ತಿರುಪತಿ:ಹಿಂದೂಗಳು ಪೂಜಿಸುವ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟಿದ್ದ ಮಹಿಳೆಯೊಬ್ಬಳನ್ನು ಮುಸ್ಲಿಂ ಯೋಧ ಹೆಗಲ ಮೇಲೆ ಹೊತ್ತೊಯ್ದಿರುವ ಘಟನೆ ಇತ್ತೀಚೆಗೆ ವರದಿಯಾಗಿದೆ. ಸೇವಾ ಭಾವವನ್ನು ತೋರಿದ ಯೋಧನಿಗೆ ಬಗ್ಗೆ ನೆಟ್ಟಿಗರು ಶಹಬ್ಬಾಸ್​ ಎನ್ನಲಾರಂಭಿಸಿದ್ದಾರೆ.
ಇದನ್ನೂ ಓದಿ:VIDEO| ಮಮತಾ ಬ್ಯಾನರ್ಜಿ ಮಸ್ತ್​ ಡ್ಯಾನ್ಸ್​! ವೇದಿಕೆ ಮೇಲೆ ಕುಣಿದು ರಂಜಿಸಿದ ದೀದಿ
58 ವರ್ಷದ ಮಹಿಳೆ ಮಂಗಿ ನಾಗೇಶ್ವರಮ್ಮ ಡಿಸೆಂಬರ್​ 22 ಮತ್ತು 23ರಂದು ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ್ದರು. ಮಟ್ಟಿಲು ಹತ್ತಿ ಹೋಗಿ ದೇವರ ದರ್ಶನ ಮಾಡಲು ಅವರು ಮುಂದಾಗಿದ್ದಾರೆ. ದೇವಸ್ಥಾನಕ್ಕೆ ಆರು ಕಿ.ಮೀ ದೂರವಿದ್ದಾಗ ನಾಗೇಶ್ವರಮ್ಮ ಅವರಿಗೆ ಬಿಪಿ ಕಡಿಮೆಯಾಗಿದ್ದು, ಆಕೆ ನಡೆಯಲಾಗದ ಸ್ಥಿತಿ ತಲುಪಿದ್ದಾರೆ. ಆ ವೇಳೆ ಆ ಸ್ಥಳದಲ್ಲಿ ಮುಸ್ಲಿಂ ಯೋಧ ಶೇಖ್ ಅರ್ಷದ್​ನನ್ನು ಯಾತ್ರಿಕರ ಮೇಲ್ವಿಚಾರಣೆಗೆ ನೇಮಿಸಲಾಗಿತ್ತು.
ಇದನ್ನೂ ಓದಿ:‘ಹೀಗಾದರೆ ಆರ್​ಎಸ್​ಎಸ್​ ಮುಖ್ಯಸ್ಥ ಮೋಹನ್​ ಭಾಗವತ್​ರನ್ನೂ ಉಗ್ರನೆಂದು ಕರೆಯುತ್ತಾರೆ’ ರಾಹುಲ್​ ಗಾಂಧಿ ಆರೋಪ
ನಾಗೇಶ್ವರಮ್ಮನ ಕಷ್ಟವನ್ನು ನೋಡಲಾಗದ ಶೇಖ್​ ಅರ್ಷದ್​, ಆಕೆಯನ್ನು ಮೊದಲು ಆಸ್ಪತ್ರೆಗೆ ಕರೆದೊಯ್ದಿದ್ದಾನೆ. ಪ್ರಥಮ ಚಿಕಿತ್ಸೆ ನೀಡಿಸಿ, ನಂತರ ಆಕೆಯನ್ನು ಹೆಗಲ ಬೆನ್ನಿನ ಮೇಲೆ ಕೂರಿಸಿಕೊಂಡು ಹೊತ್ತೊಯ್ದಿದ್ದಾನೆ. ಆರು ಕಿ.ಮೀ ದೂರ ನಾಗೇಶ್ವರಮ್ಮನನ್ನು ಹೊತ್ತೊಯ್ದು, ದೇವಸ್ಥಾನಕ್ಕೆ ತಲುಪಿಸಿ, ಕೆಲಸಕ್ಕೆ ಮರಳಿದ್ದಾನೆ.ಶೇಖ್​ ಅರ್ಷದ್​ನ ಈ ಕೆಲಸಕ್ಕೆ ಭಕ್ತಾದಿಗಳು ಹಾಗೂ ನೆಟ್ಟಿಗರು ಶಹಬ್ಬಾಸ್​ ಹೇಳಲಾರಂಭಿಸಿದ್ದಾರೆ. (ಏಜೆನ್ಸೀಸ್​)
ಮನೆಗೆ ಕರೆಸಿಕೊಂಡು ಬಟ್ಟೆ ಬಿಚ್ಚಿಸುತ್ತಿದ್ದ! ಬಾಲಕನ ಮೇಲೆ ಬಾಲಕನಿಂದಲೇ ನಡೆಯುತ್ತಿತ್ತು ಲೈಂಗಿಕ ದೌರ್ಜನ್ಯ

ಪತಿಗೆ ನನ್ನಲ್ಲಿ ಆಸಕ್ತಿಯಿಲ್ಲ- ಮಕ್ಕಳಾಗದ್ದಕ್ಕೆ ಅತ್ತೆ ನನ್ನನ್ನು ಹೀಯಾಳಿಸುತ್ತಿದ್ದಾರೆ… ಕುಗ್ಗಿ ಹೋಗಿದ್ದೇನೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − seventeen =
Remember me
