ಭುವನೇಶ್ವರ:ಕರುಳ ಕುಡಿಯೊಂದನ್ನು ಕಳೆದುಕೊಂಡ ತಾಯಿ, ತನ್ನ ಇನ್ನೊಬ್ಬ ಮಗನೊಂದಿಗೆ ವಿಧಾನಸಭೆಯ ಮುಂದೆಯೇ ಬೆಂಕಿ ಹಚ್ಚಿಕೊಂಡು ಸಾಯಲು ಯತ್ನಿಸಿರುವ ಘಟನೆ ಒಡಿಶಾದಲ್ಲಿ ನಡೆದಿದೆ. ಪೊಲೀಸರು ನ್ಯಾಯ ಒದಗಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ತಾವು ಈ ದುಸ್ಸಾಹಸಕ್ಕೆ ಕೈ ಹಾಕಿದ್ದಾಗಿ ತಾಯಿ ಮಗ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಮಗಳ ಮದುವೆಗೆ ಅಮೆರಿಕಗೆ ಹೋದ ದಂಪತಿ ಪುತ್ರಿಯ ಕಣ್ಣೆದುರಲ್ಲೇ ದುರಂತ ಸಾವು, ಪುತ್ರನೂ ಮೃತ..!
ಒಡಿಶಾದ ಸುಲೋಚನಾ ದಾಸ್​ ಮತ್ತು ಆಕೆಯ ಮಗ ಸುಬ್ರತ್​ ದಾಸ್​ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದವರು. ಸುಲೋಚನ ಅವರ ಹಿರಿಯ ಮಗ ಅಂಬ್ರುತ್​ ದಾಸ್​ 2019ರ ಜುಲೈ 20ರಂದು ಕೊಲೆಯಾಗಿದ್ದಾನೆ. ಮೊದಲಿಗೆ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಂತರ ಸಾಕ್ಷ್ಯಾಧಾರ ಸಿಕ್ಕಿಲ್ಲವೆಂದು ಹೇಳಿ ಕೇಸ್​ನ್ನು ಮುಚ್ಚಿ ಹಾಕಿದ್ದಾರೆ ಎಂದು ಸುಲೋಚನ ಅವರು ಆರೋಪಿಸಿದ್ದಾರೆ.
ನನ್ನ ಅಣ್ಣನದ್ದು ಕೊಲೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಆದರೆ ಪೊಲೀಸರು ನಮಗೆ ನ್ಯಾಯ ದೊರಕಿಸಿಕೊಡುವಲ್ಲಿ ವಿಫಲವಾಗಿದ್ದಾರೆ. ನಾವು ಎಲ್ಲ ಫೋರಂಗಳಲ್ಲಿ ಈ ವಿಚಾರವಾಗಿ ಮಾತನಾಡಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ. ಇದರಿಂದಾಗಿ ನಾವು ಸಾಕಷ್ಟು ನೊಂದಿದ್ದು, ಅದೇ ಕಾರಣಕ್ಕೆ ಆತ್ಮಹತ್ಯೆಗೆ ಮುಂದಾಗಿದ್ದೆವು ಎಂದು ಸುಬ್ರತ್​ ದಾಸ್​ ತಿಳಿಸಿದ್ದಾರೆ.
ಇದನ್ನೂ ಓದಿ:VIDEO| 150 ರೂಪಾಯಿ ಆಸೆಗೆ 3 ಲಕ್ಷ ರೂ. ಕಳೆದುಕೊಂಡ ವ್ಯಕ್ತಿ..!
ಈ ಹಿಂದೆಯೂ ಎರಡು ಇದೇ ರೀತಿಯ ಆತ್ಮಹತ್ಯಾ ಪ್ರಯತ್ನ ಪ್ರಕರಣಗಳು ಒಡಿಶಾ ವಿಧಾನಸಭೆಯ ಆವರಣದಲ್ಲಿ ನಡೆದಿತ್ತು. ಆ ಕಾರಣ ಹೆಚ್ಚಿನ ಭದ್ರತೆಯನ್ನು ನೀಡಲಾಗಿದೆ. ಸುಲೋಚನ ಮತ್ತು ಆಕೆಯ ಮಗ ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸುತ್ತಿದ್ದಂತೆ, ಪೊಲೀಸರು ಅವರನ್ನು ತಡೆದಿದ್ದು, ವಶಕ್ಕೆ ಪಡೆದಿದ್ದರು. (ಏಜೆನ್ಸೀಸ್​)
ತಾಯಿಯನ್ನು ಬಲಿ ಪಡೆದಿದ್ದ ಉಮಾಶ್ರೀ ಕಾರಿಗೆ ಮಗಳ ಜೀವವೂ ಹೋಯ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 5 =
Remember me
