ಹೈದರಾಬಾದ್​:ತಾರಾದಂಪತಿ ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಆಗಿರುವ ವಿಚಾರವನ್ನು ಅಭಿಮಾನಿಗಳಿಗೆ ಈಗಲೂ ಅರಗಿಸಿಕೊಳ್ಳಲು ಆಗುತ್ತಿಲ್ಲ. ಮತ್ತೆ ಅವರಿಬ್ಬರು ಒಂದಾಗಬೇಕು ಎಂದು ಚಾಯ್ ಮತ್ತು ಸ್ಯಾಮ್ ಅವರ ಅಭಿಮಾನಿಗಳು ಬಯಸುತ್ತಲೇ ಇದ್ದಾರೆ. ಹಾಗೇ ಇವರಿಬ್ಬರ ವೈವಾಹಿಕ ಜೀವನದಲ್ಲಿ ಬಿರುಕು ಮೂಡಲು ಕಾರಣವೇನು? ಎಂಬ ಪ್ರಶ್ನೆಗೆ ಸಾಕಷ್ಟು ಊಹಾಪೋಹಗಳು ಮತ್ತು ವದಂತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಲೇ ಇವೆ. ಸಮಂತಾ ಡಿವೋರ್ಸ್​ ಹಿಂದೆ ಸಮಂತಾರ ಕಾಸ್ಟ್ಯೂಮ್​ ಡಿಸೈನರ್​ ಪ್ರೀತಂ ಝುಕಲ್ಕರ್​ ಕೈವಾಡ ಇದೆ ಎಂಬ ಗುಸುಗುಸು ದಟ್ಟವಾಗಿದೆ. ಆದರೆ, ನಟಿ ಶ್ರೀ ರೆಡ್ಡಿ ಮಾತ್ರ ಬೇರೆ ವಾದವನ್ನೇ ಮುಂದಿಟ್ಟಿದ್ದು, ಅವರ ಹೇಳಿಕೆ ಅಚ್ಚರಿ ಮೂಡಿಸಿದೆ.
‘ಪ್ರೀತಮ್ ಒಬ್ಬ ಸಲಿಂಗಕಾಮಿ. ಆತನ ಜತೆ ಸಮಂತಾ ಸಂಬಂಧ ಬೆಳೆಸಲು ಸಾಧ್ಯವಿಲ್ಲ. ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ಗೆ ಪ್ರೀತಮ್​ ಕಾರಣವಲ್ಲ’ ಎಂದು ಶ್ರೀರೆಡ್ಡಿ ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದಾರೆ.

ಸಮಂತಾ ಮತ್ತು ನಾಗಚೈತನ್ಯ ಡಿವೋರ್ಸ್​ ಬೆನ್ನಲ್ಲೇ ಸಮಂತಾ ಮತ್ತು ಪ್ರೀತಂ ಝುಕಲ್ಕರ್​ ಒಟ್ಟಿಗೆ ಇರುವ ಫೋಟೋವೊಂದು ವೈರಲ್​ ಆಗಿತ್ತು. ಆ ಫೋಟೋದಲ್ಲಿ ಸೋಫಾದ ಮೇಲೆ ಮಲಗಿರುವ ಸಮಂತಾ ಅವರು ಝುಕಲ್ಕರ್ ತೊಡೆಗಳ ಮೇಲೆ ತನ್ನ ಕಾಲುಗಳನ್ನು ಹಾಕಿಕೊಂಡಿದ್ದ ದೃಶ್ಯವಿತ್ತು. ಈ ಫೋಟೋವನ್ನು ಸಮಂತಾರ ಹುಟ್ಟುಹಬ್ಬದ ದಿನ ಝುಕಲ್ಕರ್ ತನ್ನ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್​ ಮಾಡಿ “ಐ ಲವ್​ ಯು” ಎಂದು ಬರೆದುಕೊಂಡಿದ್ದ. ಡಿವೋರ್ಸ್​ ಘೋಷಣೆ ಮಾಡಿದ ಬೆನ್ನಲ್ಲೇ ಆ ಪೋಸ್ಟ್​ ಅನ್ನು ಝುಕಲ್ಕರ್ ತನ್ನ ಅವರ ಡಿಲೀಟ್​ ಮಾಡಿದ್ದರು.

ಈ ವಿಚ್ಛೇದನಕ್ಕೆ ತಾನೇ ಕಾರಣ ಎಂಬ ಗಾಸಿಪ್​ ಹೆಚ್ಚುತ್ತಿದ್ದಂತೆ ಬೇಸರಗೊಂಡಿದ್ದ ಪ್ರೀತಮ್​ ಝಕಲ್ಕರ್​, ‘ನಾಗ ಚೈತನ್ಯ ಅವರು ಈ ಬಗ್ಗೆ ಸ್ಪಷ್ಟನೆ ನೀಡಬಹುದಿತ್ತು. ನನ್ನ ಪಾಲಿಗೆ ಸಮಂತಾ ಸಹೋದರಿ ಇದ್ದಂತೆ’ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ, ಶ್ರೀರೆಡ್ಡಿ ಅವರ ಸಲಿಂಗಕಾಮಿ ಎಂಬ ಮಾತಿಗೆ ಪ್ರೀತಮ್​ ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.

ಇನ್ನು ಡಿವೋರ್ಸ್​ ಘೋಷಣೆಗೂ ಮುನ್ನ ಸಮಂತಾ ಮತ್ತು ನಾಗಚೈತನ್ಯ ಕುರಿತು ವಿಶೇಷ ಕಾಳಜಿ ವಹಿಸಿದ್ದ ಶ್ರೀರೆಡ್ಡಿ, ‘ನಿಮ್ಮಿಬ್ಬರ ನಡುವೆ ಏನೇ ಆಗಿದ್ದರೂ ಸರಿ. ನೀವಿಬ್ಬರೂ ಒಟ್ಟಿಗೆ ಬಾಳಬೇಕು. ನಿಮ್ಮ ಜೋಡಿ ಹಲವರಿಗೆ ಸ್ಫೂರ್ತಿ. ನೀವು ಮಾದರಿ’ ಎಂದಿದ್ದರು.
ಗುತ್ತಿಗೆದಾರನಿಗೆ ತಾನೇ ಆಹ್ವಾನಿಸಿ ಮಂಚ ಹಂಚಿಕೊಂಡ ಲೇಡಿ! ಇವಳ ಹಿನ್ನೆಲೆ ಕೇಳಿದ್ರೆ ಬೆಚ್ಚಿಬೀಳ್ತೀರಿ

ವಿವಿಧ ಇಲಾಖಾ ಪರೀಕ್ಷೆಗಳಿಗೆ ಅರ್ಜಿ ಆಹ್ವಾನಿಸಿದ ಕೆಪಿಎಸ್​ಸಿ

ಲವ್​-ಸೆಕ್ಸ್​ ದೋಖಾ: ಎಎಸ್​ಐ ಸೇರಿ 8 ಮಂದಿ ವಿರುದ್ಧ ಎಫ್​ಐಆರ್! ಯುವತಿ ಸತ್ತ 11 ದಿನಕ್ಕೆ ಸಿಕ್ತು ಡೆತ್​ನೋಟ್​

ಬೇಯಿಸಿದ ಮೊಟ್ಟೆ ತಿಂದು ಪ್ರಾಣಬಿಟ್ಟ ಮಹಿಳೆ! ಮೊಟ್ಟೆ ಪ್ರಿಯರನ್ನ ಬೆಚ್ಚಿಬೀಳಿಸುತ್ತೆ ಈ ಘಟನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
