ತ್ರಿಶ್ಶೂರು:ಕೋವಿಡ್ ನಿಯಮಗಳ ಕಾರಣ ಮದುವೆ ಮತ್ತು ಇತರೆ ಶುಭಕಾರ್ಯಗಳಿಗೆ ಎಲ್ಲರನ್ನೂ ಆಹ್ವಾನಿಸುವುದು ಇನ್ನೂ ಕಷ್ಟ ಈ ಊರಿನಲ್ಲಿ!. 40 ಜನರನ್ನಷ್ಟೇ ಆಹ್ವಾನಿಸಲಷ್ಟೇ ಅವಕಾಶ. ಪರಿಹಾರ ಏನು ಅಂತ ಚಿಂತೆಯಲ್ಲಿದ್ದವರ ನೆರವಿಗೆ ಬಂತು ಹೊಸ ಟ್ರೆಂಡ್! ಹೀಗಾಗಿ ಈ ಮದುವೆಯಲ್ಲಿ 150 ಕುಟುಂಬದವರು ನೇರವಾಗಿಯೇ ಪಾಲ್ಗೊಂಡರು.
ಮೂಝಿಕ್ಕುಲಂ ಎಂಬಲ್ಲಿ ನಡೆದ ವಿವಾಹವಿದು. ಮೂಝಿಕ್ಕುಲಂ ಸಾಲಾ ಸಂಸ್ಥಾಪಕ ಟಿ.ಆರ್​.ಪ್ರೇಮಕುಮಾರ್ ಅವರ ಪುತ್ರ ವಿವೇಕ್ ಹಾಗೂ ಕೊಯಮತ್ತೂರು ನಿವಾಸಿ ನಿಶಾ ನಡುವಿನ ವಿವಾಹ. ಕೋವಿಡ್ ನಿಯಮಗಳ ಕಾರಣ 40ಕ್ಕೂ ಕಡಿಮೆ ಜನರನ್ನು ವಿವಾಹ ಸ್ಥಳಕ್ಕೆ ಆಹ್ವಾನಿಸಿದ ಪ್ರೇಮಕುಮಾರ್​, ಉಳಿದವರು ಅವರವರ ಮನೆಯಿಂದಲೇ ವಿವಾಹ ವೀಕ್ಷಿಸುವ ಹಾಗೂ ಸವಿಯೂಟ ಉಣ್ಣುವ ವ್ಯವಸ್ಥೆ ಮಾಡಿದರು.
ಇದನ್ನೂ ಓದಿ:ಸರ್ಕಾರಿ ಕಚೇರಿ ಪಿರಿಪಿರಿ; ವಿಜಯವಾಣಿ ರಿಯಾಲಿಟಿ ಚೆಕ್​
ಕಾರ್ಬನ್ ನ್ಯೂಟ್ರಲ್ ಫುಡ್​ಗಳನ್ನು ಉತ್ತೇಜಿಸುವ ಪ್ರೇಮಕುಮಾರ್​, ನೆರೆಮನೆಯವರಿಗೆಲ್ಲ ಕಾರ್ಬನ್ ಫ್ರೀ ಫುಡ್ ಪ್ಯಾಕೆಟ್​ಗಳನ್ನು ಉಡುಗೊರೆಯಾಗಿ ಕಳುಹಿಸಿದರು. ಆ ಪ್ಯಾಕೆಟ್​ನಲ್ಲಿ ಕಿತ್ತಳೆ, ಪೇರಳೆ (ಸೀಬೆಕಾಯಿ), ಸೇಬು, ಕದಳಿ ಹಣ್ಣು, ಗೋಡಂಬಿ, ಬಾದಾಮಿ, ತರಕಾರಿ ಬೀಜಗಳು, ಫಿಂಗರ್​ ಮಿಲೆಟ್​ ಬಾಲ್ಸ್, ಕಾರ್ಬನ್ ನ್ಯೂಟ್ರಲ್​ ಕಿಚನ್​ ಹ್ಯಾಂಡ್​ ಬುಕ್​ ಮತ್ತು ಅಡಕೆ ಹಾಳೆಯಲ್ಲಿ ತಯಾರಿಸಿ ಲಿಲ್ಲಿ ಹೂವುಗಳಿದ್ದವು.
ಇದನ್ನೂ ಓದಿ:ರೈತರ ಬಹುಕಾಲದ ಬೇಡಿಕೆ ಈಡೇರಿದೆ; ಮನ್​ ಕಿ ಬಾತ್​ನಲ್ಲಿ ಪ್ರಧಾನಿ ಸಮರ್ಥನೆ
ಆ ಪೆಟ್ಟಿಗೆಯ ಮುಚ್ಚಳದ ಮೇಲೆ ಒಂದು ಕ್ಯೂಆರ್ ಕೋಡ್ ಇತ್ತು. ಅದನ್ನು ಮೊಬೈಲ್​ನಲ್ಲಿ ಸ್ಕ್ಯಾನ್ ಮಾಡಿದರೆ ಇವರ ವಿವಾಹ ಕಾರ್ಯಕ್ರಮ ನೋಡುವುದಕ್ಕೆ ಸಾಧ್ಯವಿತ್ತು. ಈ ಉಡುಗೊರೆ ಪೊಟ್ಟಣವನ್ನು ಪ್ರೇಮಕುಮಾರ್ ಮತ್ತು ಅವರ ಪತ್ನಿ ಸುಧಾಮಣಿ ಊರಿನ ಮನೆಗಳಿಗೆಲ್ಲ ಸ್ವತಃ ತೆರಳಿ ನೀಡಿ ಮದುವೆಗೆ ಆಹ್ವಾನಿಸಿದ್ದರು. (ಏಜೆನ್ಸೀಸ್)
ಶ್ರೀ ಗುರುನಾನಕರಿಗೆ ಗೌರವ ಸಲ್ಲಿಸಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 − two =
Remember me
