ಗ್ವಾಲಿಯರ್​: ಸುಮಾರು 15 ವರ್ಷಗಳ ಹಿಂದೆ ಇದ್ದಕ್ಕಿದ್ದಂತೆ ಕಾಣೆಯಾಗಿದ್ದ ಪೊಲೀಸ್​ ಅಧಿಕಾರಿಯೊಬ್ಬರು, ಇದೀಗ ಪತ್ತೆಯಾಗಿದ್ದಾರೆ. ಮಧ್ಯಪ್ರದೇಶದ ಗ್ವಾಲಿಯರ್​ನ ಬೀದಿಯಲ್ಲಿ ಭಿಕ್ಷುಕನಾಗಿ ಅಲೆಯುತ್ತಿದ್ದ ಅವರನ್ನು ಅವರ ಹಳೆಯ ಸಹೋದ್ಯೋಗಿಗಳು ಗುರುತಿಸಿದ್ದಾರೆ.
ಇದನ್ನೂ ಓದಿ:ಸಿಡ್ನಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ ಆಟಗಾರರು
ಪೊಲೀಸ್​ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮನೀಶ್​ ಮಿಶ್ರಾ ಅವರು 2005ರಲ್ಲಿ ಕಾಣೆಯಾಗಿದ್ದರು. 1999ರಲ್ಲಿ ಪೊಲೀಸ್​ ಇಲಾಖೆಗೆ ಸೇರಿದ್ದ ಅವರಿಗೆ 2005ರಲ್ಲಿ ಮಾನಸಿಕ ಖಿನ್ನತೆ ಕಾಣಿಸಿಕೊಂಡಿತ್ತು. ಅವರ ಕುಟುಂಬಸ್ಥರು ಅನೇಕ ಸ್ಥಳಗಳಲ್ಲಿ ಚಿಕಿತ್ಸೆ ಕೊಡಿಸಿದರೂ ಯಾವುದೇ ಉಪಯೋಗವಾಗಿರಲಿಲ್ಲ. ಹೀಗಿರುವಾಗ ಒಂದು ದಿನ ಇದ್ದಕ್ಕಿದ್ದಂತೆ ಅವರು ಎಲ್ಲರನ್ನು ಬಿಟ್ಟು ದೂರಾಗಿದ್ದರು. ಅಂದಿನಿಂದ ಎಷ್ಟೇ ಹುಡುಕಿದರೂ ಅವರು ಸಿಕ್ಕಿರಲಿಲ್ಲ.
ಅಂದು ಮನೀಶ್​ ಅವರ ಸಹೋದ್ಯೋಗಿಗಳಾಗಿದ್ದ ರತ್ನೇಶ್​ ಸಿಂಗ್​ ತೋಮರ್​ ಮತ್ತು ವಿಜಯ್​ ಸಿಂಗ್​ ಬಹದ್ದೂರ್​ ಅವರು ಕಳೆದ ವಾರ ಗ್ವಾಲಿಯರ್​ನ ರಸ್ತೆಯಲ್ಲಿ ನಡೆದು ಹೋಗುತ್ತಿದ್ದರು. ಆಗ ಚಿಂದಿ ಬಟ್ಟೆ ತೊಟ್ಟಿದ್ದ ವ್ಯಕ್ತಿಯೊಬ್ಬ ನಡುಗುತ್ತಾ ಊಟಕ್ಕಾಗಿ ಬೇಡುತ್ತಿರುವುದು ಕಂಡಿದೆ. ಸೀದಾ ಆತನ ಬಳಿ ತೆರಳಿದ ಅವರು, ತಾವು ತೊಟ್ಟಿದ್ದ ಜಾಕೆಟ್​ ಅನ್ನು ಬಿಚ್ಚಿಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ತಿಳಿಸುವಾಗ ಆ ಭಿಕ್ಷುಕ ಇಬ್ಬರದ್ದೂ ಹೆಸರನ್ನಿಟ್ಟೇ ಮಾತನಾಡಿದ್ದಾನೆ. ಭಿಕ್ಷುಕನೊಬ್ಬ ತಮ್ಮ ಹೆಸರನ್ನು ಹೇಳಿದ್ದು ನೋಡಿ ಆಶ್ಚರ್ಯಗೊಂಡ ಅವರು ಸರಿಯಾಗಿ ಗಮನಿಸಿದಾಗ, ಆ ಭಿಕ್ಷುಕ ಕಳೆದು ಹೋಗಿದ್ದ ಮನೀಶ್​ ಎನ್ನುವುದು ಗೊತ್ತಾಗಿದೆ.
ಇದನ್ನೂ ಓದಿ:ಮುಹೂರ್ತ ಟ್ರೇಡಿಂಗ್​ನಲ್ಲಿ ಸಾರ್ವಕಾಲಿಕ ಎತ್ತರಕ್ಕೇರಿದ ಸೆನ್ಸೆಕ್ಸ್, ನಿಫ್ಟಿ
ಮನೀಶ್​ ಅವರನ್ನು ರತ್ನೇಶ್​ ಮತ್ತು ವಿಜಯ್​ ಅವರು ಎನ್​ಜಿಒ ಒಂದಕ್ಕೆ ಸೇರಿಸಿದ್ದಾರೆ. ಮನೀಶ್​ ಸಂಪೂರ್ಣವಾಗಿ ಚೇತರಿಸಿಕೊಳ್ಳುವಂತೆ ಮಾಡುತ್ತೇವೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ನನ್ನಪ್ಪನನ್ನು ಬಿಟ್ಟುಬಿಡಿ ಎಂದು ಪೊಲೀಸ್​ ಗಾಡಿಗೇ ತಲೆ ಚಚ್ಚಿಕೊಂಡ ಮಗಳು; ಮಗಳ ಪ್ರೀತಿಗೆ ಕರಗಿ ನೀರಾದ ಸಿಎಂ ಯೋಗಿ

19ನೇ ವಯಸ್ಸಿಗೇ ಮದುವೆಯಾದ ಕಿಂಗ್ಸ್​ 11 ಪಂಜಾಬ್​ ಆಟಗಾರ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:four + ten =
Remember me
