ನವದೆಹಲಿ:ಸದ್ಯ ಈಗ ಜಗತ್ತಿನಾದ್ಯಂತ ಇರುವ ಕುತೂಹಲ ಒಂದೇ.. ಅದು ಕರೊನಾ ಲಸಿಕೆ ಕುರಿತಾದದ್ದು. ಕೋವಿಡ್​ 19 ವ್ಯಾಕ್ಸಿನ್​ ಯಾರು ಕಂಡು ಹಿಡಿಯುತ್ತಾರೆ, ಯಾವಾಗ ಕಂಡು ಹಿಡಿಯುತ್ತಾರೆ ಎಂಬುದನ್ನು ಜಗತ್ತೇ ಕೌತುಕದಿಂದ ನೋಡುತ್ತಿದೆ.
ಅದಕ್ಕೆ ಪೂರಕವಾಗಿ ಭಾರತವೂ ಸೇರಿ ಜಗತ್ತಿನ ಹಲವೆಡೆ ಆ ಕುರಿತ ಸಂಶೋಧನೆಗಳು, ಟ್ರಯಲ್​ಗಳು ಕೂಡ ನಡೆಯುತ್ತಿವೆ. ಕರೊನಾ ಲಸಿಕೆ ಸಂಶೋಧನೆ ಸಂಬಂಧದ ಬೆಳವಣಿಗೆಗಳನ್ನು ಜನರು ಬಹಳ ನಿರೀಕ್ಷೆಯಿಂದ ಗಮನಿಸುತ್ತಿದ್ದಾರೆ. ಹೀಗಾಗಿ ಅದನ್ನು ಜನರಿಗೆ ನೀಡಬೇಕಾದ ಅಗತ್ಯವಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್​ ಅಭಿಪ್ರಾಯ ಪಟ್ಟಿದ್ದಾರೆ.
ಹೀಗಾಗಿ ಕರೊನಾ ಲಸಿಕೆ ಕುರಿತ ಎಲ್ಲ ಮಾಹಿತಿ, ಅಪ್​ಡೇಟ್​ಗಳನ್ನು ಒಳಗೊಂಡ ಪೋರ್ಟಲ್​ವೊಂದನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ದೇಶದಲ್ಲಿ ಮಾತ್ರವಲ್ಲ ಜಾಗತಿಕವಾಗಿ ನಡೆಯುತ್ತಿರುವ ಕರೊನಾ ಲಸಿಕೆ ಕುರಿತ ಎಲ್ಲ ಮಾಹಿತಿ ನಿಯಮಿತವಾಗಿ ಈ ವೆಬ್​ಸೈಟ್​ನಲ್ಲಿ ಲಭಿಸಲಿದೆ ಎಂದು ಅವರು ತಿಳಿಸಿದ್ದಾರೆ. (ಏಜೆನ್ಸೀಸ್​)
ಪೋರ್ಟಲ್​ ವಿಳಾಸ ಹೀಗಿದೆ..https://vaccine.icmr.org.in
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − one =
Remember me
