ಜೋಶಿಮಠ:“ಸುರಂಗದಿಂದ ಹೊರಬರುವಂತೆ ಜನರು ಕೂಗಿದ್ದು ಕೇಳಿಸಿತು. ಮರುಕ್ಷಣದಲ್ಲಿ ಮಣ್ಣು ತುಂಬಿದ ನೀರಿನ ಬೃಹತ್ ಅಲೆಯೊಂದು ನಮ್ಮತ್ತ ಅಪ್ಪಳಿಸಿತು….” ಎಂದು ತಪೋವನ್ ವಿದ್ಯುತ್ ಯೋಜನೆಯ ಕಾರ್ಮಿಕರಾದ ಲಾಲ್ ಬಹದೂರ್ ಹೇಳುತ್ತಾರೆ. ಇವರು ಉತ್ತರಾಖಂಡ ರಾಜ್ಯದ ಚಮೋಲಿ ಜಿಲ್ಲೆಯಲ್ಲಿ ಹಿಮಸ್ಫೋಟ ಮತ್ತು ತದನಂತರದ ಪ್ರವಾಹದಿಂದಾಗಿ ಭೂಮಿಯ ಕೆಳಗಿನ ಸುರಂಗವೊಂದರಲ್ಲಿ ಸಿಲುಕಿ ಹಾಕಿಕೊಂಡಿದ್ದ 12 ಜನ ಕಾರ್ಮಿಕರಲ್ಲಿ ಒಬ್ಬರು.
ಸುರಂಗದ ಮೇಲ್ಭಾಗಕ್ಕೆ ಜೋತುಹಾಕಿಕೊಂಡು ತಮ್ಮನ್ನು ತಾವೇ ರಕ್ಷಿಸಿಕೊಳ್ಳಲು ಯತ್ನಿಸಿದ ಈ ಕಾರ್ಮಿಕರು ತಾವು ಉಳಿಯಲು ಸಾಧ್ಯವಿಲ್ಲ ಎಂದು ಯೋಚಿಸುತ್ತಿರುವಾಗ, ಒಬ್ಬ ಕಾರ್ಮಿಕನ ಮೊಬೈಲ್ ಫೋನಿನಲ್ಲಿ ನೆಟ್​ವರ್ಕ್ ಇರುವುದು ತಿಳಿದಿದೆ. ಆ ಕೂಡಲೇ ಜನರಲ್ ಮ್ಯಾನೇಜರ್​ಗೆ ಕರೆ ಮಾಡಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಸ್ಥಾನಿಕ ಅಧಿಕಾರಿಗಳು ಇಂಡೋ-ಟಿಬೆಟನ್ ಬಾರ್ಡರ್ ಪೊಲೀಸ್(ಐಟಿಬಿಪಿ) ತಂಡವೊಂದನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಿದ್ದಾರೆ.
ಇದನ್ನೂ ಓದಿ:ಉತ್ತರಾಖಂಡದಲ್ಲಿ ಹಿಮಸ್ಫೋಟ- ಅಪಾಯದಂಚಿನಲ್ಲಿ ಶ್ರೀನಗರ, ಹರಿದ್ವಾರ, ರಿಷಿಕೇಶ ಪ್ರವಾಸಿತಾಣ
ಸುರಂಗದೊಳಗೆ 300 ಮೀಟರ್ ಆಳದಲ್ಲಿ ಸಿಕ್ಕಿಹಾಕಿಕೊಂಡಿದ್ದ ಈ ಕಾರ್ಮಿಕರನ್ನು ಐಟಿಬಿಪಿ ತಂಡವೊಂದು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಹಗ್ಗ, ಪುಲ್ಲಿ ಮತ್ತು ಕಾರ್ಬೈನರ್​ಗಳೊಂದಿಗೆ ಸಜ್ಜಾದ ಕಾರ್ಯಪಡೆಯು ಸೋಮವಾರ ಬೆಳಿಗ್ಗೆ 10 ಗಂಟೆಯಿಂದ 5 ಗಂಟೆವರೆಗೆ ನಡೆಸಿದ ಕಾರ್ಯಾಚರಣೆಯಲ್ಲಿ ಈ ಕಾರ್ಮಿಕರನ್ನು ರಕ್ಷಿಸಲಾಗಿದೆ. ಇದೀಗ ಘಟನಾ ಸ್ಥಳದಿಂದ 25 ಕಿಲೊಮೀಟರ್ ದೂರ ಇರುವ ಜೋಶಿಮಠದ ಐಟಿಬಿಪಿ ಆಸ್ಪತ್ರೆಯಲ್ಲಿ ಈ ಕಾರ್ಮಿಕರಿಗೆ ಪ್ರಥಮ ಚಿಕಿತ್ಸೆ ನೀಡಲಾಗುತ್ತಿದೆ.
ವೀಡಿಯೋ ಮೂಲಕ ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಮಿಕರು, ತಮ್ಮ ಪ್ರಾಣ ರಕ್ಷಿಸಿದ ಪೊಲೀಸರಿಗೆ ಕೃತಜ್ಞತೆ ಅರ್ಪಿಸಿದ್ದಾರೆ. ಪ್ರವಾಹದಲ್ಲಿ ಕೊಚ್ಚಿಹೋದ ರೈನಿ ಸೇತುವೆಯ ಆಚೆಗೆ ಒಂಭತ್ತು ಹಳ್ಳಿಗಳಿದ್ದು, ಐಟಿಬಿಪಿ ಚಾಪರ್​ಗಳಲ್ಲಿ ಆಹಾರದ ಪ್ಯಾಕೆಟ್​ಗಳನ್ನು ವಿತರಿಸಲಾಗುತ್ತಿದೆ.(ಏಜೆನ್ಸೀಸ್)
ಉತ್ತರಾಖಂಡ: ಹಿಮಸ್ಫೋಟಕ್ಕೆ ಸಿಲುಕಿದವರ ರಕ್ಷಣೆ ಮಾಡುವ ಮೈನವಿರೇಳಿಸುವ ವಿಡಿಯೋ ನೋಡಿ…
‘ದೇವರು ಎಲ್ಲೆಡೆ ಇರಲು ಸಾಧ್ಯವಿಲ್ಲ, ಅದಕ್ಕೇ ಪೊಲೀಸರನ್ನು ಮಾಡಿದ್ದಾನೆ ‘!


ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:two × 4 =
Remember me
