ವ್ಯಾಟಿಕನ್​ ಸಿಟಿ(ಇಟಲಿ):ಜಿ-20 ಶೃಂಗಸಭೆಯಲ್ಲಿ ಪಾಲ್ಗೊಳ್ಳಲೆಂದು ಇಟಲಿ​ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್​ ನಗರದಲ್ಲಿ ಕ್ರೈಸ್ತ ಧರ್ಮದ ಪರಮೋಚ್ಛ ಗುರು ಪೋಪ್​ ಫ್ರಾನ್ಸಿಸ್​ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಕ್ಯಾಥೋಲಿಕ್​ ಚರ್ಚ್​ನ ಮುಖ್ಯಸ್ಥರಾಗಿರುವ ಪೋಪ್​ ಫ್ರಾನ್ಸಿಸ್​ ಅವರನ್ನ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿಯಾಗಿದ್ದು ಇದೇ ಮೊದಲು. ಜಗತ್ತಿನಲ್ಲಿ ಶಾಂತಿ ಮತ್ತು ನೆಮ್ಮದಿ, ಬಡತನ ನಿರ್ಮೂಲನೆ, ಉತ್ತಮ ಜೀವನ ನಿರ್ವಹಣೆ ಕುರಿತು ಪೋಪ್​ ಫ್ರಾನ್ಸಿಸ್ ಮತ್ತು ನರೇಂದ್ರ ಮೋದಿ ಇಬ್ಬರೂ ಸುಮಾರು 1 ತಾಸು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.
ಪೋಪ್​ ಫ್ರಾನ್ಸಿಸ್ ಅವರ ಭೇಟಿ ಬಳಿಕ ಫೋಟೋಗಳನ್ನು ಟ್ವಿಟರ್​ ಹಂಚಿಕೊಂಡಿರುವ ನರೇಂದ್ರ ಮೋದಿ, ಪೋಪ್​ ಫ್ರಾನ್ಸಿಸ್​ ಅವರ ಭೇಟಿ ಅತ್ಯಂತ ಆತ್ಮೀಯವಾಗಿತ್ತು. ಅವರೊಂದಿಗೆ ಕೆಲವು ಮಹತ್ತರ ವಿಚಾರಗಳನ್ನ ಚರ್ಚಿಸಲು ಅವಕಾಶ ಸಿಕ್ಕಿತು. ಅವರನ್ನು ಭಾರತಕ್ಕೆ ಆಹ್ವಾನಿಸಲಾಗಿದೆ ಎಂದು ಟ್ವೀಟ್​ ಮಾಡಿದ್ದಾರೆ.
Had a very warm meeting with Pope Francis. I had the opportunity to discuss a wide range of issues with him and also invited him to visit India.@Pontifexpic.twitter.com/QP0If1uJAC
— Narendra Modi (@narendramodi)October 30, 2021

ರೋಮ್​ನಲ್ಲಿ ನಡೆಯುತ್ತಿರುವ ಜಿ-20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರವೇ ಇಟಲಿಗೆ ತೆರಳಿದ್ದಾರೆ. ಪ್ರಧಾನಿ ಜತೆ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ಡೊಭಾಲ್​ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್​ ನಿಯೋಗ ಇದೆ.
ರೋಮ್​ನ ಕ್ಯಾಥೋಲಿಕ್​ ಚರ್ಚ್​​ನ ಪ್ರಧಾನ ಕಚೇರಿ ವ್ಯಾಟಿಕನ್​ ಸಿಟಿಯಲ್ಲಿದೆ. ಈ ಸಿಟಿ ರೋಮ್​ನಿಂದ ಸುತ್ತುವರಿಯಲ್ಪಟ್ಟ ರಾಜಧಾನಿ.
ಸಾವಿಗೂ ಮುನ್ನಾ ಪುನೀತ್ ಕರೆ ಮಾಡಿದ್ದು ಯಾರಿಗೆ? ಅದೆಲ್ಲವೂ ಕೊನೆಯಾಗಿಯೇ ಉಳಿಯಿತಲ್ಲ…

ಪುನೀತ್​ ಶಾಲೆ ಮೆಟ್ಟಿಲು ಹತ್ತಿದವರಲ್ಲ! ಅಚ್ಚರಿ ಮೂಡಿಸುತ್ತೆ ಈ ವಿಷ್ಯ

ಹೆಸರು ಬದಲಾಯಿಸಿದ್ರೂ ವಿಧಿಯಾಟ ಬೇರೆಯೇ ಇತ್ತು, ಪುನೀತ್ ಅಲ್ಪಾವಧಿಗೆ ಹೋಗ್ಬಿಟ್ರು..!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 5 =
Remember me
