ಬೆಂಗಳೂರು:ವಿದೇಶ ಪ್ರವಾಸದಿಂದ ಮರಳಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಗುರುವಾರ ಮಧ್ಯಾಹ್ನ ಹೈದರಾಬಾದ್​ಗೆ ಬಂದಿಳಿದರೆ, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಬೆಂಗಳೂರಿಗೆ ದೌಡಾಯಿಸಿದರು.
ಮೋದಿ ಅವರನ್ನು ಸ್ವಾಗತಿಸುವ ಬದಲು ಕರ್ನಾಟಕಕ್ಕೆ ಚಂದ್ರಶೇಖರ ರಾವ್ ಬಂದದ್ದು ತೆಲಂಗಾಣ ರಾಜಕೀಯ ರಂಗದಲ್ಲಿ ಬಿಸಿ ಚರ್ಚೆಗೆ ಗ್ರಾಸವಾಗಿದೆ. ಮೋದಿ ಅವರ ಭೇಟಿ ತಪ್ಪಿಸಿಕೊಳ್ಳುತ್ತಿರುವುದು ಇದು ಮೂರನೇ ಬಾರಿಯಾಗಿದ್ದು, ತೆಲಂಗಾಣ ಪ್ರತಿಪಕ್ಷ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಕೆಳಮಟ್ಟದ ರಾಜಕಾರಣವೆಂದು ಹರಿಹಾಯ್ದಿದೆ.
ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಪದ್ಮನಾಭ ನಗರ ನಿವಾಸಕ್ಕೆ ಆಗಮಿಸಿದ ಕೆಸಿಆರ್, ದೇವೇಗೌಡ ಹಾಗೂ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಜತೆಗೆ ಮಧ್ಯಾಹ್ನದ ಭೋಜನದ ಬಳಿಕ‌ ದೇಶದ‌ ಪ್ರಸ್ತುತ‌ ರಾಜಕೀಯ ವಿದ್ಯಮಾನ, ತೃತೀಯ ರಂಗಕ್ಕೆ ಚಾಲನೆ ನೀಡುವ ಅಗತ್ಯತೆ ಕುರಿತು ಚರ್ಚಿಸಿದರು ಎಂದು ಮೂಲಗಳು ತಿಳಿಸಿವೆ.

ಉದ್ದೇಶಪೂರ್ವಕ ವಿಳಂಬ?:ಮೋದಿಯವರು ಹೈದರಾಬಾದ್​ನ ಇಂಡಿಯನ್ ಬ್ಯುಸಿನೆಸ್‌ ಸ್ಕೂಲ್ ದ್ವಿಶತಮಾನೋತ್ಸವ, ಪದವಿ‌ ದಿನ ಹಾಗೂ ವಿದ್ವಾಂಸರಿಗೆ ಪದಕ ಪ್ರದಾನ‌ದ ಬಳಿಕ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಕಾರ್ಯಕ್ರಮ ಮುಗಿದು, ಮೋದಿ ದೆಹಲಿಗೆ ಮರು ಪ್ರಯಾಣ ಬೆಳೆಸುವ ತನಕ ಹೈದರಾಬಾದ್​ಗೆ ಕಾಲಿಡಬಾರದು ಎಂದು ಪ್ಲ್ಯಾನ್ ಮಾಡಿ ಕೆ.ಚಂದ್ರಶೇಖರ ರಾವ್, ಬೆಂಗಳೂರಿಗೆ ಉದ್ದೇಶಪೂರ್ವಕವಾಗಿ ತಡವಾಗಿ ಬಂದರು ಎಂಬ ಸಂಶಯ ವ್ಯಕ್ತವಾಗಿದೆ.

ಪೂರ್ವ ನಿಗದಿತ ವೇಳಾಪಟ್ಟಿ ಪ್ರಕಾರ ಹೈದರಾಬಾದ್​ನಿಂದ ವಿಶೇಷ ವಿಮಾನದಲ್ಲಿ ಹೊರಟು ಅಪರಾಹ್ನ 12ಕ್ಕೆ‌ ಬೆಂಗಳೂರಿನ ಎಚ್​ಎಎಲ್ ವಿಮಾನ ನಿಲ್ದಾಣದಲ್ಲಿ ಇಳಿದು, ಮಧ್ಯಾಹ್ನ ‌12.30ಕ್ಕೆ ದೇವೇಗೌಡರ ಮನೆಗೆ ಭೇಟಿ, ಮಾತುಕತೆ ಬಳಿಕ ಮಧ್ಯಾಹ್ನ ಮೂರಕ್ಕೆ ಹೈದರಾಬಾದ್​ಗೆ ಮರು ಪ್ರಯಾಣ ಬೆಳೆಸಬೇಕಿತ್ತು. ಆದರೆ ಒಂದು ತಾಸು ತಡವಾಗಿ ಮಧ್ಯಾಹ್ನ 1.30ಕ್ಕೆ ದೇವೇಗೌಡರ ನಿವಾಸಕ್ಕೆ ತೆಲಂಗಾಣ ಸಿಎಂ ಧಾವಿಸಿದರು. ಊಟದ ನಂತರ ಮಧ್ಯಾಹ್ನ 3.15 ಕಳೆದರೂ ಮಾತುಕತೆ ಮುಂದುವರಿದೇ‌ ಇತ್ತು. ಬಹುಶಃ ಮೋದಿಯವರು ಕಾರ್ಯಕ್ರಮ ಮುಗಿಸಿ ಹೈದರಾಬಾದ್​ನಿಂದ ಮರಳುತ್ತಿದ್ದಾರೆ ಎಂಬ ಸಂದೇಶಕ್ಕಾಗಿ ಕಾದು ಕು‌ಳಿತು, ದೇವೇಗೌಡರ ಜತೆಗಿನ ಮಾತುಕತೆಯನ್ನು ಚಂದ್ರಶೇಖರ ರಾವ್ ಅವಂಬಿಸಿದರು ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.
https://www.vijayavani.net/a-a-dk-suresh-about-ed-filed-a-chargesheet-against-kpcc-president-dks/
ಊಟ ಇಲ್ಲ ಎಂದಿದ್ದಕ್ಕೆ ಸಿಬ್ಬಂದಿಯನ್ನು ಕೂಡಿಹಾಕಿ ಡಾಬಾಕ್ಕೆ ಬೆಂಕಿ ಇಟ್ಟ ದುಷ್ಕರ್ಮಿಗಳು! ಕೊಪ್ಪಳದಲ್ಲಿ ಅಮಾನವೀಯ ಕೃತ್ಯ

ಈಕೆಗೆ ಲವರ್​ ಬೇಕು-ಮಗು ಬೇಡ, ವಿವಾಹಿತೆ ಜತೆಗಿನ ಲವ್ವಿಡವ್ವಿಗಾಗಿ ಯುವಕ ಹೀಗಾ ಮಾಡೋದು? ಇವರ ಕೃತ್ಯ ಕೇಳಿದ್ರೆ ಹಿಡಿಶಾಪ ಹಾಕ್ತೀರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × five =
Remember me
