ಕೊಟ್ಟಾಯಂ:ಮಳೆಯಿಂದ ತುಂಬಿದ್ದ ಕೆರೆಗಳು ಹಾಗೂ ಬಾವಿಗಳು ಬಿರು ಬೇಸಿಗೆಗೆ ಬತ್ತಿ ಹೋಗುತ್ತಿವೆ. ಬರದ ಆತಂಕದ ಜತೆಗೆ ಕುಡಿಯುವ ನೀರಿನ ಕೊರತೆಯ ಆಘಾತ ಜನರಲ್ಲಿ ಕಾಡುತ್ತಿದೆ. ಇದರ ನಡುವೆ ಕೇರಳದ ಕೊಟ್ಟಾಯಂ ಜಿಲ್ಲೆಯಲ್ಲಿರುವ ಈ ಬಾವಿ ನಿಗೂಢತೆಗೆ ಸಾಕ್ಷಿಯಾಗಿದ್ದು, ಎಲ್ಲರ ಹುಬ್ಬೇರಿಸಿದೆ.
ನೀರಿನ ತೆರಿಗೆ ಇಲ್ಲಹೌದು, 500 ವರ್ಷಗಳ ಹಿಂದೆ ಥೆಕ್ಕುಂಕುರ್​ ರಾಜ ಮನೆತನದಲ್ಲಿ ಕಮಲನೀರಜಿ ಹಸರಿನ ಮ್ಯಾಜಿಕಲ್​ ಬಾವಿ ನಿರ್ಮಾಣ ಮಾಡಲಾಗಿದೆ. 2023ರಲ್ಲೂ ಸಮರ್ಪಕವಾದ ನೀರು ಪೂರೈಸುವ ಮೂಲಕ ಈ ಬಾವಿ 300 ಕುಟುಂಬಗಳ ಉಳಿವಿಗೆ ಆಸರೆಯಾಗಿದೆ. ವಾರ್ಡ್​ನ ಜನರಿಗೆ ಯಾವುದೇ ಮೀಟರ್ ಗೇಜ್ ಇಲ್ಲ, ನೀರಿನ ತೆರಿಗೆಯೂ ಇಲ್ಲ. ವಾರ್ಡ್ ಸಮಿತಿಯು ತಂಕಮ್ಮ ಅವರನ್ನು ಬಾವಿ ನೋಡಿಕೊಳ್ಳಲು ನಿಯೋಜಿಸಿದೆ. ವಾರ್ಡಿನ ಪ್ರತಿ ಮನೆಯು ತಂಕಮ್ಮಗೆ ತಿಂಗಳಿಗೆ ಇಂತಿಷ್ಟು ಹಣವನ್ನು ನೀಡುತ್ತದೆ. ಕುತೂಹಲದ ಸಂಗತಿಯೆಂದರೆ, ಈ ಭಾಗದ ಅನೇಕ ಮನೆಗಳಿಗೆ ಸರಿಯಾದ ನೀರಿನ ಸಂಪರ್ಕವಿಲ್ಲ. ಹೀಗಾಗಿ ಅವರು ಕಮಲನೀರಜಿಯನ್ನು ಅವಲಂಬಿಸಿದ್ದಾರೆ.
ಇದನ್ನೂ ಓದಿ:ಬಿಜೆಪಿ ಕಚೇರಿಯಿಂದ ಜಗದೀಶ್ ಶೆಟ್ಟರ್ ಭಾವಚಿತ್ರ ತೆರವು
ಸಾಮಾನ್ಯ ಜನರಿಂದಲೇ ನಿಯಂತ್ರಣಈ ಕೊಳವು ಕೊಟ್ಟಾಯಂ ಕಾರ್ಪೊರೇಶನ್‌ನ ವಿದ್ಯುತ್ ನಿಯಂತ್ರಣಕ್ಕೆ ಬರುತ್ತದೆ. ಆದರೆ, ಈ ಮ್ಯಾಜಿಕಲ್​ ಬಾವಿಯನ್ನು ವಾರ್ಡ್ ನಂ 40ರ ಜನರು ನಿಯಂತ್ರಿಸುತ್ತಿದ್ದಾರೆ. ಪ್ರತಿದಿನ ಬೆಳಿಗ್ಗೆ 6.30ಕ್ಕೆ ತಂಕಮ್ಮ ಮೋಟಾರ್ ವಾಲ್ವ್ ತೆರೆಯುತ್ತಾರೆ. ಕುನ್ನುಂಪುರಂ ಸೇರಿದಂತೆ ಪ್ರದೇಶಗಳ ಮೂಲಕ ಬಾವಿಯ ನೀರು ಹರಿಯುತ್ತದೆ. ಮಧ್ಯಾಹ್ನದ ವೇಳೆಗೆ ಇತರೆ ಪ್ರದೇಶಗಳಿಗೆ ನೀರು ಹರಿಸಲಾಗುತ್ತದೆ. ಇಲ್ಲಿನ ಬಹುತೇಕ ಎಲ್ಲ ಮನೆಗಳು ಬಾವಿಯೊಂದಿಗೆ ಪೈಪ್ ಸಂಪರ್ಕ ಪಡೆದಿವೆ.
