ಪಾಟ್ನಾ:ಲಂಡನ್​ ನಿವಾಸಿ, ಜೆಡಿಯುನ ಮಾಜಿ ಎಮ್​ಎಲ್​ಸಿಯ ಮಗಳು ಪ್ರಿಯಾ ಚೌಧರಿ ತಾನು ಬಿಹಾರ ವಿಧಾನ ಸಭಾ ಚುನಾವಣೆಯ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ನಿನ್ನೆ (ಮಾ.8) ಪತ್ರಿಕೆಗಳಲ್ಲಿ ಜಾಹಿರಾತು ನೀಡಿದ್ದ ಆಕೆಯ ಪೋಸ್ಟರ್​ ಇದೀಗ ಪಾಟ್ನಾದಲ್ಲಿ ತಲೆ ಎತ್ತಿ ನಿಂತಿದೆ.
ಜೆಡಿಯುನ ಮಾಜಿ ಎಮ್​ಎಲ್​ಸಿ ವಿನೋದ್​ ಚೌಧರಿ ಅವರ ಮಗಳು ಪ್ರಿಯಾ ಚೌಧರಿ ಲಂಡನ್​ನಲ್ಲಿ ವಾಸಿಸುತ್ತಿದ್ದಾರೆ. ಪಬ್ಲಿಕ್​ ಅಡ್ಮಿನಿಸ್ಟ್ರೇಷನ್​ ವಿಷಯದಲ್ಲಿ ಉನ್ನತ ಶಿಕ್ಷಣ ಪಡೆದುಕೊಂಡಿರುವ ಆಕೆ ಈ ಬಾರಿ ಬಿಹಾರದ ವಿಧಾನಸಭಾ ಚುನಾವಣೆಗೆ ತಾನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿಕೊಂಡಿದ್ದಾರೆ. ಬಿಹಾರವನ್ನು ಪ್ರೀತಿಸುವವರು, ರಾಜಕೀಯವನ್ನು ದ್ವೇಷಿಸುವವರು ನನ್ನ ಜತೆ ಸೇರಿ ಎನ್ನುವ ಜಾಹಿರಾತನ್ನು ಆಕೆ ನಿನ್ನೆ ಕೆಲ ರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದರು. ಇದೀಗ ಆಕೆ ಸಿಎಂ ಅಭ್ಯರ್ಥಿ ಎನ್ನುವ ಪೋಸ್ಟರ್ ಪಾಟ್ನಾ ನಗರದಲ್ಲಿ ಕಾಣಿಸಿಕೊಂಡಿದೆ.
ತನ್ನ ಮಗಳು ನೀಡಿರುವ ಜಾಹಿರಾತಿನ ಬಗ್ಗೆ ಮಾತನಾಡಿದ್ದ ವಿನೋದ್​ ಚೌಧರಿ, ಆಕೆಗೆ ಸ್ವಂತ ಬುದ್ಧಿ ಇದೆ. ಇದು ಅವಳ ನಿರ್ಧಾರ. ಒದು ವೇಳೆ ಆಕೆ ಪಕ್ಷದ ಹಿರಿಯ ಮುಖಂಡರುಗಳಿಗೇ ಸವಾಲೆಸೆದರೆ ಪಕ್ಷ ಖಂಡಿತವಾಗಿಯೂ ಆಕೆಗೆ ಬೆಂಬಲಿಸುವುದಿಲ್ಲ ಎಂದು ಹೇಳಿದ್ದರು.(ಏಜೆನ್ಸೀಸ್​)
ಲಂಡನ್​ ಮೂಲದ ಮಹಿಳೆ ಬಿಹಾರದ ಮುಖ್ಯಮಂತ್ರಿ ಅಭ್ಯರ್ಥಿ! ರಾಜಕೀಯವನ್ನು ದ್ವೇಷಿಸುವವರು ನನ್ನೊಂದಿಗಿರಿ ಎಂದ ಮಹಿಳೆ

VIDEO| ರ‍್ಯಾಪರ್​ ಆದ ಪೇದೆ; ಕಂಡ ಕಷ್ಟ, ಮುಂದಿನ ಗುರಿಯೇ ಆತನ ಸಾಹಿತ್ಯ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 1 =
Remember me
