ನವದೆಹಲಿ:ಬ್ಯಾಂಕಾಕ್​ನಿಂದ ದೆಹಲಿಗೆ ಬಂದಿಳಿದ ಸ್ಪೈಸ್​ ಜೆಟ್​ ವಿಮಾನದಲ್ಲಿ ಬಂದಿರುವ ಪ್ರಯಾಣಿಕರ ಪೈಕಿ ಒಬ್ಬ ವ್ಯಕ್ತಿಯಲ್ಲಿ ಕೊರೊನಾ ವೈರಸ್​ (COVID-19) ಇರಬಹುದು ಎಂದು ಶಂಕಿಸಲಾಗಿದೆ. ಶಂಕಿತ ವ್ಯಕ್ತಿಯನ್ನು ದೆಹಲಿ ವಿಮಾನ ನಿಲ್ದಾಣದ ಆರೋಗ್ಯ ಸಂಸ್ಥೆಯು ವಶಕ್ಕೆ ಪಡೆದುಕೊಂಡಿದ್ದು ತನ್ನ ನಿಗಾದಲ್ಲಿ ಇರಿಸಿಕೊಂಡಿದೆ.
ಶಂಕಿತ ವ್ಯಕ್ತಿಯು ಇಂದು (ಫೆ.13) ಸ್ಪೈಸ್​ ಜೆಟ್​ ಎಸ್​ಜಿ-88 ವಿಮಾನದಲ್ಲಿ ದೆಹಲಿಗೆ ಬಂದಿಳಿದಿದ್ದಾನೆ. ಸೀಟ್​ ನಂ.31ರಲ್ಲಿ ಕುಳಿತಿದ್ದ ವ್ಯಕ್ತಿಯ ಅಕ್ಕ ಪಕ್ಕ ಯಾರೂ ಕುಳಿತಿರಲಿಲ್ಲ ಎಂದು ಹೇಳಲಾಗಿದೆ. ಸದ್ಯ ಶಂಕಿತನನ್ನು ನಿಗಾದಲ್ಲಿರಿಸಲಾಗಿದೆ.
ಚೀನಾದಲ್ಲಿ ಮಹಾಮಾರಿಯಾಗಿ ಕಾಡುತ್ತಿರುವ ಕೊರೊನಾ ವೈರಸ್​ನಿಂದಾಗಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಜನರು ಮರಣ ಹೊಂದಿದ್ದಾರೆ. ಅಮೆರಿಕ, ಭಾರತ ಸೇರಿ ಒಟ್ಟು 20ಕ್ಕೂ ಹೆಚ್ಚು ದೇಶಗಳಲ್ಲಿ ವೈರಸ್​ ಇರುವುದು ಪತ್ತೆಯಾಗಿದೆ. ಭಾರತದ ಕೇರಳ ಮತ್ತು ಕೋಲ್ಕತ್ತದಲ್ಲಿ ಕೊರೊನಾ ವೈರಸ್​ ಕಂಡುಬಂದಿದೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 − 5 =
Remember me
