ಲಂಡನ್​:ಬ್ರಿಟನ್​ ಪ್ರಧಾನಿ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆಯ ನಾಲ್ಕನೇ ಸುತ್ತಿನಲ್ಲೂ ರಿಷಿ ಸುನಕ್​ ಮುನ್ನಡೆ ಸಾಧಿಸಿದ್ದು, ಅಂತಿಮ ಸುತ್ತಿನತ್ತ ದಾಪುಗಾಲಿಟ್ಟಿದ್ದಾರೆ. ಇಂತಹ ಸಂದರ್ಭದಲ್ಲಿ ರಿಷಿ ಸುನಕ್​ ಅವರು ಮಹತ್ವದ ಶಪಥ ಮಾಡಿದ್ದಾರೆ. ನಾನು ಬ್ರಿಟನ್​ ಪ್ರಧಾನಿಯಾಗಿ ಆಯ್ಕೆಯಾದರೆ ಚೀನಾ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವೆ ಎಂದಿದ್ದಾರೆ.
ಪ್ರಧಾನಿ ಬೋರಿಸ್​ ಜಾನ್ಸನ್​​ರ ರಾಜೀನಾಮೆಯಿಂದ ತೆರವಾಗಿರುವ ಪ್ರಧಾನಿ ಸ್ಥಾನಕ್ಕೆ ಚುನಾವಣೆ ಪ್ರಕ್ರಿಯೆ ನಡೆಯುತ್ತಿದೆ. ಪ್ರಧಾನಿ ರೇಸ್​ನಲ್ಲಿ ಬ್ರಿಟನ್​ನ ಮಾಜಿ ಹಣಕಾಸು ಸಚಿವರೂ ಆದ ಇನ್ಫೋಸಿಸ್​ ಸಹ ಸಂಸ್ಥಾಪಕ ಎನ್.ಆರ್​. ನಾರಾಯಣಮೂರ್ತಿ ಅವರ ಅಳಿಯ ರಿಷಿ ಸುನಕ್ ಮುಂಚೂಣಿಯಲ್ಲಿದ್ದಾರೆ. ಅಂತಿಮ ಸುತ್ತಿಗೆ ಇಬ್ಬರು ಸ್ಪರ್ಧಿಗಳು ತೆರಳಿದ್ದು, ಸದ್ಯದ ಮಾಹಿತಿ ಪ್ರಕಾರ ಇವರ ಆಯ್ಕೆ ಬಹುತೇಕ ಖಚಿತವಾಗಿದೆ. ಆಡಳಿತಾರೂಢ ಕನ್ಸರ್ವೇಟಿವ್​ ಪಕ್ಷದಲ್ಲಿ ರಿಷಿ ಸುನಕ್​ ಅವರಿಗೆ ಒಳ್ಳೆಯ ಹೆಸರಿದೆ.
‘ಬ್ರಿಟನ್​-ಚೀನಾ ಸಂಬಂಧಗಳನ್ನು ಅಭಿವೃದ್ಧಿಪಡಿಸುವಲ್ಲಿ ಸ್ಪಷ್ಟ ಮತ್ತು ಪ್ರಾಯೋಗಿಕ ದೃಷ್ಟಿಕೋನ ಹೊಂದಿರುವ ಏಕೈಕ ಅಭ್ಯರ್ಥಿ ರಿಷಿ ಸುನಕ್’​ ಎಂದು ಚೀನಾದ ಗ್ಲೋಬಲ್​ ಟೈಮ್ಸ್​ ಹೇಳಿತ್ತು. ಇನ್ನು ಚೀನಾ ಮತ್ತು ರಷ್ಯಾ ವಿಚಾರದಲ್ಲಿ ರಿಷಿ ಸುನಕ್ ದುರ್ಬಲರಾಗಿದ್ದಾರೆ ಎಂದು ಅವರ ಪ್ರತಿಸ್ಪರ್ಧಿ ಲಿಜ್​ ಟ್ರುಸ್​ ಆರೋಪಿಸಿದ್ದರು. ಇದಕ್ಕೆ ತಿರುಗೇಟು ನೀಡಿರುವ ರಿಷಿ ಸುನಕ್, ‘ಚೀನಾದ ಸಂಸ್ಕೃತಿ ಮತ್ತು ಭಾಷಾ ಕಾರ್ಯಕ್ರಮಗಳ ಮೂಲಕ ಚೀನಿ ಪ್ರಭಾವ ಹೆಚ್ಚಾಗದಂತೆ ತಡೆಯಲು ಬ್ರಿಟನ್​ನಲ್ಲಿರುವ ಎಲ್ಲ 30 ಕನ್ಫ್ಯೂಷಿಯಸ್ ​ಸಂಸ್ಥೆಗಳನ್ನು ಮುಚ್ಚುವೆ. ಚೀನಿ ಕಮ್ಯುನಿಷ್ಟ್​ ಪಕ್ಷವನ್ನ ನಮ್ಮ ವಿಶ್ವವಿದ್ಯಾಲಯದಗಳಿಂದ ಹೊರಹಾಕಲಾಗವುದು. ಚೀನಿ ಬೇಹಗಾರಿಕೆ ಎದುರಿಸಲು ಬ್ರಿಟನ್​ ದೇಶೀಯ ಬೇಹುಗಾರಿಕೆ ಸಂಸ್ಥೆ ಎಂಐ5 ಅನ್ನು ಬಳಸಲಾಗವುದು. ಬ್ರಿಟೀಷ್​ ಸ್ವತ್ತುಗಳನ್ನು ಚೀನಿಯರ ಸ್ವಾಧೀನಕ್ಕೆ ಹೋಗದಂತೆ ಎಚ್ಚರ ವಹಿಸಲಾಗುವುದು’ ಎಂದು ಘೋಷಿಸಿದ್ದಾರೆ.
