ನವದೆಹಲಿ: ಕ್ಯಾಲೆಂಡರ್ ವರ್ಷ 2023ಕ್ಕೆ ವಿದಾಯ ಹೇಳಲು ದಿನಗಣನೆ ಆರಂಭವಾಗಿದೆ. ದೈನಂದಿನ ಜನಜೀವನದ ಮೇಲೆ ಪರಿಣಾಮ ಬೀರುವಂಥ ಅನೇಕ ಬದಲಾವಣೆಗಳು 2024ರ ಜನವರಿಯಿಂದ ಜಾರಿಗೆ ಬರಲಿವೆ. ಡಿಸೆಂಬರ್ 31ರ ಮಧ್ಯರಾತ್ರಿ ಕಳೆಯುತ್ತಲೇ ಜಾರಿಗೆ ಬರಲಿರುವ ಬದಲಾವಣೆಗಳತ್ತ ಒಂದು ಪಕ್ಷಿ ನೋಟ ಇಲ್ಲಿದೆ.
ಡಿಮ್ಯಾಟ್ ನಾಮನಿರ್ದೇಶನ:ಷೇರು ಮತ್ತು ಸೆಕ್ಯುರಿಟಿಗಳನ್ನು ವಿದ್ಯುನ್ಮಾನ ರೂಪದಲ್ಲಿ ಹೊಂದಲು ಬಳಕೆಯಾಗುವ ಡಿಮ್ಯಾಟ್ ಖಾತೆಗೆ 2024ರ ಜನವರಿ 1ರೊಳಗೆ ಜನರು ತಮ್ಮ ನಾಮನಿರ್ದೇಶನ ಘೋಷಣೆಗಳನ್ನು ಸಲ್ಲಿಸಬೇಕು ಎಂಬುದನ್ನು ಷೇರು ಮಾರುಕಟ್ಟೆ ನಿಯಂತ್ರಣ ಸಂಸ್ಥೆ ಸೆಬಿ ಕಡ್ಡಾಯಗೊಳಿಸಿದೆ. ಅದನ್ನು ಪಾಲಿಸಲು ವಿಫಲರಾದವರು ಷೇರು ವ್ಯವಹಾರ ನಡೆಸಲು ಸಾಧ್ಯವಾಗುವುದಿಲ್ಲ.
ಬ್ಯಾಂಕ್ ಲಾಕರ್ ಒಪ್ಪಂದ:ಡಿಸೆಂಬರ್ 31ರೊಳಗೆ ಪರಿಷ್ಕೃತ ಬ್ಯಾಂಕ್ ಲಾಕರ್ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಅವರ ಲಾಕರ್​ಗಳು ಸ್ಥಗಿತಗೊಳ್ಳುತ್ತವೆ (ಫ್ರೀಜ್) ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಎಚ್ಚರಿಸಿದೆ.
ಆಧಾರ್ ಉಚಿತ ತಿದ್ದುಪಡಿ:ಆಧಾರ್ ವಿವರಗಳನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಸಕಾಲಿಕಗೊಳಿಸುವ ಗಡುವು ಡಿ. 31ಕ್ಕೆ ಮುಗಿಯಲಿದ್ದು, ನಂತರ ಈ ಪ್ರಕ್ರಿಯೆಗೆ 50 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ.
ಸಿಮ್ ಕಾರ್ಡ್ ಕೆವೈಸಿ:ಮೊಬೈಲ್ ಫೋನ್ ಬಳಕೆದಾರರು ಹೊಸ ಸಿಮ್ ಖರೀದಿಸಬೇಕಾದರೆ ಸಲ್ಲಿಸುವ ಪೇಪರ್-ಆಧಾರಿತ ಗ್ರಾಹಕರ ವಿವರ (ಕೆವೈಸಿ) ಡಿಸೆಂಬರ್ 31ರ ನಂತರ ಪ್ರಯೋಜನಕ್ಕೆ ಬರುವುದಿಲ್ಲ ಎಂದು ದೂರಸಂಪರ್ಕ ಇಲಾಖೆ ಸ್ಪಷ್ಟಪಡಿಸಿದೆ.
ವಿದ್ಯಾರ್ಥಿಗಳಿಗೆ ಕೆನಡಾ ದುಬಾರಿ:ಅಧ್ಯಯನಕ್ಕಾಗಿ ಬರುವ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಸಂಬಂಧಿಸಿದ ನಿಯಮಗಳಲ್ಲಿ 2024 ಜನವರಿ 1ರಿಂದ ಬದಲಾವಣೆ ತರಲು ಕೆನಡಾ ಸರ್ಕಾರ ನಿರ್ಧರಿಸಿದೆ. ಈ ಬದಲಾವಣೆಯಿಂದಾಗಿ ವಿದೇಶಿ ವಿದ್ಯಾರ್ಥಿಗಳ ವೆಚ್ಚ ದುಬಾರಿಯಾಗಲಿದೆ. ಇದು ಕೆನಡಾಕ್ಕೆ ಆಗಮಿಸುವ ವಿದ್ಯಾರ್ಥಿಗಳ ಸಂಖ್ಯೆ ಮೇಲೆ ಪರಿಣಾಮ ಬೀರಲಿದೆ. ಕೆನಡಾದಲ್ಲಿ ಶಿಕ್ಷಣ ಪಡೆಯುವ ಆಸಕ್ತ ಭಾವಿ ವಿದ್ಯಾರ್ಥಿಗಳು ತಮ್ಮ ಬಳಿ 20,635 ಡಾಲರ್ ಹಣವಿದೆ ಎನ್ನುವುದನ್ನು ತೋರಿಸಬೇಕಾಗುತ್ತದೆ. ಸುಮಾರು 2 ದಶಕಗಳಿಂದ ಆ ಮೊತ್ತ 10,000 ಡಾಲರ್ ಆಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 7 =
Remember me
