ವಿಶ್ವದಮೂರನೇ ದೊಡ್ಡ ಆರ್ಥಿಕ ಶಕ್ತಿಯಾಗುವ ಗುರಿಯನ್ನು ಸಾಧಿಸಲು ಸರ್ಕಾರ ಹಲವು ರಂಗಗಳ ಸಬಲೀಕರಣಕ್ಕೆ ಮುಂದಾಗಿದೆ. ಈ ನಿಟ್ಟಿನಲ್ಲಿ ಕೈಗಾರಿಕೆಗಳಿಗೆ ಈ ಮಧ್ಯಂತರ ಬಜೆಟ್​ನಲ್ಲಿ ಏನೆಲ್ಲ ಉತ್ತೇಜನ ದೊರೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಹರಿದು ಬರಲಿರುವ ಬಂಡವಾಳಕ್ಕೆ ಸರ್ಕಾರ ಸೌಕರ್ಯಗಳನ್ನು ಸೃಷ್ಟಿಸುವ ಸವಾಲೂ ಇದೆ. ಆದರೆ, ಅನೇಕ ದೊಡ್ಡ ರಾಷ್ಟ್ರಗಳು ಮತ್ತು ಉದ್ಯಮಸ್ನೇಹಿ ವಾತಾವರಣ ಹೊಂದಿರುವ ದೇಶಗಳು ಭಾರತದಲ್ಲಿ ಹೂಡಿಕೆಗೆ ಮುಂದಾಗಿರುವುದು, ಉದ್ಯೋಗಸೃಷ್ಟಿ ನಿಟ್ಟಿನಲ್ಲಿಯೂ ಆಶಾವಾದ ಮೂಡಿಸಿದೆ.
‘ಮೇಕ್ ಇನ್ ಇಂಡಿಯಾ’ ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷಿ ಯೋಜನೆ. ಈಗಾಗಲೇ ಇರುವ ಕೈಗಾರಿಕೆಗಳಲ್ಲಿ ಹೊಸ ಅವಕಾಶಗಳನ್ನು ಸೃಷ್ಟಿಸುವುದು, ಹೊಸ ವಲಯಗಳಲ್ಲಿ ಉದ್ಯಮಗಳನ್ನು ಸ್ಥಾಪಿಸುವುದು ಸರ್ಕಾರದ ಗುರಿಯಾಗಿದೆ. ಮೇಕ್ ಇನ್ ಇಂಡಿಯಾಗೆ ಉತ್ತಮ ಸ್ಪಂದನೆ ದೊರೆತಿರುವುದರಿಂದ ಸರ್ಕಾರದ ಮನೋಬಲವೂ ಹೆಚ್ಚಿದೆ. ಜಿಡಿಪಿ ಏರಿಕೆಯಲ್ಲಿ ಕೈಗಾರಿಕೆ ಬೆಳವಣಿಗೆಯ ದರ ಮುಖ್ಯ ಪಾತ್ರ ವಹಿಸುತ್ತದೆ. ಈ ನಿಟ್ಟಿನಲ್ಲಿ, ಬರುವ ಆರ್ಥಿಕ ವರ್ಷಕ್ಕೆ ಸರ್ಕಾರ ಏನೆಲ್ಲ ಕ್ರಮ ಕೈಗೊಳ್ಳಲಿದೆ ಎಂಬ ಪ್ರಶ್ನೆಗೆ ಫೆಬ್ರವರಿ 1ರ ಬಜೆಟ್​ನಲ್ಲಿ ಉತ್ತರ ಸಿಗಬಹುದು. ಆದರೆ, ಇದು ಮಧ್ಯಂತರ ಬಜೆಟ್ ಆಗಿರುವ ಹಿನ್ನೆಲೆಯಲ್ಲಿ ದೊಡ್ಡ ಘೋಷಣೆಗಳು, ಹೊಸ ಯೋಜನೆಗಳು ಇರುವುದಿಲ್ಲ. ಕೈಗಾರಿಕಾ ನೀತಿಯನ್ನು ಪರಿಣಾಮಕಾರಿಯಾಗಿ ಮುಂದುವರಿಸಿಕೊಂಡು ಹೋಗಲು ಸರ್ಕಾರ ಗಮನ ಹರಿಸುವ ಸಾಧ್ಯತೆ ಇದೆ.
