ಕೋಲ್ಕತಾ:ಕರೊನಾ ಸೋಂಕು ತಗುಲಿದವರಿಗೆ ತೀವ್ರ ಜ್ವರ, ಕೆಮ್ಮು ಮತ್ತು ನೆಗಡಿಯ ಜತೆಗೆ ಉಸಿರಾಟದಲ್ಲೂ ಭಾರಿ ತೊಂದರೆ ಉಂಟಾಗುತ್ತದೆ. ಆ ಸಂದರ್ಭದಲ್ಲಿ ವೆಂಟಿಲೇಟರ್​ ಅಳವಡಿಸಿ, ಅವರ ಆರೋಗ್ಯವನ್ನು ಸ್ಥಿರಗೊಳಿಸಲು ವೈದ್ಯರು ಯತ್ನಿಸುತ್ತಾರೆ. ಹೀಗೆ ವೆಂಟಿಲೇಟರ್​ ಹಾಕಿಸಿಕೊಂಡು 38 ದಿನ ಹೋರಾಡಿದ ವ್ಯಕ್ತಿಯೊಬ್ಬರು ಕೊನೆಗೂ ಕೋವಿಡ್​ ಅನ್ನು ಗೆದ್ದು, ಮನೆಗೆ ಮರಳಿದ್ದಾರೆ. ಇವರ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದನ್ನು ಕಂಡು ಸಂತಸ ಪಟ್ಟ ನೆರೆಹೊರೆಯವರು ಇವರಿಗೆ ಭರ್ಜರಿ ಸ್ವಾಗತ ನೀಡಿದ್ದಾರೆ.
ಕೋಲ್ಕತಾದ ನಿತಾಯ್​ದಾಸ್​ ಮುಖರ್ಜಿ (52) ಕೋವಿಡ್​ ಗೆದ್ದು ಮನೆಗೆ ಮರಳಿದವರು. ಕೋವಿಡ್​ ಚಿಕಿತ್ಸೆಯಲ್ಲಿ ತೊಡಗಿರುವ ವೈದ್ಯರ ಪ್ರಕಾರ ಈ ಚಮತ್ಕಾರಿ ಚೇತರಿಕೆ ವೈದ್ಯಕೀಯ ಲೋಕದ ಅಚ್ಚರಿಯಾಗಿದೆ.
ಇದನ್ನೂ ಓದಿ:ಅಮ್ಮಂದಿರ ದಿನದ ಸ್ಪೆಶಲ್​: ಬಾಲಿವುಡ್​ ತಾಯಂದಿರ ಸಂಭ್ರಮ ನೋಡಿ!
ವೈದ್ಯರ ಪ್ರಕಾರ ದೀರ್ಘ ಕಾಲದವರೆಗೆ ವೆಂಟಿಲೇಟರ್​ ಹಾಕಿಸಿಕೊಂಡವರು ಬದುಕುಳಿಯುವ ಸಾಧ್ಯತೆ ತುಂಬಾ ಕಡಿಮೆಯಾಗಿರುತ್ತದೆ. ಇಂಥದ್ದರಲ್ಲಿ ನಿತಾಯ್​ದಾಸ್​ ಮುಖರ್ಜಿ 38 ದಿನ ವೆಂಟಿಲೇಟರ್​ ಹಾಕಿಸಿಕೊಂಡಿದ್ದರೂ ಕೋವಿಡ್​ ಅನ್ನು ಗೆದ್ದು ಮನೆಗೆ ಮರಳಿದ ಬಗ್ಗೆ ವೈದ್ಯರು ಕೂಡ ಹರ್ಷ ವ್ಯಕ್ತಪಡಿಸಿದ್ದಾರೆ.
