ಒಡಿಶಾ:ಸಮಾಜ ಸೇವಕಿ, ಪದ್ಮಶ್ರೀ ಪುರಸ್ಕೃತೆ ಶಾಂತಿ ದೇವಿ ಇನ್ನಿಲ್ಲ. 88 ವರ್ಷದ ಶಾಂತಾ ದೇವಿ ಭಾನುವಾರ ರಾತ್ರಿ ರಾಯಗಡ ಜಿಲ್ಲೆಯ ಗುಣಪುರದ ತಮ್ಮ ನಿವಾಸದಲ್ಲಿ ಕೊನೆಯುಸಿಳೆದರು. ಇವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಎದೆನೋವು ಕಾಣಿಸಿಕೊಂಡು ಪ್ರಜ್ಞಾಹೀನರಾಗಿ ಶಾಂತಿ ದೇವಿ ನಿನ್ನೆ ಕುಸಿದು ಬಿದ್ದಿದ್ದಾರೆ. ಮನೆಗೆ ಬಂದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. 1934ರ ಏಪ್ರಿಲ್ 18ರಂದು ಬಾಲಸೋರ್‌ನಲ್ಲಿ ಜನಿಸಿದ ಶಾಂತಿ ದೇವಿ ಡಾ. ರತನ್ ದಾಸ್ ಎಂಬುರನ್ನು ಮದುವೆ ಆದರು. ಬಳಿಕ ಪತಿಯ ಸಹಕಾರದೊಂದಿಗೆ ಸಮಾಜಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಬುಡಕಟ್ಟು ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸಿದ ಶಾಂತಾದೇವಿ, ಕುಷ್ಠ ರೋಗಿಗಳ ಆರೈಕೆಗಾಗಿ ಆಶ್ರಮವೊಂದನ್ನೂ ಸ್ಥಾಪಿಸಿ ಹಲವರ ಕಷ್ಟಕ್ಕೆ ಸ್ಪಂದಿಸಿದ್ದರು. ಇವರ ಸೇವೆಗೆ ಪದ್ಮಶ್ರೀ ಪ್ರಶಸ್ತಿ, ಜಮುನಾಲಾಲ್ ಬಜಾಜ್ ಪ್ರಶಸ್ತಿ, ರಾಧಾನಾಥ್​ ರಥ್​ ಶಾಂತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.
ಭಾನುವಾರ ರಾತ್ರಿ ಎದೆನೋವು ಕಾಣಿಸಿಕೊಂಡು ಮನೆಯಲ್ಲೇ ಶಾಂತಾದೇವಿ ಕುಸಿದು ಬಿದ್ದರು. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಲಿಲ್ಲ.
ಶಾಂತಾದೇವಿ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್​ ಮೂಲಕ ಸಂತಾಪ ಸೂಚಿಸಿದ್ದಾರೆ. ‘ಶಾಂತದೇವಿ ಜೀ ಅವರು ಬಡವರು ಮತ್ತು ಹಿಂದುಳಿದವರ ಧ್ವನಿಯಾಗಿ ನೆನಪಿನಲ್ಲಿ ಉಳಿಯುತ್ತಾರೆ. ಕಷ್ಟ ನಿವಾರಿಸಲು, ಆರೋಗ್ಯಕರ ಮತ್ತು ನ್ಯಾಯಯುತ ಸಮಾಜ ರಚಿಸಲು ಅವರು ನಿಸ್ವಾರ್ಥವಾಗಿ ಕೆಲಸ ಮಾಡಿದರು. ಅವರ ನಿಧನದ ಸುದ್ದಿ ಕೇಳಿ ನೋವಾಗಿದೆ. ಓಂ ಶಾಂತಿ’ ಎಂದು ಟ್ವೀಟ್​ ಮಾಡಿದ್ದಾರೆ.
Shanti Devi Ji will be remembered as a voice of the poor and underprivileged. She worked selflessly to remove suffering and create a healthier as well as just society. Pained by her demise. My thoughts are with her family and countless admirers. Om Shanti.pic.twitter.com/66MLo73LUK
— Narendra Modi (@narendramodi)January 17, 2022

‘ಖ್ಯಾತ ಸಾಮಾಜಿಕ ಕಾರ್ಯಕರ್ತೆ ಶಾಂತಾದೇವಿ ಅವರ ನಿಧನ ಸುದ್ದಿ ದುಃಖತರಿಸಿದೆ. ಶಿಕ್ಷಣದ ಮೂಲಕ ಬುಡಕಟ್ಟು ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಅವರು ಮಾಡಿದ ಅವಿರತ ಶ್ರಮ ಎಂದಿಗೂ ಜೀವಂತ. ಶಾಂತಾದೇವಿ ಅವರ ಅಗಲಿಕೆ ನೋವನ್ನು ತಡೆಯುವ ಶಕ್ತಿಯನ್ನು ಆ ಭಗಂವತ ಕುಟುಂಬಸ್ಥರಿಗೆ ನೀಡಲಿ. ಓಂ ಶಾಂತಿ’ ಎಂದು ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಆರೋಪಿ ಬಂಧಿಸಲು ದೂರುದಾರನಿಗೆ ತನ್ನ ಕಾರನ್ನೇ ಕೊಟ್ಟು ಎಸ್​ಐಗೆ ಬೆವರಿಳಿಸಿದ್ದ ಎಸ್ಪಿ: ತುಮಕೂರು ಎಸ್ಪಿ ನಡೆಗೆ ಗೃಹ ಸಚಿವ ಮೆಚ್ಚುಗೆ

ಸೋಲದೇವನಹಳ್ಳಿ ಡಾಬಾಗೆ ಬೆಂಕಿ ಹಚ್ಚಲು ಸುಪಾರಿ ಕೊಟ್ಟದ್ದೇ ಮಾಲೀಕನ ಪತ್ನಿ! ಕಾರಣ ಕೇಳಿದ್ರೆ ಶಾಕ್​ ಆಗ್ತೀರಿ

ಗಂಡನ ಮೊಬೈಲ್​ನಲ್ಲಿತ್ತು ಪತ್ನಿ ಜತೆಗೆ ಹಲವು ಸ್ತ್ರೀಯರ ಅಶ್ಲೀಲ ದೃಶ್ಯ! ಮದ್ವೆ ಆಗಿ ವರ್ಷವೂ ತುಂಬಿಲ್ಲ.. ಈತ ಕೊಟ್ಟ ಕಿರುಕುಳ ಅಷ್ಟಿಷ್ಟಲ್ಲ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
