ಜೆರುಸಲೇಂ:ಮುಂದಿನ ಕೆಲವು ತಿಂಗಳಲ್ಲಿ ಕರೊನಾ ಸೋಂಕಿನ ಒಮಿಕ್ರಾನ್​ ವೈರಸ್​ನ ಉಪತಳಿಗಳು ಮುಕ್ತಾಯಗೊಳ್ಳಬಹುದು. ಆದರೆ ಬೇಸಿಗೆ ಕಾಲದಲ್ಲಿ ಡೆಲ್ಟಾ ಅಥವಾ ಬೇರೆ ಯಾವುದಾದರೂ ಕರೊನಾ ವೈರಸ್​ನಿಂದಾಗಿ ಸಾಂಕ್ರಾಮಿಕತೆಯ ಹೊಸ ಅಲೆ ಉಂಟಾಗಬಹುದು ಎಂದು ಇಸ್ರೇಲ್​ನಲ್ಲಿ ನಡೆಸಲಾದ ಅಧ್ಯಯನವೊಂದರ ಲಿತಾಂಶ ಎಚ್ಚರಿಕೆ ನೀಡಿದೆ.
ಡೆಲ್ಟಾ ತನ್ನ ಹಿಂದಿನ ಉಪತಳಿಗಳನ್ನು ನಾಶ ಮಾಡಿದಂತೆ ಒಮಿಕ್ರಾನ್​ ತನ್ನ ಅಪಾಯಕಾರಿ ಉಪಪ್ರಭೇದಗಳನ್ನು ಸ್ಥಗಿತಗೊಳಿಸಿಲ್ಲ. ಅವು ಮತ್ತೆ ತಲೆಯೆತ್ತುವ ಆತಂಕವಿದೆ ಎಂದು “ಸೈನ್ಸ್​ ಆ್​ ಟೋಟಲ್​ ಎನ್​ವಿರಾನ್​ಮೆಂಟ್​’ ಪತ್ರಿಕೆಯಲ್ಲಿ ಪ್ರಕಟವಾಗಿರುವ ವರದಿ ಹೇಳಿದೆ. ಇಸ್ರೇಲ್​ನ ನೆಗೆವ್​ನ ಬೆನ್​&ಗುರಿಯಾನ್​ ವಿಶ್ವವಿದ್ಯಾಲಯ (ಬಿಜಿಯು) ಸಂಶೋಧಕರು ಅಧ್ಯಯನ ನಡೆಸಿದ್ದರು.
ಬೀಜಿಂಗ್​ನಲ್ಲಿ ಸೆಮಿಲಾಕ್​ಡೌನ್​:ವೇಗವಾಗಿ ಹರಡುವ ಒಮಿಕ್ರಾನ್​ ಪ್ರಭೇದವನ್ನು ಕಟ್ಟಿ ಹಾಕಲು ಪ್ರಯಾಸ ಪಡುತ್ತಿರುವ ಚೀನಾದ ಅಧಿಕಾರಿಗಳು, ಕಠಿಣ ಕ್ರಮಗಳ ಅಂಗವಾಗಿ ಬುಧವಾರ ರಾಜಧಾನಿ ಬೀಜಿಂಗ್​ನಲ್ಲಿ ಸೆಮಿಲಾಕ್​ಡೌನ್​ ಜಾರಿಗೊಳಿಸಿದ್ದಾರೆ. ಅನೇಕ ಮೆಟ್ರೋ ಸ್ಟೇಷನ್​ಗಳು, ಶಾಲೆಗಳು, ರೆಸ್ಟೋರೆಂಟ್​ಗಳು ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ಅಧಿಕಾರಿಗಳು ಮುಚ್ಚಿದ್ದಾರೆ. ಅತ್ತ ದೇಶದ ಆರ್ಥಿಕ ಚಟುವಟಿಕೆಗಳ ಕೇಂದ್ರ ಶಾಂಘೈಯಲ್ಲಿ ತಿಂಗಳಾನುಗಟ್ಟಲೆಯಿಂದ ಅನುಷ್ಠಾನದಲ್ಲಿರುವ ರ್ನಿಬಂಧಗಳು ಮುಂದುವರಿದಿವೆ. ಬುಧವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಬೀಜಿಂಗ್​ನಲ್ಲಿ ಕರೊನಾ ಸೋಂಕಿನ 53 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ರಾಜಧಾನಿಯ ಸೋಂಕಿತರ ಸಂಖ್ಯೆ 500ನ್ನು ಮೀರಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಶಾಲೆಗಳ ಪುನಾರಂಭವನ್ನು ಒಂದು ವಾರದ ಅವಧಿಗೆ ಮುಂದೂಡಲಾಗಿದೆ. ಬೀಜಿಂಗ್​ನ ಒಟ್ಟು ಸಬ್​ವೇ ಸ್ಟೇಷನ್​ಗಳ ಪೈಕಿ ಶೇಕಡ 10 ಸ್ಟೇಷನ್​ ಹಾಗೂ 158 ಬಸ್​ ರೂಟ್​ ಮುಚ್ಚಲಾಗಿದೆ.
