ಟೋಕಿಯೋ(ಜಪಾನ್):ಜಪಾನ್​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಟೋಕಿಯೋದಲ್ಲಿ ಸೋಮವಾರ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಪ್ರಧಾನಿ ಅವರು ವೇದಿಕೆ ಹತ್ತಿರ ಬರುತ್ತಿದ್ದಂತೆ ‘ಮೋದಿ, ಮೋದಿ, ಜೈಶ್ರೀರಾಮ್​’ ಎಂಬ ಘೋಷಣೆ ಮೊಳಗಿದವು.
ಜಪಾನ್‌ನಲ್ಲಿರುವ ಭಾರತೀಯ ಸಮುದಾಯಕ್ಕೆ ನನ್ನ ಕೃತಜ್ಞತೆಗಳು ಎನ್ನುತ್ತಾ ಭಾಷಣ ಆರಂಭಿಸಿದ ನರೇಂದ್ರ ಮೋದಿ, ಜಪಾನ್​ ಸಂಸ್ಕೃತಿಯನ್ನು ಸ್ವಾಮಿ ವಿವೇಕಾನಂದರು ಹೊಗಳುತ್ತಿದ್ದರು. ಜಪಾನ್​ನಿಂದ ವಿವೇಕಾನಂದರು ಸ್ಫೂರ್ತಿ ಪಡೆದಿದ್ದರು ಎಂದು ಸ್ಮರಿಸಿದರು. ನಾನು ಜಪಾನ್​ಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ಅಪಾರ ಪ್ರೀತಿ ಸಿಗುತ್ತದೆ. ಭಾರತದ ಅನೇಕರು ಜಪಾನ್​​ನಲ್ಲಿ ಉಳಿದುಕೊಂಡು, ಇಲ್ಲಿನ ಸಂಸ್ಕೃತಿ ಅಳವಡಿಸಿಕೊಂಡಿದ್ದೀರಿ. ಆದರೂ, ಭಾರತದ ಸಂಸ್ಕೃತಿ ಮತ್ತು ಭಾಷೆ ಬಗ್ಗೆ ಅಪಾರ ಪ್ರೀತಿ ಹೊಂದಿರುವುದು ಹೆಮ್ಮೆಯ ವಿಚಾರ ಎಂದರು.
Grateful to the Indian community in Japan for their warm reception. Addressing a programme in Tokyo.https://t.co/IQrbSvVrns
— Narendra Modi (@narendramodi)May 23, 2022

ಭಾರತ, ಅಮೆರಿಕ, ಜಪಾನ್ ಹಾಗೂ ಆಸ್ಟ್ರೇಲಿಯಾ ರಾಷ್ಟ್ರಗಳು ರಚನೆ ಮಾಡಿಕೊಂಡಿರುವ ಬಲಿಷ್ಠ ಕ್ವಾಟ್ ಕೂಡದ ಮಹತ್ವದ ಸಭೆ ಸೋಮವಾರ ಆರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮೋದಿಯವರಿಗೆ ಆಹ್ವಾನ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಮೋದಿಯವರು ಭೇಟಿ ಕೊಟ್ಟಿದ್ದು, ಅವರಿಗೆ ಅದ್ದೂರಿ ಸ್ವಾಗತ ಸಿಕ್ಕಿದೆ. ಕಳೆದ 8 ವರ್ಷಗಳಲ್ಲಿ ಜಪಾನ್‌ಗೆ 5ನೇ ಭೇಟಿ ಇದಾಗಿದೆ.
ನಾವೀನ್ಯತೆಯ ಹೂಡಿಕೆಗಳು, ತಂತ್ರಜ್ಞಾನದಿಂದ ಜವಳಿ, ಸುಧಾರಣೆಗಳು ಸ್ಟಾರ್ಟ್‌ಅಪ್‌ಗಳು ಸೇರಿ ವಿವಿಧ ವಿಷಯಗಳ ಮೇಲೆ ಈ ಸಭೆ ಕೇಂದ್ರೀಕೃತವಾಗಿದೆ. ಭಾರತದ ಕಡೆಗೆ ಹೆಚ್ಚಿನ ಉತ್ಸಾಹವಿದೆ ಮತ್ತು ಭಾರತದ ಯುವಕರ ಉದ್ಯಮಶೀಲತೆಯ ಕೌಶಲದತ್ತ ಆಕರ್ಷಣೆ ಹೆಚ್ಚುತ್ತಿದೆ ಎಂದು ನರೇಂದ್ರ ಮೋದಿ ಟ್ವೀಟ್​ ಮಾಡಿದ್ದಾರೆ.
VIDEO: ಟೋಕಿಯೋದಲ್ಲಿ ಪ್ರಧಾನಿ: ಬಾಲಕನ ಮಾತಿಗೆ ಮನಸೋತು, ಇದನ್ನು ಹೇಗೆ ಕಲಿತೆ ಎಂದ ಮೋದಿ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
