ದೆಹಲಿ:ಟೋಕಿಯೋ ಒಲಿಂಪಿಕ್ಸ್​ ಕ್ರೀಡಾಕೂಟದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದ ಭಾರತದ ಜಾವೆಲಿನ್ ಥ್ರೋ ಅಥ್ಲೀಟ್ ನೀರಜ್​​ ಚೋಪ್ರಾ, ಇದೀಗ ಮತ್ತೊಂದು ದಾಖಲೆ ಬರೆದಿದ್ದಾರೆ. ಫಿನ್‌ಲ್ಯಾಂಡ್‌ನಲ್ಲಿ ನಡೆದ ಪಾವೊ ನೂರ್ಮಿ ಗೇಮ್ಸ್‌ನಲ್ಲಿ 89.30 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಬೆಳ್ಳಿ ಪದಕದೊಂದಿಗೆ ತಮ್ಮ ಹಿಂದಿನ ರಾಷ್ಟ್ರೀಯ ದಾಖಲೆಯನ್ನು ಮುರಿದಿದ್ದಾರೆ.
24 ವರ್ಷ ವಯಸ್ಸಿನ ನೀರಜ್​, 2021ರ ಆಗಸ್ಟ್​ 7ರಂದು ಟೋಕಿಯೋ ಒಲಿಂಪಿಕ್ಸ್​ನಲ್ಲಿ 87.58 ಮೀಟರ್​ ದೂರಕ್ಕೆ ಜಾವೆಲಿನ್​ ಎಸೆದು ಸ್ವರ್ಣ ಪದಕಕ್ಕೆ ಮುತ್ತಿಟ್ಟಿದ್ದರು. 2021ರ ಮಾರ್ಚ್​ನಲ್ಲಿ ಪಟಿಯಾಲಾದಲ್ಲಿ ಜಾವೆಲಿನ್​ ಅನ್ನು 88.07 ಮೀಟರ್​ ದೂರಕ್ಕೆ ಎಸೆದು ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದರು. ಈಗ ಫಿನ್‌ಲ್ಯಾಂಡ್‌ನ ಸ್ಪರ್ಧೆಯ ಮೊದಲ ಸುತ್ತಿನಲ್ಲಿ 86.92 ಮೀಸರ್​ ದೂರಕ್ಕೆ ಜಾವೆಲಿನ್​ ಎಸೆದ ನೀರಜ್​, 2ನೇ ಅವಕಾಶದಲ್ಲಿ 89.30 ಮೀಟರ್​ ದೂರಕ್ಕೆ ಜಾವೆಲಿನ್​ ಮುಟ್ಟಿಸಿದರು. ಆ ಮೂಲಕ ತನ್ನದೇ ಹಿಂದಿನ ದಾಖಲೆಯನ್ನು ಮುರಿದರು. ಇನ್ನು ಫಿನ್‌ಲ್ಯಾಂಡ್‌ನ 25 ವಯಸ್ಸಿನ ಓಲಿವರ್​ ಹೆಲಾಂಡರ್​ 2ನೇ ಅವಕಾಶದಲ್ಲಿ 89.83ಮೀಟರ್​ ದೂರಕ್ಕೆ ಜಾವೆಲಿನ್​ ಎಸೆದು ಚಿನ್ನದ ಪದಕ ಗೆದ್ದರು. ಗ್ರೆನಡಾದ ಆ್ಯಂಡರ್​ಸನ್​ ಪೀಟರ್ಸ್​ ಅವರು 86.60 ಮೀಟರ್​ ದೂರಕ್ಕೆ ಎಸೆದು 3ನೇ ಸ್ಥಾನ ಪಡೆದರು.
Olympic Champion Neeraj Chopra settles for a Silver Medal with a New National Record Throw of 89.30m at the Paavo Nurmi Games in Finland.@afiWe can see several performance hikes in various events this season. Hope for more further.@Adille1@Media_SAI@SPORTINGINDIAtwpic.twitter.com/cBLg4Ke8nh
— Athletics Federation of India (@afiindia)June 14, 2022

ಒಲಿಂಪಿಕ್ಸ್​ ಅಥ್ಲೆಟಿಕ್ಸ್​ನಲ್ಲಿ ಭಾರತಕ್ಕೆ ಮೊಟ್ಟಮೊದಲ ಬಾರಿಗೆ ಸ್ವರ್ಣ ಪದಕ ತಂದು ಕೊಟ್ಟ ಕೀರ್ತಿ ಕೂಡ ಹರಿಯಾಣ ಮೂಲದ ನೀರಜ್​ ಚೋಪ್ರಾಗೆ ಸಲ್ಲುತ್ತೆ. ಟೋಕಿಯೋ ಒಲಿಂಪಿಕ್ಸ್ ಬಳಿಕ ನೀರಜ್, ಪಾಲ್ಗೊಂಡ ಮೊದಲ ಅಂತಾರಾಷ್ಟ್ರೀಯ ಕ್ರೀಡಾಕೂಟ ಫಿನ್‌ಲ್ಯಾಂಡ್‌ನಲ್ಲಿ ನಡೆದ ಈ ಸ್ಪರ್ಧೆಯಾಗಿದೆ.
Koo App
शेर वापिस आ गया है 💪 🙌 Golden Army Man Neeraj Chopra created new national record in Javelin by a massive throw of 89.30m at the Paavo Nurmi Games!. Old record (87.58 Mtr) was also on his name He is participating first time in any competition after Olympics. Congrats Champ💪 जय हिन्द 🇮🇳
–Major Surendra Poonia (@majorpoonia)15 June 2022

ಬೆಳ್ಳಿ ಗೆದ್ದು ದಾಖಲೆ ಮಾಡಿದ ನೀರಜ್ ಚೋಪ್ರಾ ಅವರಿಗೆ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಶುಭಾಶಯ ತಿಳಿಸಿದರು.

Koo App
Brilliant and Spectacular!!! Congratulations to ace Javelin thrower & nation’s pride Neeraj Chopra on clinching Silver & setting a new national record with 89.30 metres at #PaavoNurmiGames in Finland. Well Done Champion! Keep Succeeding with such fierce passion & dedication.
–Nitin Gadkari (@nitin.gadkari)15 June 2022


VIDEO| ಅಂಡರ್​ವಾಟರ್​ ಜಾವೆಲಿನ್​! ಚಿನ್ನದ ಹುಡುಗ ನೀರಜ್​ ಚೋಪ್ರಾರ ಈ ವಿಡಿಯೋ ನೋಡಿ

ಅಕ್ಕನ ಚಿತೆಗೆ ಹಾರಿ ಪ್ರಾಣಬಿಟ್ಟ ತಮ್ಮ! ನೋವಲ್ಲೇ 430km ದೂರದಿಂದ ಬಂದವ ನೋಡನೋಡುತ್ತಿದ್ದಂತೆ ಸುಟ್ಟು ಕರಕಲಾದ

ಬಿಜೆಪಿ ಶಾಸಕರ ದಬ್ಬಾಳಿಕೆ? ಹಾವೇರಿಯಲ್ಲಿ ಓರ್ವ ಮಹಿಳೆ ಸೇರಿ ನಾಲ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