ಇಂದಿಗೂ ರಹಸ್ಯಈ ಬಾವಿಯು ಈ ಹಿಂದೆ ಪರಪನ್ನತ್ ಅರಮನೆಯ ಭಾಗವಾಗಿತ್ತು. ಬಾವಿಯ ಒಳಭಾಗವನ್ನು ಕಮಲದ 13 ದಳಗಳನ್ನು ಹೋಲುವಂತೆ ಕೆತ್ತಲಾಗಿದೆ. ನಿರ್ಮಾಣದ ಮೇಲೆ ಕೆಂಪು ಕಲ್ಲುಗಳಲ್ಲಿ ನಿರ್ಮಿಸಲಾಗಿದ್ದು, ಅದು ಅಪ್ರತಿಮ ಬಾಳಿಕೆ ನೀಡುತ್ತದೆ. ತೊಂಬತ್ತರ ದಶಕದಲ್ಲಿ ಅರಮನೆಯು ಬಾವಿಯಿಂದ ನೀರನ್ನು ಹರಿಸುವ ಅಧಿಕಾರವನ್ನು ನಟ್ಟಕೊಂ ಪಂಚಾಯತ್‌ಗೆ ನೀಡಿತು. ಬಳಿಕ ಪಂಚಾಯಿತಿಯು ನಿಗಮದೊಂದಿಗೆ ವಿಲೀನಗೊಂಡಾಗ, ನಿಯಂತ್ರಣ ಅದರ ಸುಪರ್ದಿಗೆ ಬಂದಿತು. ಬೇಸಿಗೆಯ ಯಾವುದೇ ಸುಡುವ ವಾತಾವರಣದಲ್ಲಿ, ಬಾವಿಯು ಎಂದಿಗೂ ಬತ್ತುವುದಿಲ್ಲ. ಇದು ಇಂದಿಗೂ ಎಲ್ಲರಿಗೂ ರಹಸ್ಯವಾಗಿ ಉಳಿದಿದೆ. ಕೊಳದಿಂದ ನೀರಿನ ಸೇವೆಯು ವಾರ್ಡ್ ವ್ಯಾಪ್ತಿಯಲ್ಲಿ ಮೂರು ಕಿಲೋಮೀಟರ್ ವರೆಗೆ ವಿಸ್ತರಿಸುತ್ತದೆ.(ಏಜೆನ್ಸೀಸ್​)
ಎಚ್​.ಡಿ.ರೇವಣ್ಣ ನಾಮಪತ್ರ ಸಲ್ಲಿಕೆ; ಪತ್ನಿ ಭವಾನಿ ಬಳಿ ಇದೆ ಕೆಜಿಗಟ್ಟಲೆ ಬೆಳ್ಳಿ-ಬಂಗಾರ

ರಾಮದಾಸ್ ಕೂಡ ಬಿಜೆಪಿಗೆ ರಾಜೀನಾಮೆ?; ಮನೆಗೆ ಬಂದ ಸಂಸದ-ಅಭ್ಯರ್ಥಿಯನ್ನು ಭೇಟಿಯಾಗದೆ ವಾಪಸ್ ಕಳಿಸಿದ್ರು!

ರೈಸ್​ ಪುಲ್ಲಿಂಗ್​ ಮೆಷಿನ್​ ಹೆಸರಲ್ಲಿ ಕೋಟ್ಯಂತರ ರೂಪಾಯಿ ವಂಚನೆ; ಆರೋಪಿಗಳ ಬಂಧನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:15 − eight =
Remember me