ಕಳೆದ ಬಜೆಟ್​ನಲ್ಲಿ (2023-24) ಪ್ರಕಟಿಸಿದ್ದ ರಫ್ತು ಉತ್ತೇಜನ, ಉತ್ಪಾದನಾ ವಲಯಕ್ಕೆ ಪ್ರೋತ್ಸಾಹ, ದೇಶೀಯ ಮೌಲ್ಯವರ್ಧನೆ, ಪರಿಸರ-ಸ್ನೇಹಿ ಇಂಧನಕ್ಕೆ ಉತ್ತೇಜನ ನೀಡಿಕೆ ಮೊದಲಾದ ಕ್ರಮಗಳು ಉದ್ಯಮ ವಲಯದ ಉತ್ಸಾಹವನ್ನು ಹೆಚ್ಚಿಸಿದ್ದವು. ಮುಖ್ಯವಾಗಿ, ಬಂಡವಾಳ ಹೂಡಿಕೆ ವೆಚ್ಚವನ್ನು ಈ ಬಾರಿಯೂ ಹೆಚ್ಚಿಸಲಾಗುತ್ತದೆಯೇ ಎಂಬುದರತ್ತ ಉದ್ಯಮ ವಲಯದ ದೃಷ್ಟಿ ನೆಟ್ಟಿದೆ. ಕಳೆದ ಬಜೆಟ್​ನಲ್ಲಿ ಬಂಡವಾಳ ಹೂಡಿಕೆ ವೆಚ್ಚವನ್ನು 10 ಲಕ್ಷ ಕೋಟಿ ರೂ.ಗಳಿಗೆ ಹೆಚ್ಚಿಸಲಾಗಿತ್ತು ಮತ್ತು ಹೊಸದಾಗಿ ಉದ್ಯೋಗ ಸೃಷ್ಟಿಸಲು 10 ಸಾವಿರ ಕೋಟಿ ರೂ ಮೀಸಲಿರಿಸಲಾಗಿತ್ತು. ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್​ಎಂಇ) ಸಾಲ ಖಾತ್ರಿ ಯೋಜನೆಯನ್ನು ಪರಿಷ್ಕರಿಸಿ, ಈ ಬಾಬ್ತಿಗೆ 9,000 ಕೋಟಿ ರೂ. ಅನುದಾನ ಘೋಷಿಸಲಾಗಿತ್ತು. ಎಂಎಸ್​ಎಂಇಗಳು ನಮ್ಮ ಆರ್ಥಿಕತೆ ಬೆಳವಣಿಗೆಯ ಇಂಜಿನ್​ಗಳಾಗಿರುವ ಕಾರಣ ಅಡಮಾನ ರಹಿತ ಸಾಲವನ್ನು 2 ಕೋಟಿ ರೂ.ವರೆಗೆ ಹೆಚ್ಚುವರಿಯಾಗಿ ಕಲ್ಪಿಸಲಾಗಿದೆ.
ಮೊಬೈಲ್ ಫೋನ್ ತಯಾರಿಕೆ ಹೆಚ್ಚಳಸರ್ಕಾರದ ಹಲವು ಉಪಕ್ರಮಗಳ ಪರಿಣಾಮವಾಗಿ ದೇಶದಲ್ಲಿ ಮೊಬೈಲ್ ಫೋನ್ ತಯಾರಿಕೆ ಪ್ರಮಾಣ 2014-15ರಲ್ಲಿ 5.8 ಕೋಟಿ ಇದ್ದಿದ್ದು ಕಳೆದ ಹಣಕಾಸು ವರ್ಷದಲ್ಲಿ 31 ಕೋಟಿಗೆ ಏರಿದೆ ಎಂಬುದು ಗಮನಾರ್ಹ. ಇದನ್ನು ಹೆಚ್ಚಿಸಲು ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆಪಲ್ ಘಟಕ ಭಾರತದಲ್ಲಿ ಮೊಬೈಲ್ ಫೋನ್​ಗಳ ತಯಾರಿಕೆ ಹೆಚ್ಚಿಸಲು ಯೋಜನೆ ಹಾಕಿಕೊಂಡಿದೆ.
