈ ವೇಳೆ ನಾಗರಹಾವೊಂದು ತನ್ನ ನಾಲ್ಕು ತಿಂಗಳ ಕಂದಮ್ಮನ ಮೇಲೆ ಹರಡಿ, ಹೆಡೆ ಬಿಚ್ಚಿರುವುದನ್ನು ಕಂಡು ಒಂದು ಕ್ಷಣ ಗಾಬರಿಯಾಗಿದ್ದಾಳೆ. ಏನು ಮಾಡಬೇಕೆಂದು ದಿಕ್ಕೇ ತೋಚದ ಸಮಯವದು. ಹೀಗಿದ್ದರೂ, ತನ್ನ ಮಗುವನ್ನು ರಕ್ಷಿಸಬೇಕಾದ ಸವಾಲು ತಾಯಿಗೆ. ಕೂಡಲೇ ತನ್ನ ಜೀವದ ಬಗ್ಗೆ ಏನೂ ಯೋಚಿಸದ ಜ್ಯೋತಿ, ಒಂದು ಕ್ಷಣವೂ ತಡ ಮಾಡದೆ ಮಗುವಿನ ಮೇಲೆ ಹರಡಿಕೊಂಡಿದ್ದ ನಾಗರಹಾವನ್ನು ಕೈಯಿಂದ ಎಳೆದು, ದೂರ ಎಸೆದಿದ್ದಾಳೆ. ಇದರಿಂದ ಮಗುವಿನ ಪ್ರಾಣ ಗಂಡಾಂತರವೊಂದರಿಂದ ಪಾರಾಗಿದೆ. ಆದರೆ ವಿಷ ಸರ್ಪ ಜ್ಯೋತಿಗೆ ಕಚ್ಚಿದೆ.
ಇದನ್ನೂ ಓದಿ:ಮಾವನ 3 ಷರತ್ತುಗಳನ್ನು ಕೇಳಿ ಮದುವೆ ದಿನವೇ ಹೆಂಡತಿಯನ್ನು ಬಿಟ್ಟು ಹೋದ ಗಂಡ!
ಮನೆ ಮಂದಿ ಕೂಡಲೇ ಜ್ಯೋತಿಯನ್ನು ಗ್ರಾಮಾಂತರ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಪಚೋರಾದ ಖಾಸಗಿ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ವಿಷ ಸರ್ಪ ಕಚ್ಚಿದ್ದರಿಂದ 6 ದಿನಗಳ ಕಾಲ ಸಾವು ಬದುಕಿನ ನಡುವೆ ಹೋರಾಡಿದ ಜ್ಯೋತಿ ಸದ್ಯ ಚೇತರಿಸಿಕೊಂಡಿದ್ದಾಳೆ ಎಂದು ವರದಿಯಾಗಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + 14 =
Remember me
