ಕೊಲ್ಹಾಪುರ:ಅಸ್ಸಾಂ ಗರ್ಭವತಿ ಮಹಿಳೆಯನ್ನು ರಾಜಸ್ಥಾನದ ಇಬ್ಬರು ವ್ಯಕ್ತಿಗಳು ಅಪಹರಿಸಿ, ರೇಪ್​ ಮಾಡಿ, ಮದುವೆಯಾಗಿರುವ ವಿಚಿತ್ರ ಘಟನೆ ನಡೆದಿದೆ. ಇಷ್ಟೆಲ್ಲವಾದ ಮೇಲೆ ಅವರು ಮಹಿಳೆಯನ್ನು ಮಹಾರಾಷ್ಟ್ರದ ಕೊಲ್ಹಾಪುರಕ್ಕೆ ಕರೆತಂದು ಕೂಡಿ ಹಾಕಿದ್ದರು ಎನ್ನುವ ವಿಚಾರ ತಿಳಿದುಬಂದಿದೆ.
ಇದನ್ನೂ ಓದಿ:ಬೆಂಗಳೂರಿನ ಮಹಿಳಾ ವಿಜ್ಞಾನಿಗೆ ಫ್ರಾನ್ಸ್ ದೇಶದ ಅತ್ಯುನ್ನತ ಪುರಸ್ಕಾರ
ಮಹಿಳೆ ಆರು ತಿಂಗಳ ಗರ್ಭಿಣಿ. ಆಕೆಯನ್ನು ಅಸ್ಸಾಂನಿಂದ ಇಬ್ಬರು ವ್ಯಕ್ತಿಗಳು ಅಪಹರಿಸಿದ್ದಾರೆ. ಮಹಿಳೆ ಮತ್ತು ಆಕೆಯ ಮೂರು ವರ್ಷದ ಮಗಳಿಗೆ ಜ್ಯೂಸ್​ನಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟು ಅಪಹರಿಸಲಾಗಿದೆ. ಮಹಿಳೆಯನ್ನು ಅಸ್ಸಾಂನಿಂದ ರಾಜಸ್ಥಾನಕ್ಕೆ ಕರೆದೊಯ್ಯಲಾಗಿದ್ದು, ಅಲ್ಲಿ ಆಕೆಯ ಮೇಲೆ ಅತ್ಯಾಚಾರವೆಸಗಲಾಗಿದೆ. ಇಬ್ಬರು ಆರೋಪಿಗಳಲ್ಲಿ ಒಬ್ಬ ಆಕೆಯನ್ನು ಮದುವೆಯೂ ಆಗಿದ್ದಾನೆ. ನಾವು ಹೇಳಿದಂತೆ ಕೇಳದಿದ್ದರೆ ಮಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿ ಮದುವೆ ಮಾಡಿಕೊಳ್ಳಲಾಗಿದೆ.
ಇದನ್ನೂ ಓದಿ:ಸಂಭ್ರಮದ ಎಳ್ಳಮವಾಸ್ಯೆ ಆಚರಣೆ, ಹೊಲದಲ್ಲಿ ಚರಗ ಚೆಲ್ಲಿದ ಅನ್ನದಾತರು
ಮದುವೆಯಾದ ನಂತರ ಮಹಿಳೆಯನ್ನು ಮಹಾರಾಷ್ಟ್ರದ ಕೊಲ್ಹಾಪುರ ಸನಿಹದ ಹಳ್ಳಿಯೊಂದಕ್ಕೆ ಕರೆತರಲಾಗಿದ್ದು, ಅಲ್ಲಿ ಆಕೆಯೊಂದಿಗೆ ಇಬ್ಬರು ಆರೋಪಿಗಳು ಜೀವನ ನಡೆಸಲು ಆರಂಭಿಸಿದ್ದಾರೆ. ಇನ್ನೂ ಮೂರು ಸ್ನೇಹಿತರಿದ್ದಾರೆ, ಅವರೊಂದಿಗೆ ನೀನು ಮಲಗಬೇಕು ಎಂದೂ ಹೇಳಿದ್ದಾರೆ. ಇದೆಲ್ಲದರಿಂದ ತಪ್ಪಿಸಿಕೊಳ್ಳಲು ಕಾಯುತ್ತಿದ್ದ ಮಹಿಳೆ ಭಾನುವಾರದಂದು ಆರೋಪಿಗಳ ಕಣ್ಣು ತಪ್ಪಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ. ಕೊಲ್ಹಾಪುರ ಪೊಲೀಸ್​ ಠಾಣೆಗೆ ಬಂದು ದೂರು ನೀಡಿದ್ದಾಳೆ. ಇದೀಗ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಅವರನ್ನು ವಶಕ್ಕೆ ಪಡೆಯಲಾಗಿದೆ. ರಾಜಸ್ಥಾನದ ಆರೋಪಿಗಳು ಅಸ್ಸಾಂನ ಮಹಿಳೆಯನ್ನು ಅಪಹರಿಸಿ, ಮಹಾರಾಷ್ಟ್ರದಲ್ಲಿ ಜೀವನ ನಡೆಸಲು ಕಾರಣವೇನು ಎನ್ನುವುದು ತನಿಖೆಯಿಂದ ಹೊರಬರಬೇಕಿದೆ. (ಏಜೆನ್ಸೀಸ್​)
ಎಂಗೇಜ್ಮೆಂಟ್​ ಆದ್ಮೇಲೆ ಸೆಕ್ಸ್​ ಮಾಡಿ ನೀ ಬೇಡ ಎಂದ; ಪೊಲೀಸರ ಮೊರೆ ಹೋದ ಯುವತಿ

ಬಿಡುಗಡೆಯಾದ ಒಂದೇ ದಿನಕ್ಕೆ ‘ಮಾಸ್ಟರ್​’ ಚಿತ್ರಕ್ಕೆ ಇಂಥ ಗತಿ ಬರಬಾರದಿತ್ತು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × four =
Remember me
