ನವದೆಹಲಿ:ರಾಷ್ಟ್ರ ರಾಜಧಾನಿಯಲ್ಲಿ ಮುಂಗಾರು ಮಳೆಯ ಅಬ್ಬರ ಭಾರಿ ಜೋರಾಗಿದೆ. ಭಾನುವಾರ ಬೆಳಗ್ಗೆಯಿಂದಲೇ ಭರ್ಜರಿ ಮಳೆಯಾಗುತ್ತಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವು ಕೆಳಸೇತುವೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರಕ್ಕೆ ಭಾರಿ ಅಡಚಣೆ ಉಂಟಾಗಿದೆ.
ಇಂಥ ಪರಿಸ್ಥಿತಿಯಲ್ಲಿ ಸೆಂಟ್ರಲ್​ ದೆಹಲಿಯ ಮಿಂಟೋ ಕೆಳಸೇತುವೆಯಲ್ಲಿ ವ್ಯಕ್ತಿಯೊಬ್ಬರ ಶವ ತೇಲಿದೆ. ಸರಕು ಸಾಗಣೆ ಆಟೋರಿಕ್ಷಾ ಚಾಲಕ ಕುಂದನ್​ (60) ಮೃತ. ಈ ಬಗ್ಗೆ ಮಾಹಿತಿ ನೀಡಿರುವ ಬಾರಾಕಂಬಾ ರಸ್ತೆಯ ಎಸಿಪಿ ರಾಜೇಂದ್ರ ದುಬೆ, ಭಾನುವಾರ ಬೆಳಗ್ಗೆ 10 ಗಂಟೆಯಲ್ಲಿ ಶವ ಪತ್ತೆಯಾಯಿತು. ನವದೆಹಲಿ ರೈಲು ನಿಲ್ದಾಣದಿಂದ ಕನಾಟ್​ಪ್ಲೇಸ್​ಗೆ ಕುಂದನ್​ ಸರಕು ಸಾಗಿಸುವಾಗ ಕೆಳಸೇತುವೆಯಲ್ಲಿ ನಿಂತಿರುವ ನೀರನ್ನು ಅಂದಾಜಿಸದೆ ವಾಹನವನ್ನು ಮುನ್ನಡೆಸಿದ್ದಾರೆ. ಈ ಸಂದರ್ಭದಲ್ಲಿ ಅವರು ನೀರಿನಲ್ಲಿ ಮುಳುಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ನವದೆಹಲಿ ರೈಲುನಿಲ್ದಾಣದ ಸರಕು ಇಳಿಕೆ ವಿಭಾಗದಲ್ಲಿ ಹಳಿಗಳ ನಿರ್ವಹಣೆ ಕಾರ್ಯದಲ್ಲಿ ತೊಡಗಿದ್ದ ಟ್ರ್ಯಾಕ್​ಮನ್​ ಶವವನ್ನು ಗಮನಿಸಿದ್ದರು. ತಕ್ಷಣವೇ ಅವರು ನೀರಿಗೆ ಧುಮುಕಿ ಈಜುತ್ತಾ ಹೋಗಿ ಶವವನ್ನು ಹೊರತೆಗೆದು ಪೊಲೀಸರಿಗೆ ಮಾಹಿತಿ ನೀಡಿದ್ದರು ಎನ್ನಲಾಗಿದೆ. ಇದೇ ಕೆಳಸೇತುವೆಯಲ್ಲಿ ದೆಹಲಿ ಸಾರಿಗೆ ನಿಗಮದ ಬಸ್​ ನೀರಿನಲ್ಲಿ ಮುಳುಗಿದ್ದು, ಇದರ ಸಮೀಪದಲ್ಲೇ ಕುಂದನ್​ ಶವ ಕೂಡ ಪತ್ತೆಯಾಗಿದ್ದಾಗಿ ಪೊಲೀಸರು ಹೇಳಿದ್ದಾರೆ.
ಇದನ್ನೂ ಓದಿ:ಸೊಳ್ಳೆಗಳಿಂದ ಹರಡುವುದಿಲ್ಲ ಕರೊನಾ, ಇದು ನಿಜಾನಾ?
3 ಜನರ ರಕ್ಷಣೆ:ಮಿಂಟೋ ಕೆಳಸೇತುವೆಯಲ್ಲಿ ಬೆಳಗ್ಗೆಯಿಂದಲೇ ನೀರು ತುಂಬಿಕೊಂಡಿತ್ತು. ಇದರಲ್ಲಿ ಸಿಲುಕಿದ್ದ ದೆಹಲಿ ಸಾರಿಗೆ ನಿಗಮದ ಬಸ್​ನಲ್ಲಿದ್ದ ಚಾಲಕ, ನಿರ್ವಾಹಕ ಮತ್ತು ನೀರಿನಲ್ಲಿ ಸಿಲುಕಿಕೊಂಡಿದ್ದ ಆಟೋರಿಕ್ಷಾದ ಚಾಲಕ ಸೇರಿ ಮೂರು ಜನರನ್ನು ಹೊರಕರೆತರುವಲ್ಲಿ ಅಗ್ನಿಶಾಮಕದಳದ ಸಿಬ್ಬಂದಿ ಯಶಸ್ವಿಯಾಗಿದ್ದರು ಎನ್ನಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಅಗ್ನಿಶಾಮಕದಳ ಸೇವೆಗಳ ನಿರ್ದೇಶಕ ಅತುಲ್​ ಗರ್ಗ್​, ಭಾನುವಾರ ಬೆಳಗ್ಗೆ 7.45ರಲ್ಲಿ ಡಿಟಿಸಿ ಬಸ್​ ಸಿಲುಕಿಕೊಂಡಿರುವ ಮಾಹಿತಿ ಲಭಿಸಿತ್ತು. ತಕ್ಷಣವೇ ಸ್ಥಳಕ್ಕೆ ತೆರಳಿದ ನಮ್ಮ ಸಿಬ್ಬಂದಿ ಬಸ್​ನ ಚಾಲಕ ಮತ್ತು ನಿರ್ವಾಹಕ ಅಲ್ಲದೆ, ಒಬ್ಬ ಆಟೋರಿಕ್ಷಾ ಚಾಲಕನನ್ನು ರಕ್ಷಿಸಿದರು. ಬಸ್​ನಲ್ಲಿ ಪ್ರಯಾಣಿಕರು ಯಾರೂ ಇರಲಿಲ್ಲ ಎಂದು ತಿಳಿಸಿದ್ದಾರೆ.
ಷಾ ಆಪ್ತನೆಂದು ಹೇಳಿಕೊಂಡು ಗಡ್ಕರಿ ಕಚೇರಿಗೆ ಹೋಯಿತೊಂದು ಫೋನ್‌ ಕಾಲ್‌: ಮುಂದೇನಾಯ್ತು?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + thirteen =
Remember me
