ಬೆಂಗಳೂರು:ಕೊಮ್ಮಘಟದಲ್ಲಿ ನಡೆಯುತ್ತಿರುವ ಬೃಹತ್​ ಸಮಾವೇಶದಲ್ಲಿ ಕನ್ನಡದಲ್ಲೇ ಮಾತು ಆರಂಭಿಸಿದ ಪ್ರಧಾನಿ ನರೇಂದ್ರ ಮೋದಿ, ‘ಕರುನಾಡ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ಬೆಂಗಳೂರಿನ ಮಹಾ ಜನತೆಗೆ ವಿಶೇಷ ಧನ್ಯವಾದ. ಕರ್ನಾಟಕದ ಪಾಲಿಗೆ ಇಂದು ಮಹತ್ವದ ದಿನ. ಇಂದು ಹಲವಾರು ಮೂಲಭೂತ ಸೌಕರ್ಯವನ್ನ ಜಾರಿಗೊಳಿಸಲು ನನಗೆ ಸಂತೋಷ ಆಗುತ್ತೆ…’ ಎಂದರು.
ಯೋಗ ದಿನಾಚಾರಣೆ ಹಿನ್ನೆಲೆ ಕರ್ನಾಟಕಕ್ಕೆ ಸೋಮವಾರ ರಾಜ್ಯರಾಜಧಾನಿಗೆ ಆಗಮಿಸಿರುವ ನರೇಂದ್ರ ಮೋದಿ ಅವರು ಸಾವಿರಾರು ಕೋಟಿ ಮೊತ್ತದ ಯೋಜನೆಗಳಿಗೆ ಚಾಲನೆ ನೀಡಿದರು. ಬಳಿಕ ಸಮಾವೇಶದಲ್ಲಿ ಸಹಸ್ರಾರು ಜನರನ್ನು ಉದ್ದೇಶಿಸಿ ಮಾತನಾಡಿದರು. ಕನ್ನಡದಲ್ಲಿ ಭಾಷಣ ಆರಂಭಿಸಿದ ಮೊದಿ, ಕನ್ನಡದಲ್ಲೇ ನಮಸ್ಕಾರ ಎನ್ನುತ್ತಾ ಭಾಷಣ ಮುಗಿಸಿದರು. ಮಧ್ಯೆ ಹಿಂದಿಯಲ್ಲಿ ಮಾತನಾಡುತ್ತಾ ಬೆಂಗಳೂರನ್ನ ಹಾಡಿ ಹೊಗಳಿದರು.
‘ಡಬಲ್ ಇಂಜಿನ್ ಸರ್ಕಾರ ಕರ್ನಾಟಕದ ವಿಕಾಸದ ಭರವಸೆ ನೀಡಿದೆ. ಅದಕ್ಕೆ ಇಂದು ಮತ್ತೊಮ್ಮೆ ಸಾಕ್ಷಿಯಾಗಿದೆ. ಹೈಯರ್ ಎಜುಕೇಷನ್, ಸ್ಕಿಲ್​ ಡೆವಲಪ್​ಮೆಂಟ್, ರೈಲು ಸಂಪರ್ಕ ಯೋಜನೆಗೆ ಶಕ್ತಿ ತುಂಬಲಿದ್ದೇವೆ. ಕರ್ನಾಟಕದಲ್ಲಿ ವಿಕಾಸ ಯಾತ್ರೆಗೆ ಚಾಲನೆ ನೀಡಿದ್ದೇವೆ. ಕರ್ನಾಟಕದಲ್ಲಿ ಹಲವು ಮಹತ್ತರ ಅಭಿವೃದ್ಧಿ ಯೋಜನೆಗಳಿಗೆ ಜಾರಿ ನೀಡುವುದು ನನಗೆ ಖುಷಿಯಾಗ್ತಿದೆ. ಕರ್ನಾಟಕದ ಯುವಕರು, ಮಧ್ಯಮ ವರ್ಗದವರು, ಮಹಿಳೆಯರಿಗೆ ನವ ಸುವಿಧಾ ನೀಡುತ್ತೇವೆ. ಬೆಂಗಳೂರು ದೇಶದ ಲಕ್ಷಾಂತರ ಯುವಕರ ಕನಸಿನ ನಗರ. ಬೆಂಗಳೂರಿನ ಅಭಿವೃದ್ಧಿ ನನ್ನ ಕನಸು. ಬೆಂಗಳೂರಿನ ಸಹೋದರ-ಸಹೋದರಿಯರಿಗೆ ನನ್ನ ನಮಸ್ಕಾರ. ದೇಶಕ್ಕೆ ಬೆಂಗಳೂರು ಅಂದ್ರೆ ಭಾವನಾತ್ಮಕ ಸಂಬಂಧವಿದೆ ಎಂದು ಪ್ರಧಾನಿ ಹೇಳುತ್ತಿದ್ದಂತೆ ‘ಮೋದಿ.. ಮೋದಿ..’ ಎಂಬ ಘೋಷಣೆ ಸಭಿಕರಿಂದ ಮೊಳಗಿತು.