2020ರ ಫೆಬ್ರವರಿಯಲ್ಲಿ ಆರ್ಥಿಕ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದ ರಿಷಿ ಸುನಕ್, 2020ರಲ್ಲಿ ಕೋವಿಡ್​ ಭೀತಿಯ ಮಧ್ಯೆಯೂ ಮಂಡಿಸಿದ ಮೊದಲ ಬಜೆಟ್​ ಭಾರೀ ಪ್ರಶಂಸೆಗೆ ಪಾತ್ರವಾಗಿತ್ತು. ಕೋವಿಡ್​ನಂತಹ ಸಂಕಷ್ಟ ಕಾಲದಲ್ಲಿ ಆರ್ಥಿಕ ಉತ್ತೇಜನಕ್ಕಾಗಿ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ರಿಷಿ ಸುನಕ್ ಜಾರಿಗೆ ತಂದಿದ್ದರು. ಆದರೆ, ಕೋವಿಡ್​ ಸಂಕಷ್ಟ ಕಾಲ ನಿರ್ವಹಣೆಯಲ್ಲೂ ವಿಫಲವಾಗಿದ್ದ ಬೋರಿಸ್​, ಸಂಬಳ ಸಾಕಾಗುತ್ತಿಲ್ಲ ಎಂದೇಳಿ ಮತ್ತೊಂದು ವಿವಾದವನ್ನ ಮೈಮೇಲೆ ಎಳೆದುಕೊಂಡಿದ್ದರು. ಸ್ವಪಕ್ಷದಲ್ಲೇ ಬೋರಿಸ್​ ಜಾನ್ಸನ್ ವಿರುದ್ಧ ಅಸಮಾಧಾನ ಭುಗಿಲೆದ್ದಿತ್ತು. ಯುವ ನಾಯಕ ರಿಷಿ ಸುನಕ್​ ಅವರಿಗೆ ಕನ್ಸರ್ವೇಟಿವ್ ಪಕ್ಷದಲ್ಲಿ ಒಳ್ಳೆಯ ಬೆಂಬಲವಿದೆ. ಸಾರ್ವಜನಿಕರ ವಲಯದಲ್ಲೂ ಜನಮನ್ನಣೆ ಗಳಿಸಿದ್ದಾರೆ. ಹಾಗಾಗಿ ಬ್ರಿಟನ್​ನ ಮುಂದಿನ ಪ್ರಧಾನಿ ಸ್ಥಾನ ರಿಷಿ ಸುನಕ್​ಗೆ ಒಲಿಯಲಿದೆ ಎಂಬ ಮಾತುಗಳು ದಟ್ಟವಾಗಿ ಕೇಳಿಬರುತ್ತಿದೆ.
ಆದಾಯಕ್ಕೆ ಬೇಕರಿ ಬಿಸಿನೆಸ್ ಬೆಸ್ಟ್!

ಎಲೆಕ್ಟ್ರಿಕಲ್ ವೆಹಿಕಲ್​ಗಳತ್ತ ಜನರ ಚಿತ್ತ: e ವಾಹನ ಜಮಾನಾ..

ಮಗು ಅಳುವ ಶಬ್ದ ಕೇಳಿ ಕಲ್ಯಾಣಿ ಬಳಿ ಬಂದವರಿಗೆ ಕಾದಿತ್ತು ಶಾಕ್​! ಮಗು ಕಣ್ಣೆದುರೇ ಸಾವಿನ ಮನೆಯ ಕದ ತಟ್ಟಿದ ತಾಯಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × one =
Remember me
