ಆಂಧ್ರ:ಸಾವು ಯಾವಾಗ? ಹೇಗೆ ಬರುತ್ತೆ ಎಂದು ಊಹಿಸಲೂ ಸಾಧ್ಯವಿಲ್ಲ ಎಂಬುದಕ್ಕೇ ಈ ಘಟನನೆಯೇ ಸಾಕ್ಷಿ. ನೂರಾರು ಕನಸಿನ ಬುತ್ತಿಯೊಂದಿಗೆ ಕಳೆದ ತಿಂಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಯುವತಿಯೊಬ್ಬಳು, ತಿರುಪತಿ ತಿಮ್ಮಪ್ಪನ ದರ್ಶನಕ್ಕೆಂದು ಹೋಗುವಾಗ ದುರಂತ ಅಂತ್ಯ ಕಂಡಿದ್ದಾಳೆ. ಗಂಡ ಮತ್ತು ಕುಟುಂಬಸ್ಥರ ಕಣ್ಣೆದುರಲ್ಲೇ ಜಲಸಮಾಧಿಯಾಗಿದ್ದಾಳೆ.
ಕರ್ನಾಟಕದ ರಾಯಚೂರು ಮೂಲದ ನವ ದಂಪತಿ ಸೇರಿ 7 ಮಂದಿ ಕಾರಿನಲ್ಲಿ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆಯಲೆಂದು ಶುಕ್ರವಾರ ಬಂದಿದ್ದರು. ಶುಕ್ರವಾರ ರಾತ್ರಿ ತಿರುಪತಿಯಲ್ಲಿ ಧಾರಾಕಾರ ಮಳೆಯಾಗಿದ್ದು, ವೆಸ್ಟ್​ ಚರ್ಚ್ ಸಮೀಪದ ರೈಲ್ವೆ ಅಂಡರ್​ ಪಾಸ್​ ಬ್ರಿಡ್ಜ್​ ಬಳಿ ನೆರೆ ಪರಿಸ್ಥಿತಿ ಸೃಷ್ಟಿಯಾಗಿತ್ತು. 8 ಅಡಿಗೂ ಹೆಚ್ಚು ಆಳದವರೆಗೂ ಮಳೆ ನೀರು ನಿಂತಿತ್ತು. ಈ ವೇಳೆ ನೀರಿನ ಆಳ ಅರಿಯದ ಚಾಲಕ, ಕಾರನ್ನ ಚಲಿಸಿದ್ದು, ನೋಡನೋಡುತ್ತಿದ್ದ ಕಾರು ನೀರಲ್ಲಿ ಮುಳುಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಕಾರಿನಲ್ಲಿದ್ದವರನ್ನ ಹೊರ ತೆಗೆಯಲು ಹರಸಾಹಸ ಪಟ್ಟರು.
ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿ ಕಾರಿನಲ್ಲಿದ್ದ 7 ಮಂದಿ ಪೈಕಿ 6 ಮಂದಿಯನ್ನ ಸುರಕ್ಷಿತವಾಗಿ ಹೊರಕ್ಕೆ ಕರೆತಂದಿದ್ದು, ನವವಧು ಕಾರಿನಲ್ಲೇ ಮೃತಪಟ್ಟಿದ್ದಾರೆ. ತನ್ನ ಕಣ್ಣೆದುರಲ್ಲೇ ಪತ್ನಿ ಜಲಸಮಾಧಿಯಾಗಿದ್ದನ್ನ ಕಂಡ ನವವಿವಾಹಿತನ ಆಕ್ರಂದನ ಮುಗಿಲು ಮುಟ್ಟಿತ್ತು.
ಇಂಟರ್ನ್​ಶಿಪ್​ ವಿದ್ಯಾರ್ಥಿನಿಗೆ ಹಿರಿಯ ವಕೀಲನಿಂದ ಲೈಂಗಿಕ ಕಿರುಕುಳ: ಪ್ರಕರಣ ತಿರುಚಲು ಹೋಗಿ ಸಿಕ್ಕಿಬಿದ್ದ ಮಹಿಳೆ

ನಿನ್ನೆ ತಡರಾತ್ರಿ ಮಗನಿಂದಲೇ ನಡೆಯಿತು ಘೋರ ದುರಂತ: ಪ್ರೇಯಸಿ ಜತೆಗಿದ್ದ ತಂದೆ ಸೇರಿ ಇಬ್ಬರ ಹತ್ಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + fourteen =
Remember me
