ಜ್ಯೂರಿಚಲ್: ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್​​ ಚೋಪ್ರಾ, ಮತ್ತೊಂದು ದಾಖಲೆ ಬರೆದಿದ್ದಾರೆ. ಸ್ವಿಟ್ಜರ್ಲೆಂಡ್‌ನಲ್ಲಿ ನಡೆದ ಜ್ಯೂರಿಚ್ ಡೈಮಂಡ್ ಲೀಗ್-2022 ಸ್ಪರ್ಧೆಯಲ್ಲಿ ಗೆದ್ದ ನೀರಜ್​, ಡೈಮಂಡ್​ ಲೀಗ್​ ಟ್ರೋಫಿಗೆ ಮುತ್ತಿಟ್ಟರು. ಆ ಮೂಲಕ ಡೈಮಂಡ್ ಲೀಗ್​ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಎನಿಸಿಕೊಂಡರು.
ಮೋಡ ಕವಿದ ವಾತಾವರಣದ ನಡುವೆಯೂ ಲೆಟ್ಜಿಗ್ರಂಡ್ ಸ್ಟೇಡಿಯಂನಲ್ಲಿ ಗುರುವಾರ ರಾತ್ರಿ ಡೈಮಂಡ್ ಲೀಗ್ ನಡೆಯಿತು. ‘ನೀರಜ್​ರ ಮೊದಲ ಎಸೆತ ಫೌಲ್‌ ಆಯಿತು. ಎರಡನೇ ಪ್ರಯತ್ನದಲ್ಲಿ 88.44 ಮೀ. ದೂರ ಜಾವೆಲಿನ್ ಎಸೆದು ಅಗ್ರಸ್ಥಾನಕ್ಕೆ ಜಿಗಿದರು. ಮುಂದಿನ ನಾಲ್ಕು ಎಸೆತದಲ್ಲಿ 88.00 ಮೀ., 86.11 ಮೀ., 87.00 ಮೀ. ಮತ್ತು 83.60 ಮೀ. ದೂರಕ್ಕೆ ಜಾವೆಲಿನ್​ ಎಸೆದು ಚಾಂಪಿಯನ್​ ಆಗಿ ಹೊರ ಹೊಮ್ಮಿದರು.
Golds,Silvers done, he gifts a 24-carat Diamond 💎 this time to the nation 🇮🇳🤩
Ladies & Gentlemen, salute the great#NeerajChoprafor winning#DiamondLeaguefinals at#ZurichDLwith 88.44m throw.
FIRST INDIAN🇮🇳 AGAIN🫵🏻#indianathletics🔝
X-*88.44*💎-86.11-87.00-6T😀pic.twitter.com/k96w2H3An3
— Athletics Federation of India (@afiindia)September 8, 2022

ಒಲಿಂಪಿಕ್ ಬೆಳ್ಳಿ ಪದಕ ವಿಜೇತ ಜೆಕ್ ಗಣರಾಜ್ಯದ ಜಾಕುಬ್ ವಡ್ಲೆಜ್ ಅವರು ತಮ್ಮ ನಾಲ್ಕನೇ ಪ್ರಯತ್ನದಲ್ಲಿ 86.94 ಮೀ ಎಸೆತದೊಂದಿಗೆ ಎರಡನೇ ಸ್ಥಾನ ಪಡೆದರು. ಜರ್ಮನಿಯ ಜೂಲಿಯನ್ ವೆಬರ್ 83.73 ಮೀ. ದೂರ ಎಸೆತದೊಂದಿಗೆ ಮೂರನೇ ಸ್ಥಾನ ಪಡೆದರು.
ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಒಲಿಂಪಿಕ್ಸ್​ ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕ ತಂದು ಕೊಟ್ಟ ಕೀರ್ತಿಗೆ ಪಾತ್ರವಾಗಿದ್ದಾರೆ ಹರಿಯಾಣ ಮೂಲದ ನೀರಜ್​ ಚೋಪ್ರಾ. ಇತ್ತೀಚಿಗೆ ನಡೆದ ಫಿನ್‌ಲ್ಯಾಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಕ್ರೀಡಾಕೂಟ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನೇ ಮುರಿದಿದ್ದರು.
24 ವರ್ಷ ವಯಸ್ಸಿನ ನೀರಜ್​, 2021ರ ಆಗಸ್ಟ್​ 7ರಂದು ಟೋಕಿಯೋ ಒಲಿಂಪಿಕ್ಸ್​ನಲ್ಲಿ 87.58 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. 2021ರ ಮಾರ್ಚ್​ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್​ ಅನ್ನು 88.07 ಮೀಟರ್​ ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು.
Koo App
Golden Boy is Unstoppable! Congratulations to Neeraj Chopra on becoming the first Indian to win the #DiamondLeague title in with a massive throw of 88.4m at the #ZurichDL We’re so proud Champion! #Javelin
–Nitin Gadkari (@nitin.gadkari)9 Sep 2022

ಅನೇಕ ಪ್ರಥಮಗಳ ಒಡತಿ ರಾಣಿ ಎಲಿಜಬೆತ್​! ಇಲ್ಲಿದೆ ಜೀವನಪಥ… ತನ್ನ ಅಜ್ಜಿ ವಿಕ್ಟೋರಿಯಾ ಹೆಸರಲ್ಲಿದ್ದ ದಾಖಲೆಯನ್ನೂ ಮುರಿದಿದ್ದರು

ಕಲಾತ್ಮಕ ಸಹಿಯ ಶಾಂತಯ್ಯ ಇನ್ನಿಲ್ಲ: ಸಾವಲ್ಲೂ ಸಾರ್ಥಕತೆ ಮೆರೆದ ನಿವೃತ್ತ ಉಪನೋಂದಣಾಧಿಕಾರಿ

ಯುವತಿ ಜತೆ ಮೈಸೂರಿನ ಲಾಡ್ಜ್​ನಲ್ಲಿ ರೆಡ್​ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − six =
Remember me