ಕೌಶಲ ಯೋಜನೆಪ್ರಧಾನ ಮಂತ್ರಿ ಕೌಶಲ ಯೋಜನೆಯಡಿ ಲಕ್ಷಾಂತರ ಯುವಕರಿಗೆ ತರಬೇತಿ ನೀಡಲಾಗಿದೆ. ವಿವಿಧ ಕಂಪನಿಗಳ ಪಾಲುದಾರಿಕೆಯೊಂದಿಗೆ ಉದ್ಯಮದ ಅಗತ್ಯಕ್ಕೆ ಅನುಗುಣವಾಗಿ ಸೂಕ್ತ ಕೋರ್ಸ್​ಗಳನ್ನು ಆರಿಸಿ, ತರಬೇತಿ ನೀಡಲಾಗುತ್ತಿದೆ. ಈ ಯೋಜನೆಯಲ್ಲಿ ಕೋಡಿಂಗ್, ಎಐ, ರೊಬೋಟಿಕ್ಸ್, 3ಡಿ ಪ್ರಿಂಟಿಂಗ್, ಡ್ರೋನ್, ಸಾಫ್ಟ್ ಸ್ಕಿಲ್​ನಂತಹ ತರಬೇತಿಗಳನ್ನು ನೀಡುವುದರ ಮೂಲಕ ದೇಶದ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
ಸರಳಗೊಂಡ ಪ್ರಕ್ರಿಯೆ…ಐಎಫ್​ಎಸ್​ಸಿ ಗಿಫ್ಟ್ ಸಿಟಿಯಲ್ಲಿ ನೋಂದಣಿ ಮತ್ತು ಅನುಮೋದನೆಗಳಿಗಾಗಿ ಸರ್ಕಾರವು ಏಕಗವಾಕ್ಷಿ ವ್ಯವಸ್ಥೆ ತಂದಿದೆ. ಕಂಪನಿಗಳು ಸಲ್ಲಿಸುವ ಅರ್ಜಿಗಳ ತ್ವರಿತ ವಿಲೇವಾರಿ ಅಥವಾ ಪ್ರಕ್ರಿಯೆಗಾಗಿ ಕಂಪನಿ ಕಾಯಿದೆಯಡಿ ‘ಕೇಂದ್ರ ತ್ವರಿತ ಸಂಸ್ಕರಣಾ ಘಟಕ’ಗಳನ್ನು ಸ್ಥಾಪಿಸಲಾಗುತ್ತಿದೆ.