ಕರೊನಾ ವೇಳೆ ಬೆಂಗಳೂರಿನಲ್ಲಿ ಇರುವ ನಮ್ಮ ಯುವ ಸಮೂಹ ಉತ್ತಮ ಸೇವಾ ಕಾರ್ಯ ಮಾಡಿದ್ದಾರೆ. ಬೆಂಗಳೂರಿಗೆ ಜನರ ಮನಸ್ಥಿತಿ ಬದಲಾಯಿಸುವ ಶಕ್ತಿ ಇದೆ. ಜಗತ್ತಿನ‌ ಮುಂಚೂಣಿ ನಗರಗಳಲ್ಲಿ ಬೆಂಗಳೂರೂ ಒಂದು. ಉದ್ಯೋಗ ಸೃಷ್ಟಿ, ನವ್ಯೋದ್ಯಮಗಳ ಸೃಷ್ಟಿ‌‌ ಮಾಡುವ ನಗರ’ ಎಂದು ಹಾಡಿಹೊಗಳಿದ ಮೋದಿ, ಕೇಂದ್ರದಿಂದ ಬೆಂಗಳೂರು ಅಭಿವೃದ್ಧಿಗೆ ಇನ್ನಷ್ಟು ಉತ್ತೇಜನ ಕೊಡಲಾಗ್ತಿದೆ. ಬೆಂಗಳೂರಿನ ಸಂಚಾರ ದಟ್ಟಣೆ ಇಳಿಸಲು ಹಲವು ಯೋಜನೆ ಕೊಡಲಾಗಿದೆ. ಸಂಚಾರ ದಟ್ಡಣೆಯಿಂದ ಮುಕ್ತಿ ಕೊಡಲು ರೈಲು, ರಸ್ತೆ, ಮೂಲಸೌಕರ್ಯ ಹೆಚ್ಚಿಸಿದ್ದೇವೆ. ಬೆಂಗಳೂರಿಗರ ಎಲ್ಲ ಕನಸುಗಳನ್ನು ನನಸು ಮಾಡಲು ನಾವು ಬದ್ಧರಾಗಿದ್ಧೇವೆ’ ಎಂದರು. ಕೊನೆಗೆ ಕನ್ನಡದಲ್ಲೇ ‘ನಮಸ್ಕಾರ’ ಎನ್ನುತ್ತಾ ಭಾಷಣ ಮುಗಿಸಿದರು.
ಬೆಂಗಳೂರಲ್ಲಿ ಮೋದಿ ಮೇನಿಯಾ: ರಸ್ತೆಯುದ್ದಕ್ಕೂ ಜೈಕಾರ

ರಾಜ್ಯದ ಎಲ್ಲ ಶಾಲೆಯಲ್ಲೂ ಯೋಗ ದಿನಾಚರಣೆ: ನಾಳೆ ಅರ್ಧ ದಿನ ಮಾತ್ರ ತರಗತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × five =
Remember me
