ಲಖನೌ:ಮಳೆ ಬಂದಾಗಲೆಲ್ಲಾ ರಸ್ತೆಯೆಲ್ಲಾ ಗುಂಡಿಗಳಿಂದ ತುಂಬಿರುತ್ತವೆ. ಎಷ್ಟೇ ಜಾಗಕರೂಕತೆ ವಹಿಸಿದರೂ ಕೆಲವೊಮ್ಮೆ ಅದರಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುವವರ ಸಂಖ್ಯೆಯೇನೂ ಕಮ್ಮಿಯಿಲ್ಲ.
ಸದ್ಯ ಇಲ್ಲೊಂದ ಬೆಚ್ಚಿ ಬೀಳಿಸುವ ದೃಶ್ಯ ಸೆರೆಯಾಗಿದೆ. ದ್ವಿಚಕ್ರ ವಾಹನದಲ್ಲಿ ತನ್ನ ಪತ್ನಿಯೊಂದಿಗೆ ರಸ್ತೆಯಲ್ಲಿ ಪಾರ್ಕಿಂಗ್​ ಮಾಡಲು ಪೇದೆಯೊಬ್ಬರು ಬರುತ್ತಾರೆ. ಮಳೆ ನೀರಿನಿಂದ ತುಂಬಿದ ರಸ್ತೆಯಲ್ಲಿ ಏನೂ ಕಾಣಿಸುವುದಿಲ್ಲ. ಅಲ್ಲೇ ಪಕ್ಕದಲ್ಲೇ ಇತರೆ ವಾಹನಗಳು ನಿಂತಿರುತ್ತವೆ. ಅದೇ ಭರವಸೆ ಮೇಲೆ ಹೊರಟ ಈ ಪೇದೆ ಬೈಕ್​​ ಅನ್ನು ಮುಂದೆ ತರುತ್ತಾರೆ.ಆಗಲೇ ಗೊತ್ತಾಗಿದ್ದು, ಇಲ್ಲಿ ಡ್ರೈನೇಜ್​ ಗುಂಡಿ ಇದೆ ಎಂದು. ಬೈಕ್​ ಸಮೇತ ದಂಪತಿ ಮುಳುಗುತ್ತಾರೆ. ಇದನ್ನು ನೋಡಿದ ತಕ್ಷಣವೇ ಸ್ಥಳೀಯರು ಧಾವಿಸಿ ಬಂದು. ಇಬ್ಬರನ್ನೂ ರಕ್ಷಿಸಿದ್ದಾರೆ. ಸದ್ಯ ಇಬ್ಬರಿಗೂ ಸಣ್ಣ-ಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
https://twitter.com/suryapsingh_IAS/status/1538380011471634432?s=20&t=kCX_De5hrGhTnHjfQhvjHw
ಸದ್ಯ ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಅಲಿಗಢದಲ್ಲಿ. ಈ ವಿಡಿಯೋವನ್ನು ಶೇರ್​ ಮಾಡಿಕೊಂಡಿರುವ ನಿವೃತ್ತ ಐಎಎಸ್​ ಅಧಿಕಾರಿ ಸೂರ್ಯ ಪ್ರತಾಪ್​ ಸಿಂಗ್​, ಅಲಿಗಢದ ಸ್ಮಾರ್ಟ್​ ಸಿಟಿಯ ಗೌರವ ಯಾರಿಗೆ ನೀಡಬೇಕು ಎಂದು ಟ್ವೀಟ್​ ಮಾಡಿದ್ದಾರೆ.(ಏಜೆನ್ಸೀಸ್​)
VIDEO: ರಾಷ್ಟ್ರ ರಾಜಧಾನಿಯಲ್ಲಿ ಹಿಂದೆಂದೂ ಕಾಣದ ಟ್ರಾಫಿಕ್​ ಜಾಮ್​​! ಕಾರಣವೇನು ಗೊತ್ತಾ?

ಬಹುಮತ ಕಳೆದುಕೊಂಡ ​​ಅಧ್ಯಕ್ಷ ಇಮ್ಯಾನ್ಯುಯಲ್​: ಅತಂತ್ರ ಸ್ಥಿತಿಯಲ್ಲಿ ಫ್ರಾನ್ಸ್​ ಸರ್ಕಾರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 2 =
Remember me