ಸಾಧ್ಯತೆಗಳು
*ಮೋದಿ ಗ್ಯಾರಂಟಿ ಯೋಜ ನೆಗಳ ಮುಂದುವರಿಕೆ
*ಅಸಂಘಟಿತ ಕ್ಷೇತ್ರದ ಕಾರ್ವಿುಕರಿಗೆ ನೆರವು
*ಮಧ್ಯಮವರ್ಗ, ರೈತರಿಗೆ ಪೂರಕ ಕ್ರಮಗಳು
*ರೈಲ್ವೆಯಲ್ಲಿ ನೇಮಕಾತಿ ಗಳಿಗೆ ಪೂರಕ ಹೆಜ್ಜೆ
*ಮಹಿಳೆಯರಿಗೆ ವಿಶೇಷ ಕೊಡುಗೆ
*ರೈತ ಸಮ್ಮಾನ್ ನಿಧಿ ಹೆಚ್ಚಳ
*ಮಧ್ಯಮವರ್ಗವದವರಿಗೆ ವಿಶೇಷ ಕೊಡುಗೆ
‘ಸ್ಕಿಲ್ ಇಂಡಿಯಾ ಡಿಜಿಟಲ್’ ವೇದಿಕೆತಂತ್ರಜ್ಞಾನ ಆಧಾರಿತ ವ್ಯವಸ್ಥೆಯಲ್ಲಿ ಕೌಶಲಗಳು ಅತೀ ಮುಖ್ಯ. ಈ ನಿಟ್ಟಿನಲ್ಲಿ ‘ಸ್ಕಿಲ್ ಇಂಡಿಯಾ ಡಿಜಿಟಲ್ ಪ್ಲಾಟ್​ಫಾಮ್ರ್ ಪ್ರಮುಖ ಪಾತ್ರ ವಹಿಸುತ್ತಿದೆ. ‘ಸ್ಕಿಲ್ ಇಂಡಿಯಾ ಡಿಜಿಟಲ್’ ವೇದಿಕೆಯಿಂದ ಉದ್ಯೋಗದಾತರ ಬೇಡಿಕೆಗಳಿಗೆ ಅನುಗುಣವಾಗಿ ಸರಿಹೊಂದುವ ಉದ್ಯೋಗಾಂಕ್ಷಿಗಳನ್ನು ಆಯ್ಕೆ ಮಾಡಲು ಸಾಧ್ಯವಾಗುತ್ತಿದೆ.
3 ವರ್ಷಗಳಲ್ಲಿ ಭಾರತ 3ನೇ ಅತಿ ದೊಡ್ಡ ಆರ್ಥಿಕತೆ: ನಿರ್ಮಲಾ ಸೀತಾರಾಮನ್ ವಿಶ್ವಾಸನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ನಿವ್ವಳ ಆಂತರಿಕ ಉತ್ಪಾದನೆ ದರ (ಜಿಡಿಪಿ) 5 ಟ್ರಿಲಿಯನ್ ಡಾಲರ್ ಆಗುವುದರೊಂದಿಗೆ ಭಾರತ ಜಗತ್ತಿನ ಮೂರನೇ ಅತಿ ದೊಡ್ಡ ಶ್ರೀಮಂತ ದೇಶವಾಗಲಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಹೇಳಿದ್ದಾರೆ. ನಿರಂತರ ಸುಧಾರಣೆಗಳ ಫಲವಾಗಿ 2030ರ ಹೊತ್ತಿಗೆ 7 ಟ್ರಿಲಿಯನ್ ಡಾಲರ್ ಆರ್ಥಿಕತೆ ಆಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
10 ವರ್ಷಗಳ ಹಿಂದೆ 1.9 ಟ್ರಿಲಿಯನ್ ಡಾಲರ್ ಜಿಡಿಪಿಯೊಂದಿಗೆ ಜಗತ್ತಿನ 10ನೇ ದೊಡ್ಡ ಆರ್ಥಿಕತೆಯಾಗಿದ್ದ ಭಾರತ, ಪ್ರಸಕ್ತ 3.7 ಟ್ರಿಲಿಯನ್ ಡಾಲರ್​ನೊಂದಿಗೆ 5ನೇ ದೊಡ್ಡ ಆರ್ಥಿಕತೆಯಾಗಿದೆ ಎಂದು ದೇಶದ ಆರ್ಥಿಕತೆ ಕುರಿತ ವಿತ್ತ ಸಚಿವಾಲಯದ ಜನವರಿ ಮಾಸದ ಸಮೀಕ್ಷಾ ವರದಿಯಲ್ಲಿ ಸಚಿವೆ ವಿವರಿಸಿದ್ದಾರೆ. ಕೋವಿಡ್ ಸಾಂಕ್ರಾಮಿಕತೆ, ಆರ್ಥಿಕತೆಯಲ್ಲಿ ಅಂತರ್ಗತವಾದ ಭಾರಿ ಅಸಮತೋಲನಗಳು ಮತ್ತು ಸಮಸ್ಯಾತ್ಮಕ ಆರ್ಥಿಕ ವಲಯದ ಹೊರತಾಗಿಯೂ ಈ ಸಾಧನೆ ಮಾಡಿದೆ ಎಂದು ಹೇಳಿದ್ದಾರೆ.