ತಮಗೆ ಹೊಸ ಜೀವನ ನೀಡಿದ ವೈದ್ಯರ ತಂಡ ಮತ್ತು ಆಸ್ಪತ್ರೆಯ ಇತರೆ ಸಿಬ್ಬಂದಿಗೆ ನಿತಾಯ್​ದಾಸ್​ ಮುಖರ್ಜಿ ಧನ್ಯವಾದ ಅರ್ಪಿಸಿದ್ದಾರೆ. ನನ್ನ ಪಾಲಿಗೆ ಇದು ಮರುಹುಟ್ಟು ಆಗಿದೆ. ವೈದ್ಯರು ಮುತುವರ್ಜಿಯಿಂದ ಚಿಕಿತ್ಸೆ ನೀಡದೇ ಹೋಗಿದ್ದರೆ ನಾನು ಜೀವಂತವಾಗುಳಿಯಲು ಸಾಧ್ಯವೇ ಇರಲಿಲ್ಲ. ವಾಸ್ತವವಾಗಿ ನನ್ನನ್ನು ಉಳಿಸಲು ಅಹಿರ್ನಿಶಿ ಹೋರಾಡಿದ ಅವರು ನಿಜವಾದ ಹೀರೋಗಳು ಎಂದು ಹೇಳಿದ್ದಾರೆ.
ಇದನ್ನೂ ಓದಿ:ಕಾಂಗ್ರೆಸ್ಸಿಗರಿಗೆ ಶಾಕ್ ನೀಡಿದ ಜಾರಿ ನಿರ್ದೇಶನಾಲಯ!
2017ರಲ್ಲಿ ನ್ಯುಮೋನಿಯಾಕ್ಕೆ ತುತ್ತಾಗಿ ಬದುಕುಳಿದಿದ್ದ ನಿತಾಯ್​ದಾಸ್​ ಮುಖರ್ಜಿ ಅವರಲ್ಲಿ ಮಾರ್ಚ್​ ಮಧ್ಯ ಭಾಗದಲ್ಲಿ ಭಾರಿ ಶೀತ ಮತ್ತು ನೆಗಡಿ ಕಾಣಿಸಿಕೊಂಡಿತು. ಬಹುಶಃ ಅವರು ಮತ್ತೊಮ್ಮೆ ನ್ಯುಮೋನಿಯಾಕ್ಕೆ ತುತ್ತಾಗಿರಬಹುದು ಎಂದೇ ಕುಟುಂಬದವರು ಭಾವಿಸಿದ್ದರು.
ನಾವು ಯಾವುದೇ ವಿದೇಶ ಪ್ರವಾಸ ಮಾಡಿರಲಿಲ್ಲ. ಆದರೂ ಅವರಲ್ಲಿ ಕಾಣಿಸಿಕೊಂಡ ಕೆಮ್ಮ ಮತ್ತು ಶೀತವನ್ನು ಗಮನಿಸಿದಾಗ ಅದು ಕೋವಿಡ್​ನ ಲಕ್ಷಣಗಳನ್ನು ಹೋಲುತ್ತಿತ್ತು. ಹಾಗಾಗಿ ಮಾ.29ರಂದು ನಾವು ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ದೆವು. ಅವರು ಸ್ಥಿತಿ ಗಂಭೀರವಾಗುತ್ತಲೇ ಅಂದೇ ರಾತ್ರಿ ಅವರಿಗೆ ವೆಂಟಿಲೇಟರ್​ ಹಾಕಲಾಯಿತು. ಮರುದಿನ ಅವರಿಗೆ ಕರೊನಾ ಸೋಂಕು ತಗುಲಿರುವುದು ಖಚಿತಪಟ್ಟಿತು. ಅಂದಿನಿಂದ ಅವರ ಜೀವನ್ಮರಣದ ಹೋರಾಟವೂ ಆರಂಭವಾಗಿತ್ತು ಎಂದು ನಿತಾಯ್​ದಾಸ್​ ಅವರ ಪತ್ನಿ ಅಪರಾಜಿತಾ ಮುಖರ್ಜಿ ಹೇಳಿದ್ದಾರೆ.
ಬಾಸುಮತಿ ಅಕ್ಕಿ ರಫ್ತುದಾರರಿಂದ 411 ಕೋಟಿ ರೂ. ಪಂಗನಾಮ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × 2 =
Remember me
