ಕೋಲ್ಹಾಪುರ:ಹಳ್ಳಿಗಳಲ್ಲಿ ಇಂದಿಗೂ ಕುಡಿಯುವ ನೀರಿನ ಸಮಸ್ಯೆ ಕಾಣಬಹುದು. ನೀರಿಗಾಗಿ ದಿನನಿತ್ಯ ಜಗಳಗಳೂ, ಪ್ರತಿಭಟನೆಗಳೂ ಕೂಡ ನಡೆಯುತ್ತಿರುತ್ತವೆ. ಆದರೆ ಇಲ್ಲೊಂದು ನವದಂಪತಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿಕೊಡಬೇಕೆಂದು ತಮ್ಮ ಹನಿಮೂನ್​ ಅನ್ನೇ ತ್ಯಾಗ ಮಾಡಿರುವ ಅಪರೂಪದ ಘಟನೆ ಮಹಾರಾಷ್ಟ್ರದ ಕೋಲ್ಹಾಪುರದಲ್ಲಿ ನಡೆದಿದೆ.
ನಿನ್ನೆಯಷ್ಟೇ ಹೊಸಜೀವನಕ್ಕೆ ಕಾಲಿಟ್ಟ ಈ ದಂಪತಿಯನ್ನು ಮೆರವಣಿಗೆ ಮಾಡಲಾಯಿತು. ಈ ವೇಳೆ ತಾವು ಮೆರವಣಿಗೆ ಹೊರಟಿದ್ದ ವಾಹನದ ಮೇಲೆ ನೀರಿನ ಸಮಸ್ಯೆ ಬಗೆಹರಿಸುವವರೆಗೂ ನಾವು ಹನಿಮೂನ್​ಗೆ ಹೋಗಲ್ಲ ಎಂದು ಬರೆಯಲಾಗಿತ್ತು.
ಮದುವೆ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕ್ ಪಡೆಯಲಾಗಿದ್ದು, ನೀರಿನ ಸಮಸ್ಯೆ ಬಗೆಹರಿಸದ ಮಹಾನಗರ ಪಾಲಿಕೆ ವಿರುದ್ಧ ಈ ರೀತಿ ಆಕ್ರೋಶ ಹೊರಹಾಕಿದ್ದಾರೆ. ಇಲ್ಲಿನ ಪೇಟೆ ಬಡಾವಣೆಯಲ್ಲಿ ಕಳೆದ ಆರು ತಿಂಗಳಿನಿಂದ ನೀರು ಸಿಗದೇ ಜನರು ಪರದಾಡುತ್ತಿದ್ದಾರೆ. ಇದರಿಂದ ಬೇಸತ್ತ ಈ ನವಜೋಡಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.
ವಿಶಾಲ್​​ ಹಾಗೂ ಅಪರ್ಣಾ ಈ ನವದಂಪತಿ ಈಗ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಪಟ್ಟು ಹಿಡಿದು ಕುಳಿತಿದ್ದಾರೆ. ವಿಶಾಲ್​ ವರದಕ್ಷಿಣೆ ರೂಪದಲ್ಲಿ ನೀರಿನ ಟ್ಯಾಂಕರ್​ ಕೊಡಿಸಬೇಕೆಂದು ಮಾಡಿದ್ದ ಮನವಿಯಂತೆ ಟ್ಯಾಂಕರ್​​ಅನ್ನು ಕೊಡಿಸಲಾಗಿತ್ತು.(ದಿಗ್ವಿಜಯ ನ್ಯೂಸ್​)
ತಾಂತ್ರಿಕ ದೋಷದಿಂದ ಕಾವೇರಿ ನದಿಯ ನಡುವೆಯೇ ನಿಂತ ಬೋಟ್​! ಜನರ ಪರದಾಟ

ಶ್ರೀಲಂಕಾ ಬಿಕ್ಕಟ್ಟು: ರಾಷ್ಟ್ರಪತಿ ನಿವಾಸದಲ್ಲಿರುವ ಸ್ವಿಮ್ಮಿಂಗ್​ಪೂಲ್​ನಲ್ಲೇ ಈಜಾಡುತ್ತಿರುವ ಪ್ರತಿಭಟನಾಕಾರರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − five =
Remember me