ಹತ್ತು ವರ್ಷಗಳ ಪಯಣದಲ್ಲಿ ಅನೇಕ ಸುಧಾರಣೆಗಳು ದೇಶದ ಆರ್ಥಿಕ ಪ್ರಗತಿಗೆ ಗಣನೀಯ ಕೊಡುಗೆ ಸಲ್ಲಿಸಿವೆ ಎಂದು ವರದಿ ವಿಶ್ಲೇಷಿಸಿದೆ. ಈ ಸುಧಾರಣೆಗಳು ಭವಿಷ್ಯದ ಅನಿರೀಕ್ಷಿತ ಜಾಗತಿಕ ಆಘಾತಗಳನ್ನು ತಾಳಿಕೊಳ್ಳುವಂಥ ಆರ್ಥಿಕ ಸಾಮರ್ಥ್ಯವನ್ನೂ ಒದಗಿಸಿವೆ ಎಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತ ಜಗತ್ತಿನ ಮೂರನೇ ದೊಡ್ಡ ಆರ್ಥಿಕತೆಯಾಗಿ ಬೆಳೆಯುವ ನಿರೀಕ್ಷೆ ಇದೆ. ಆದರೆ, 2047ರ ವೇಳೆಗೆ ‘ಅಭಿವೃದ್ಧಿ ಹೊಂದಿದ’ ದೇಶವಾಗುವ ಉನ್ನತ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಹಣಕಾಸು ಸಚಿವಾಲಯ ಹೇಳಿದೆ.
ಮುಂದಿನ ವರ್ಷ ಶೇ.7 ಜಿಡಿಪಿದೇಶದ ಜಿಡಿಪಿ 2024-25ನೇ ಸಾಲಿನಲ್ಲಿ ಶೇಕಡ 7ರಷ್ಟಿರಲಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಅಂದಾಜು ಮಾಡಿದೆ. ಮಧ್ಯಂತರ ಬಜೆಟ್​ಗೆ ಎರಡು ದಿನ ಮುನ್ನ, ಸೋಮವಾರದಂದು ‘ದ ಇಂಡಿಯನ್ ಇಕಾನಮಿ, ಎ ರಿವ್ಯೂ’ ಎಂಬ ವರದಿ ಬಿಡುಗಡೆಗೊಳಿಸಿರುವ ವಿತ್ತ ಸಚಿವಾಲಯ, ಕಳೆದ ಹತ್ತು ವರ್ಷಗಳಲ್ಲಿ ಸರ್ಕಾರ ಕೈಗೊಂಡಿರುವ ಸುಧಾರಣೆ ಕ್ರಮಗಳ ಫಲವಾಗಿ ಆರ್ಥಿಕ ಬೆಳವಣಿಗೆ ಏರುಮುಖದಲ್ಲಿದೆ ಎಂದಿದೆ. ಅಲ್ಲದೆ, ಈ ಬಾರಿ ಮಧ್ಯಂತರ ಬಜೆಟ್ ಮಂಡನೆಯಾಗುತ್ತಿರುವ ಹಿನ್ನೆಲೆಯಲ್ಲಿ ಆರ್ಥಿಕ ಸಮೀಕ್ಷೆ ವರದಿ ಬಿಡುಗಡೆಯಾಗುವುದಿಲ್ಲ. ಲೋಕಸಭೆ ಚುನಾವಣೆ ನಡೆದು, ಹೊಸ ಸರ್ಕಾರ ರಚನೆಯಾದ ಬಳಿಕ ಪೂರ್ಣ ಬಜೆಟ್ ಮಂಡನೆಯಾಗಲಿದೆ.
ಕಣ್ಣಿಗೊಂದು ಸವಾಲು: ಈ ಫೋಟೋದಲ್ಲಿರುವ 2ನೇ ಬೆಕ್ಕನ್ನು ಪತ್ತೆಹಚ್ಚುವ ಸಾಮರ್ಥ್ಯ ನಿಮಗಿದೆಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + six =
Remember me
