ಮುಂಬೈ:ಸ್ವರ ಮಾಂತ್ರಿಕ, ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮನೆಯಲ್ಲಿ ಮದುವೆ ಸಂಭ್ರಮ ಕಳೆಗಟ್ಟುತ್ತಿದೆ. ಹಿರಿಯ ಪುತ್ರಿ ಖತೀಜಾ ರೆಹಮಾನ್​ ಅವರ ಮದುವೆ ನಿಶ್ಚಿತಾರ್ಥ ಉದ್ಯಮಿ ರಿಯಾಸ್ದೀನ್ ಶೇಕ್ ಮೊಹಮದ್ ಜತೆ ಇತ್ತೀಚಿಗೆ ನೆರವೇರಿದ್ದು, ಶೀಘ್ರದಲ್ಲೇ ಸಪ್ತಪದಿ ತುಳಿಯಲಿದ್ದಾರೆ.
ಈ ಬಗ್ಗೆ ಖತೀಜಾ ರೆಹಮಾನ್ ಅವರೇ ಇನ್‌ಸ್ಟಾಗ್ರಾಂನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ದೇವರ ಆಶೀರ್ವಾದದಿಂದ ರಿಯಾಸ್ದೀನ್​ ಶೇಖ್​ ಮೊಹಮದ್​ ಜತೆ ನನ್ನ ನಿಶ್ಚಿತಾರ್ಥ ನೆರವೇರಿತು. ಈ ವಿಷಯ ತಿಳಿಸಲು ಖುಷಿ ಆಗುತ್ತಿದೆ. ರಿಯಾಸ್ದೀನ್​ ಉದ್ಯಮಿ ಹಾಗೂ ಆಡಿಯೋ ಇಂಜಿನಿಯರ್​. ನನ್ನ ಹುಟ್ಟುಹಬ್ಬದ ದಿನವೇ (ಡಿ.29) ನಮ್ಮಿಬ್ಬರ ಮದುವೆ ನಿಶ್ಚಿತಾರ್ಥ ಆಪ್ತರು ಮತ್ತು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ನಡೆಯಿತು’ ಎಂದು ಬರೆದುಕೊಂಡಿರುವ ಖತೀಜಾ, ಎಂಗೇಜ್‍ಮೆಂಟ್​ ಉಡುಗೆಯ ಧಿರಿಸಿನಲ್ಲಿ ತೆಗೆಸಿಕೊಂಡಿದ್ದ ತನ್ನ ಫೋಟೋ ಜತೆಗೆ ರಿಯಾಸ್ದೀನ್​ ಅವರ ಫೋಟೋವನ್ನು ಅಪ್​ಲೋಡ್​ ಮಾಡಿಕೊಂಡಿದ್ದಾರೆ.
ರೆಹಮಾನ್​ ಅವರಿಗೆ ಮೂವರು ಮಕ್ಕಳು. ಅವರಲ್ಲಿ ಖತೀಜಾ ಹಿರಿಯ ಮಗಳು. ಅಪ್ಪನಂತೆ ಸಂಗೀತದತ್ತ ಆಸಕ್ತಿ ಹೊಂದಿರುವ ಖತೀಜಾ ಕೂಡ ಸಂಗೀತಗಾರ್ತಿ. ಖತೀಜಾಗೆ ಮದುವೆ ಫಿಕ್ಸ್​ ಆಗಿರುವ ಸುದ್ದಿ ತಿಳಿದ ಅಭಿಮಾನಿಗಳು, ನೆಟ್ಟಿಗರು, ಸಿನಿ ರಂಗದವರು, ಗಣ್ಯರು ಶುಭಕೋರಿದ್ದಾರೆ.
ಏಯ್​ ಗಂಡಸ್ತನ ತೋರ್ಸು ಬಾ.. ಎನ್ನುತ್ತಲೇ ಕಿತ್ತಾಡಿದ ಸಂಸದ-ಸಚಿವ: ರಾಮನಗರದಲ್ಲಿ ಸಿಎಂ ಎದುರೇ ಹೈಡ್ರಾಮ

ಕರೊನಾ ಸೋಂಕಿತೆಯ ಪ್ರಾಣ ಉಳಿಸಿತು ವಯಾಗ್ರ ಔಷಧ! 45 ದಿನದ ಬಳಿಕ ಕೋಮಾದಿಂದ ಹೊರ ಬಂದ ನರ್ಸ್​

ಹೊಸ ವರ್ಷದ ಪಾರ್ಟಿಗೆ 2 ಮೇಕೆ ಕದ್ದ ಎಎಸ್​ಐ! ಮಾಲೀಕನ ಕಣ್ಣೀರಿಗೂ ಕರಗದೆ, ಬಾಡೂಟ ತಿಂದು ತೇಗಿದ್ರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one + thirteen =
Remember me