ಮರಣ ಹೆಚ್ಚಳಕ್ಕೆ ಕರೊನಾ ಕಾರಣವಲ್ಲ2019ಕ್ಕೆ ಹೋಲಿಸಿದರೆ 2020ರಲ್ಲಿ ದಾಖಲಾಗಿರುವ ಸಾವಿನ ಸಂಖ್ಯೆಯ ಏರಿಕೆಗೆ ಕರೊನಾವೇ ಸಂಪೂರ್ಣ ಕಾರಣವಲ್ಲ ಎಂದು ನೀತಿ ಆಯೋಗದ ಸದಸ್ಯ ವಿ.ಕೆ. ಪೌಲ್​ ಬುಧವಾರ ಪ್ರತಿಪಾದಿಸಿದ್ದಾರೆ. ಭಾರತದಲ್ಲಿ ಕೋವಿಡ್​ನಿಂದ “ಅಪಾರ ಪ್ರಮಾಣದಲ್ಲಿ’ ಸಾವು ಸಂಭವಿಸಿದೆ ಎಂದು ಕೆಲವು ಸಂಸ್ಥೆಗಳು ವರದಿಗಳನ್ನು ಪ್ರಕಟಿಸುವುದನ್ನು ನಿಲ್ಲಿಸಬೇಕು ಎಂದು ಕೋವಿಡ್​&19 ಕಾರ್ಯ ಪಡೆಯ ಮುಖ್ಯಸ್ಥರೂ ಆಗಿರುವ ಪೌಲ್​ ಸಲಹೆ ಮಾಡಿದ್ದಾರೆ. 2020 ಜನವರಿಯಿಂದ 2021 ಡಿಸೆಂಬರ್​ ನಡುವೆ ಭಾರತದಲ್ಲಿ ಸಂಭವಿಸಿರುವ ಕರೊನಾ ಸಾವಿನ ಸಂಖ್ಯೆ ವರದಿಯಾಗಿರುವುದಕ್ಕಿಂತ ಎಂಟು ಪಟ್ಟು ಹೆಚ್ಚಿದೆ ಎಂದು ಲ್ಯಾನ್ಸೆಟ್​ ಈಚೆಗೆ ಮಾಡಿರುವ ವರದಿಯನ್ನು ಉದಾಹರಿಸಿದ ಪೌಲ್​, ಈ ಪ್ರವೃತ್ತಿಯನ್ನು ನಿಲ್ಲಿಸಬೇಕೆಂದು ಕೋರಿದರು. ಕೇಂದ್ರ ಸರ್ಕಾರ ಮಂಗಳವಾರ, ಜನನ ಮತ್ತು ಮರಣ ವರದಿಗಳ ಆಧಾರದಲ್ಲಿ 2020ರ ಸಿವಿಲ್​ ರಿಜಿಸ್ಟ್ರೆಶನ್​ ವರದಿಯನ್ನು ಪ್ರಕಟಿಸಿತ್ತು.
3,205 ಹೊಸ ಕೇಸ್​, 31 ಸಾವುಬುಧವಾರ ಬೆಳಿಗ್ಗೆ ವರೆಗಿನ 24 ಗಂಟೆ ಅವಧಿಯಲ್ಲಿ ಭಾರತದಲ್ಲಿ ಕರೊನಾ ಸೋಂಕಿನ 3,205 ಹೊಸ ಪ್ರಕರಣಗಳು ವರದಿಯಾಗಿದ್ದು 31 ಜನರು ಮರಣಿಸಿದ್ದಾರೆ. ಸಕ್ರಿಯ ಕೇಸ್​ಗಳ ಸಂಖ್ಯೆ 19,509ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಕೋವಿಡ್​&19 ಸಾಂಕ್ರಾಮಿಕತೆಗೆ ದೇಶದಲ್ಲಿ ಬಲಿಯಾದವರ ಸಂಖ್ಯೆ 5,23,920ಕ್ಕೆ ತಲುಪಿದೆ. ದೈನಿಕ ಹಾಗೂ ಸಾಪ್ತಾಹಿಕ ಪಾಸಿಟಿವಿಟಿ ದರ ಅನುಕ್ರಮವಾಗಿ ಶೇಕಡ 0.98 ಹಾಗೂ ಶೇಕಡ 0.76 ಆಗಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + sixteen =
Remember me
