ನವದೆಹಲಿ:ಔಷಧಗಳು, ಸೌಂದರ್ಯವರ್ಧಕಗಳು ಮತ್ತು ವೈದ್ಯಕೀಯ ಪರಿಕರಗಳ ಕ್ಷೇತ್ರಕ್ಕೆ ಸಂಬಂಧಿಸಿ ಹೊಸ ಕಾನೂನು ರೂಪಿಸಲು ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿದೆ. ಎಂಟು ಸದಸ್ಯರ ಸಮಿತಿಗೆ ಭಾರತದ ಔಷಧಗಳ ಮಹಾ ನಿಯಂತ್ರಕ (ಡಿಸಿಜಿಐ) ವಿ.ಜಿ. ಸೊಮಾನಿ ಅಧ್ಯಕ್ಷರಾಗಿದ್ದಾರೆ. ನೂತನ ಕಾನೂನಿನ ಕರಡುಗಳನ್ನು ನವೆಂಬರ್ 30ರೊಳಗೆ ಸಲ್ಲಿಸುವಂತೆ ಸಮಿತಿಗೆ ಸರ್ಕಾರ ಸೂಚಿಸಿದೆ.
1940ರ ಡ್ರಗ್ಸ್ ಮತ್ತು ಕಾಸ್ಮೆಟಿಕ್ಸ್ ಕಾನೂನು ಔಷಧಗಳು, ಸೌಂದರ್ಯವರ್ಧಕಗಳ ಉತ್ಪಾದನೆ ಮತ್ತು ಆಮದು, ವಿತರಣೆ ಹಾಗೂ ಮಾರಾಟವನ್ನು ನಿಯಂತ್ರಿಸುತ್ತದೆ. ವೈದ್ಯಕೀಯ ಪರಿಕರಗಳನ್ನೂ ಅದರ ವ್ಯಾಪ್ತಿಗೆತರಲು ಇತ್ತೀಚೆಗೆ ಕಾನೂನಿಗೆ ತಿದ್ದುಪಡಿ ತರಲಾಗಿದೆ. ಹೊಸ ಔಷಧ, ಸೌಂದರ್ಯವರ್ಧಕ ಹಾಗೂ ವೈದ್ಯಕೀಯ ಪರಿಕರ ಕಾನೂನು ರೂಪಿಸಲು ಅನುಕೂಲವಾಗುವ ಮಸೂದೆ ರೂಪಿಸುವುದು ಈ ಸಮಿತಿಯ ಉದ್ದೇಶವಾಗಿದೆ.
ಸದಸ್ಯರು ಯಾರು?: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ನಿರ್ದೇಶಕ ರಾಜೀವ್ ವಾಧ್ವಾನ್, ಜಂಟಿ ಔಷಧ ನಿಯಂತ್ರಕ ಈಶ್ವರ್ ರೆಡ್ಡಿ, ಐಎಎಸ್ ಅಧಿಕಾರಿ ಎನ್.ಎಲ್. ಮೀನಾ, ಜಂಟಿ ಔಷಧ ನಿಯಂತ್ರಕ ಎ.ಕೆ. ಪ್ರಧಾನ್ ಹಾಗೂ ಹರಿಯಾಣ, ಗುಜರಾತ್ ಮತ್ತು ಮಹಾರಾಷ್ಟ್ರದ ಔಷಧ ನಿಯಂತ್ರಕರು ಸಮಿತಿಯ ಸದಸ್ಯರು. ಇಂಥದ್ದೊಂದು ಹೊಸ ಕಾನೂನು ಅತ್ಯಗತ್ಯ ಎಂಬುದು ಔಷಧ ಕ್ಷೇತ್ರದ ಉದ್ಯಮಿಗಳ ಬಹಳ ಕಾಲದ ಬೇಡಿಕೆಯಾಗಿದೆ.
1940ರ ಕಾನೂನು ತೀರಾ ಅಪ್ರಸ್ತುತವಾಗಿದೆ. ಹಲವು ತಿದ್ದುಪಡಿಗಳಾಗಿರುವುದರಿಂದ ಅನೇಕ ಗೊಂದಲ ಹಾಗೂ ಅಸ್ಪಷ್ಟತೆಗಳು ಉಂಟಾಗಿವೆ ಎಂದು ಔಷಧ ಉದ್ಯಮದ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 13 =
Remember me
